Health Tips: ಹಲವರಿಗೆ ಅನ್ನ ತಿನ್ನುವುದರಿಂದ ನಮಗೆ ಶುಗರ್ ಬರುತ್ತದೆ. ನಮ್ಮ ದೇಹದ ತೂಕ ಅತೀಯಾಗಿ ಹೆಚ್ಚುತ್ತದೆ ಅನ್ನೋ ಭ್ರಮೆ ಇದೆ. ಹಾಗಾದ್ರೆ ಇದು ಭ್ರಮೆನಾ ಅಥವಾ ಇದೇ ಸತ್ಯಾನಾ ಅನ್ನೋ ಬಗ್ಗೆ ಆಹಾರ ತಜ್ಞರಾದ ಡಾ.ಪ್ರೇಮಾ ಅವರು ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ವೈದ್ಯರಾದ ಡಾ.ಪ್ರೇಮಾ ಅವರು ಹೇಳುವ ಪ್ರಕಾರ, ಅಕ್ಕಿಯಲ್ಲಿ ಅಪರೂಪದ ಜಿಂಕ್ ಮಿನರಲ್ ಸಿಗುತ್ತದೆ. ಹಾಗಾಗಿ ಅನ್ನದ ಸೇವನೆ ಮಾಡಿದರೆ, ಆರೋಗ್ಯಕ್ಕೇನು ತೊಂದರೆ ಇಲ್ಲ. ಅಕ್ಕಿ ನಮ್ಮ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ. ಆದರೆ ಲಿಮಿಟಿನಲ್ಲಿ ತಿನ್ನಬೇಕಷ್ಟೇ. ಅಲ್ಲದೇ, ನಮ್ಮ ಮನಸ್ಸಿಗೆ ಯಾವ ಆಹಾರ ಇಷ್ಟವಾಗುತ್ತದೆಯೋ, ಆ ಆಹಾರವನ್ನು ನಾವು ಸೇವಿಸುವುದರಲ್ಲಿ ಯಾವುದೇ ತಪ್ಪಿಲ್ಲ ಅಂತಾರೆ ವೈದ್ಯರು.
ಇನ್ನು ಕೆಲವರು ಕೆಂಪಕ್ಕಿ ಉತ್ತಮವೋ, ಬಿಳಿ ಅಕ್ಕಿ ಉತ್ತಮವೋ ಎಂದು ಕೇಳುತ್ತಾರೆ. ಸಹಜವಾಗಿ ಅಕ್ಕಿ ಕೆಂಪು., ಕಂದು ಬಣ್ಣದ್ದಾಗಿರುತ್ತದೆ. ಹಾಗಾಗಿ ಕಂದು ಬಣ್ಣದ ಅಕ್ಕಿಯ ಸೇವನೆ ಆಹಾರಕ್ಕೆ ತುಂಬಾ ಉತ್ತಮ. ಪಾಲಿಶ್ ಮಾಡದ ಅಕ್ಕಿ ಸೇವನೆಯಿಂದ ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..