Friday, June 20, 2025

Latest Posts

ಸೂಪ್ಗಳು ದೇಹದ ಆರೋಗ್ಯಕ್ಕೆ ಎಷ್ಟು ಒಳ್ಳೆಯದು..?

- Advertisement -

Health Tips: ಸೂಪ್ ಅಂದ್ರೆ ಹಲವರ ಪ್ರೀತಿಯ ಆಹಾರ. ಕೆಲವರಂತೂ ಪ್ರತಿದಿನ ಸೂಪ್ ಮಾಡಿ ಸೇವಿಸುತ್ತಾರೆ. ಆದರೆ ಸೂಪ್ ಪ್ರತಿದಿನ ಸೇವಿಸಬಹುದಾ..? ಸೂಪ್ ಕುಡಿದರೆ, ಆರೋಗ್ಯಕ್ಕೇನು ಲಾಭ ಅನ್ನೋ ಬಗ್ಗೆ ಆಹಾರ ತಜ್ಞೆ, ವೈದ್ಯೆಯಾದ ಡಾ. ಹೆಚ್.ಎಸ್.ಪ್ರೇಮಾ ಅವರು ವಿವರಿಸಿದ್ದಾರೆ.

ಸೂಪ್ ಅನ್ನೋದು ಭಾರತೀಯರಿಗೆ ಮಾಡರ್ನ್ ಹೆಸರು. ಆದರೆ ಸೂಪ್ ಭಾರತೀಯರಿಗೆ ಚಿರಪರಿಚಿತ. ಏಕೆಂದರೆ, ನಾವೆಲ್ಲರೂ ಬಳಸುವ ಸಾರು ಕೂಡ ಸೂಪ್. ವಿದೇಶಿಗರು ಸೂಪನ್ನು ಹಾಗೇ ತಿನ್ನುತ್ತಾರೆ. ನಾವು ಸಾರನ್ನು ಅನ್ನದೊಂದಿಗೆ ಸೇವಿಸುತ್ತೇವೆ. ಇನ್ನು ಸೂಪ್‌ಗಳಲ್ಲೇ ವೆರೈಟಿಗಳಿದೆ, ಟೊಮೆಟೋ, ಪಾಲಕ್, ಸ್ವೀಟ್ ಕಾರ್ನ್ ಹೀಗೆ ಹಲವು ರೀತಿಯ ಸೂಪ್‌ಗಳಿದೆ.

ಬರೀ ವೆಜ್ ಸೂಪ್ ಅಲ್ಲದೇ, ಮಾಂಸದಿಂದ ಕೂಡ ಸೂಪ್ ತಯಾರಿಸಲಾಗುತ್ತದೆ. ಕೆಲವು ಮಾಂಸಾಹಾರಿಗಳು, ಬಾಣಂತಿಯರಿಗೆ ಕೋಳಿಯ ಕಾಲಿನ ಸೂಪ್ ಮಾಡಿಕೊಡುತ್ತಾರೆ. ಇದು ಕೂಡ ಉತ್ತಮ ಅಂತಾರೆ ವೈದ್ಯರು. ಇನ್ನು ಸೂಪ್ ಸೇವನೆಯಿಂದ ನಮ್ಮ ದೇಹಕ್ಕೆ ನೀರು ಸಿಗುತ್ತದೆ. ವಿಟಮಿನ್ ಸಿಗುತ್ತದೆ. ಆದರೆ ಕ್ಯಾಲೋರಿ ಸಿಗುವುದಿಲ್ಲ. ಹಾಗಾಗಿ ಎಲ್ಲರೂ ಪ್ರತಿದಿನ ಸೂಪ್ ಕುಡಿಯಬಹುದು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

- Advertisement -

Latest Posts

Don't Miss