Spiritual Story: ಒಂದು ಮನೆಯಲ್ಲಿ ಹೊಸ್ತಿಲು ಅನ್ನೋದು ಒಂದು ಭಾಗ. ಆದರೆ ಹಿಂದೂ ಧರ್ಮದಲ್ಲಿ ಅದಕ್ಯಾಕೆ ಇಷ್ಟು ಪ್ರಾಮುಖ್ಯತೆ ಅಂತಾ ಹಲವರು ಕೇಳುತ್ತಾರೆ. ಏಕೆಂದರೆ, ಹೊಸ್ತಿಲು ಅನ್ನುವುದು ಲಕ್ಷ್ಮೀ ದೇವಿಯ ವಾಸಸ್ತಾನ. ಹಾಗಾಗಿ ಹೊಸ್ತಿಲನ್ನು ಹೆಣ್ಣು ಮಕ್ಕಳು ಪ್ರತಿದಿನ ಪೂಜೆ ಮಾಡಿ, ಹೂವು ಹಾಕಿ, ನೀರು ಇಟ್ಟು ನೈವೇದ್ಯ ಮಾಡಿ, ಆ ನೀರನ್ನು ತುಳಸಿ ಕಟ್ಟೆಗೆ ಹಾಕುತ್ತಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..
ಹೊಸ್ತಿಲ ಜಾಗದಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ ಅನ್ನೋ ನಂಬಿಕೆ ಇದೆ. ಹಾಗಾಗಿ ಬಾಗಿಲು ಕೂರಿಸುವ ಸಮಯದಲ್ಲಿ ಪೂಜೆ ಮಾಡಿಯೇ, ಬಾಗಿಲು ಕೂರಿಸುತ್ತಾರೆ. ಹೊಸ್ತಿಲನ್ನು ದ್ವಾರದೇವಿ ಎಂದು ಸಂಬೋಧಿಸಲಾಗುತ್ತದೆ. ಈಕೆಯನ್ನು ಪ್ರತಿದಿನ ಪೂಜೆ ಮಾಡಿದರೆ, ಮನೆಗೆ ನಕಾರಾತ್ಮಕ ಶಕ್ತಿಯ ಪ್ರವೇಶ ಆಗುುದಿಲ್ಲವೆಂಬ ನಂಬಿಕೆ ಇದೆ. ಹಾಗಾಗಿ ಹೊಸ್ತಿಲಿಗೆ ದೇವಿಯ ಸ್ಥಾನವನ್ನು ನೀಡಿದ್ದೇವೆ.
ಇನ್ನು ಹೊಸ್ತಿಲಿನ ಮೇಲೆ ನಿಲ್ಲುವುದು, ಕೂರುವುದೆಲ್ಲ ಮಾಡಬಾರದು. ಹೀಗೆ ಮಾಡಿದವರು ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗುತ್ತಾರೆ. ಕೆಲವು ಹೆಣ್ಣು ಮಕ್ಕಳಿಗೆ ಹೊಸ್ತಿಲ ಮೇಲೆ ಕುಳಿತು ಹರಟೆ ಹೊಡೆಯುವ ಚಾಳಿ ಇರುತ್ತದೆ. ಅಂಥವರ ಮನೆಯಲ್ಲಿ ಸದಾ ಜಗಳವಾಗುತ್ತಿರುತ್ತದೆ. ಹಣದ ಸಮಸ್ಯೆ ಇರುತ್ತದೆ. ಮನೆಯಲ್ಲಿ ನೆಮ್ಮದಿ ಅನ್ನೋದೇ ಇರುವುದಿಲ್ಲ. ಅಂಥ ಮನೆಯಲ್ಲಿ ದರಿದ್ರ ತುಂಬಿರುತ್ತದೆ. ಹಾಗಾಗಿ ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು ಮತ್ತು ನಿಲ್ಲಬಾರದು ಅಂತಾ ಹೇಳುವುದು.
ಇನ್ನು ಪ್ರತಿದಿನ ಹೊಸ್ತಿಲನ್ನು ಒರೆಸಿ, ರಂಗೋಲಿ ಹಾಕಿ, ಹೂವು, ಅರಿಶಿನ, ಕುಂಕುಮ ಹಾಕಿ, ನೀರನ್ನಿಟ್ಟು ಹೆಣ್ಣು ಮಕ್ಕಳು ಪೂಜಿಸಬೇಕು ಎಂಬ ಕ್ರಮವಿದೆ. ಇದರಿಂದ ಹೊಸ್ತಿಲು ಪ್ರತಿದಿನ ಸ್ವಚ್ಛವಾಗುತ್ತದೆ. ಹೊಸ್ತಿಲನ್ನು ಪ್ರತಿದಿನನ ಒರಿಸುವುದರಿಂದ ಅದರ ಮೇಲೆ ಧೂಳು ಕೂರುವುದಿಲ್ಲ. ಅಲ್ಲದೇ ಅರಿಶಿನ- ಕುಂಕುಮ ಹೂವನ್ನಿಡುವುದರಿಂದ, ಅದು ಸಕಾರಾತ್ಮಕ ಸ್ಥಳವಾಗುತ್ತದೆ. ಹಾಗಾಗಿ ಯಾವುದೇ ನಕಾರಾತ್ಮಕ ಶಕ್ತಿ ಮನೆಯ ದ್ವಾರ ದಾಟಿ ಒಳ ಬರಲು ಸಾಧ್ಯವಾಗುವುದಿಲ್ಲ.
ನಿಮ್ಮ ಪರ್ಸ್‌ನಲ್ಲಿ ಯಾವುದೇ ಕಾರಣಕ್ಕೂ ಈ 5 ವಸ್ತುಗಳನ್ನು ಇಟ್ಟುಕೊಳ್ಳಬೇಡಿ