ಬ್ರಹ್ಮಕಮಲ ಹೇಗೆ ಉದ್ಭವವಾಯಿತು..? ಈ ಹೂವು ಅರಳಿದಾಗ ಏನು ಮಾಡಬೇಕು..?

Spiritual: ನಾವು ನೀವು ನೋಡಿರುವ ಸುಂದರವಾದ, ಬರೀ ರಾತ್ರಿಯ ಹೊತ್ತಷ್ಟೇ ಅರಳುವ ಹೂವು ಅಂದ್ರೆ, ಬ್ರಹ್ಮಕಮಲ. ಸುಂದರ ಸುಹಾಸನೆ ಇರುವ ಹೂವಾಗಿರುವ ಬ್ರಹ್ಮಕಮಲ, ಬರೀ ಮಳೆಗಾಲದಲ್ಲಿ, ಅದರಲ್ಲೂ ಜುಲೈ- ಆಗಸ್ಟ್ ಸಂದರ್ಭದಲ್ಲಿ ಅರಳುವ ಹೂವು. ಹಾಗಾದ್ರೆ ಬ್ರಹ್ಮಕಮಲದ ಇತಿಹಾಸವೇನು..? ಈ ಹೂವಿನ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..

ಹಲವು ಹೂವುಗಳನ್ನು ನಾವು ದೇವರಿಗೆ ಹಾಕುತ್ತೇವೆ. ಆದರೆ, ಬ್ರಹ್ಮಕಮಲವನ್ನು ಮಾತ್ರ, ದೇವರಿಗೆ ಹಾಕುವುದಿಲ್ಲ. ಏಕೆಂದರೆ, ಇದು ಬ್ರಹ್ಮನಿಗೆ ಮಾತ್ರ ಸೇರಿದ ಹೂವು. ಶ್ರೀವಿಷ್ಣುವಿನ ನಾಭಿಯಿಂದ ಅರಳಿದ ಕಮಲದಿಂದ ಜನಿಸಿದವರೇ, ಬ್ರಹ್ಮ. ಹಾಗಾಗಿ ಆ ಹೂವನ್ನು ಬ್ರಹ್ಮ ಕಮಲವೆಂದು ಕರೆಯಲಾಗುತ್ತದೆ. ಸಂಜೆ 8 ಗಂಟೆಯ ಬಳಿಕ ಅರಳಲು ಆರಂಭಿಸುವ ಈ ಹೂವು, ರಾತ್ರಿ ಹನ್ನೆರಡು ಗಂಟೆಗೆಂದರೆ, ಪೂರ್ತಿಯಾಗಿ ಅರಳಿ, ಕೊಂಚ ಹೊತ್ತಿನ ಬಳಿಕ, ಬಾಡಿ ಹೋಗುತ್ತದೆ.

ಪುರಾಣ ಕಥೆಗಳ ಪ್ರಕಾರ, ಬ್ರಹ್ಮಾಂಡ ರಚನೆಯ ಭಾರವನ್ನು ಬ್ರಹ್ಮದೇವ ಹೊತ್ತಿದ್ದರು. ಈ ವೇಳೆ ಅವರು ಬ್ರಹ್ಮ ಕಮಲವನ್ನು ಬಳಸಿ, ಬ್ರಹ್ಮಾಂಡ ಸೃಷ್ಟಿಸಿದರು ಎಂದು ಹೇಳಲಾಗಿದೆ. ಈ ರೀತಿ ಪುರಾಣ ಕಥೆಗಳಲ್ಲಿ ಬ್ರಹ್ಮಕಮಲದ ಬಗ್ಗೆ ಹಲವಾರು ಕಥೆಗಳಿದೆ. ಬ್ರಹ್ಮ ಕಮಲ ಹೂವು ಅರಳಿದಾಗ, ಅದಕ್ಕೆ ದೀಪ ಹಚ್ಚಿ, ಆರತಿ ಬೆಳಗಬೇಕು. ಮತ್ತು ಈ ವೇಳೆ ನೀವು ದೇವರಲ್ಲಿ ನಿಮ್ಮ ಕೋರಿಕೆಯನ್ನು ಬೇಡಿಕೊಳ್ಳಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ, ಹೀಗೆ ಮಾಡಿದರೆ, ನಿಮ್ಮೆಲ್ಲ ಕೋರಿಕೆಗಳು ಈಡೇರುತ್ತದೆ ಎಂಬ ನಂಬಿಕೆ ಇದೆ.

ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ.. ಹೀಗೆ ಮಾಡಿದ್ರೆ ನಿಮ್ಮ ಅದೃಷ್ಟ ಅವರ ಪಾಲಾಗುತ್ತದೆ..

ಪತಿ ಶ್ರೀಮಂತನಾಗಬೇಕು, ಉದ್ಧಾರವಾಗಬೇಕು ಅಂದ್ರೆ ಪತ್ನಿ ಈ ಕೆಲಸವನ್ನು ಮಾಡಬೇಕು..

ಮಂಗಳವಾರದ ದಿನ ಇಂಥ ಕೆಲಸಗಳನ್ನು ಮಾಡಬೇಡಿ.. ಇಲ್ಲದಿದ್ದಲ್ಲಿ ದರಿದ್ರತನ ಆವರಿಸುತ್ತದೆ..

About The Author