Horoscope: ಇಂದಿನ ಕಾಲದಲ್ಲಿ ನಂಬಿಕಸ್ಥರು ಸಿಗೋದು ತುಂಬಾನೇ ಅಪರೂಪ. ಯಾಕಂದ್ರೆ ಇಂದಿನ ಕಾಲದಲ್ಲಿ ಸಂಬಂಧ ಬೆಳೆಸುವಾಗಲೂ, ದುಡ್ಡು ಆಸ್ತಿ, ಕಾರು, ಬಂಗಲೆ ಎಲ್ಲವನ್ನೂ ನೋಡಿಯೇ ಸಂಬಂಧ ಮಾಡುತ್ತಾರೆ. ಹುಡುಗ ಅಥವಾ ಹುಡುಗಿಯ ಗುಣ ಹೇಗಿದ್ದರೂ ನಡೆಯುತ್ತೆ. ಆದರೆ, ಹಣ, ಆಸ್ತಿ-ಪಾಸ್ತಿ, ಸೌಂದರ್ಯ ಇವೆಲ್ಲ ಇಲ್ಲದಿದ್ದರೂ, ಜೀವನದ್ಲಲಿ ನಿಯತ್ತಾಗಿರುವ, ನಂಬಿಕಸ್ಥರು ಅಂತ ಹೇಳಬಹುದಾದ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ.
ಮೇಷ: ಮೇಷ ರಾಶಿಯವರು ಅಂದುಕೊಂಡ ಕೆಲಸವನ್ನು ಮಾಡುವುದರಲ್ಲಿ ನಿಸ್ಸೀಮರು. ಎಷ್ಟೇ ಕಷ್ಟಪಟ್ಟಾದರೂ ಸರಿ ತಮ್ಮ ಜೀವನದ ಗುರಿಯನ್ನು ಸಾಧಿಸಿಯೇ ಸಾಧಿಸುತ್ತಾರೆ. ಜೊತೆಗೆ ಇವರ ಮೇಲೆ ಇಟ್ಟ ನಂಬಿಕೆಗೆ ಎಂದಿಗೂ ದ್ರೋಹ ಬಗೆಯುವುದಿಲ್ಲ. ಜೀವನ ಸಂಗಾತಿ ಮತ್ತು ಕುಟುಂಬಸ್ಥರಿಗೆ ಪ್ರೀತಿ, ಕಾಳಜಿ ತೋರುವ ಇವರು, ಅವರ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ.
ವೃಷಭ: ತಾಳ್ಮೆಗೆ ಇನ್ನೊಂದು ಹೆಸರು ಈ ವೃಷಭ ರಾಶಿಯವರು. ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ, ಬರೀ ತಮ್ಮವರಿಗಾಗಿ ಬದುಕುವ ವೃಷಭ ರಾಶಿಯವರು ನಿಜವಾಗಿಯೂ ನಂಬಿಕಸ್ತರು. ನಿಮ್ಮ ಜೀವನದಲ್ಲಿ ಯಾರಾದ್ರೂ ವೃಷಭ ರಾಶಿಯವರು ಇದ್ದರೆ, ಅವರನ್ನೆಂದೂ ಕಳೆದುಕೊಳ್ಳಬೇಡಿ. ಏಕೆಂದರೆ, ಇವರು ಒಮ್ಮೆ ಸಂಬಂಧ ನಿಭಾಯಿಸಿದರೆ, ಕೊನೆಯವರೆಗೂ ಆ ಸಂಬಂಧಕ್ಕೆ ಬೆಲೆ ಕೊಡುತ್ತಾರೆ.
ಕಟಕ: ಕಟಕ ರಾಶಿಯವರು ತಮ್ಮ ಹಿತಶತ್ರುಗಳಿಗೂ ಕೂಡ ಒಳ್ಳೆಯದನ್ನೇ ಬಯಸುತ್ತಾರೆ. ಹಾಗಾಗಿ ಇವರನ್ನು ಕಣ್ಣು ಮುಚ್ಚಿಕೊಂಡು ನಂಬಬಹುದು. ಎದುರಿಗಿರುವವರು ತಮ್ಮ ಒಳಿತನ್ನು ಬಯಸುತ್ತಿಲ್ಲವೆಂದು ಗೊತ್ತಿದ್ದರೂ, ಕಟಕ ರಾಶಿಯವರು ಅದನ್ನು ವಿರೋಧಿಸದೇ, ನಿಯತ್ತಿನಿಂದ ತಮ್ಮ ಕೆಲಸ ತಾವು ಮಾಡಿಕೊಂಡು ಹೋಗುತ್ತಾರೆ. ಮತ್ತು ತಮ್ಮನ್ನು ವಿರೋಧಿಸುವವರನ್ನನು ನೀನೇ ನೋಡಿಕೋ ದೇವರೇ ಎಂದು ಮುಂದುವರೆಯುತ್ತಾರೆ.
ವೃಶ್ಚಿಕ: ವೃಶ್ಚಿಕ ರಾಶಿಯವರ ಮಾತತು, ನಡತೆ ಎರಡೂ ಗಾಂಭೀರ್ಯದಿಂದಿರುತ್ತದೆ. ಆದರೆ ಇವರು ಎಂದಿಗೂ ಯಾರಿಗೂ ಮೋಸ ಮಾಡುವವರಲ್ಲ. ಇವರು ಹೆಚ್ಚು ಕೋಪ ಮಾಡಿಕೊಳ್ಳುತ್ತಾರೆ. ಮತ್ತು ಇವರ ಮಾತಿನಲ್ಲಿ ಸಾಫ್ಟ್‌ನೆಸ್ ಇರುವುದೇ ಇಲ್ಲ. ಆದರೆ ಇವರು ತಮ್ಮ ಮೇಲೆ ನಂಬಿಕೆ ಇರಿಸಿದವರ ನಂಬಿಕೆಯನ್ನು ಎಂದಿಗೂ ಮುರಿಯುವುದಿಲ್ಲ.