Friday, May 2, 2025

Latest Posts

ಕಷ್ಟದ ಸಮಯದಲ್ಲಿ ನಾವು ಹೇಗೆ ಬದುಕಬೇಕು..?

- Advertisement -

ಕಷ್ಟ ಅನ್ನೋದು ಯಾರಿಗೆ ಬರಲ್ಲ ಹೇಳಿ..? ಎಷ್ಟೇ ಶ್ರೀಮಂತನಿದ್ದರೂ ಅವನಿಗೂ ಕಷ್ಟ ಬರುತ್ತದೆ. ಅವನಿಗೆ ಆರೋಗ್ಯದ ಕಷ್ಟ ಬರಬಹುದು. ಬಡವನಿಗೆ ಆರ್ಥಿಕ ಸಂಕಷ್ಟ ಬರಬಹುದು. ಮಧ್ಯಮ ವರ್ಗದವನಿಗೆ ನೆಮ್ಮದಿ ಹಾಳಾಗಿರಬಹುದು. ಹೀಗೆ ಮನುಷ್ಯನಾದವನು ಒಂದಲ್ಲ ಒಂದು ಕಷ್ಟವನ್ನು ಅನುಭವಿಸುತ್ತಲೇ ಇರುತ್ತಾನೆ. ಹಾಗಾಗಿ ನಾವಿಂದು ಕಷ್ಟದ ಸಮಯದಲ್ಲಿ ನಾವು ಹೇಗೆ ಬದುಕಬೇಕು ಅಂತಾ ಹೇಳಲಿದ್ದೇವೆ..

ಕೆಲ ತಿಂಗಳ ಹಿಂದಷ್ಟೇ ನಿಧನರಾಗಿದ್ದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ಈ ಬಗ್ಗೆ ಹೇಳಿದ್ದಾರೆ. ಕಷ್ಟದ ಸಮಯದಲ್ಲಿ ನಾವು ಚೆಂಡಿನಂತೆ ಇರಬೇಕು. ಪುಟಿದೇಳಬೇಕು. ಸಮುದ್ರದಲ್ಲಿ ಜೋರಾದ ಅಲೆ ಬಂದಾಗಲೂ, ಅಲೆ ಬಾರದಾಗಲೂ, ಚೆಂಡು ಅಲ್ಲಿ ಬಿದ್ದರೆ, ಅದು ಆರಾಮವಾಗಿ ತೇಲುತ್ತದೆ. ಹಾಗೆ ನಮ್ಮ ಜೀವನದಲ್ಲಿ ಕಷ್ಟ ಬಂದಾಗಲೂ, ಸುಖ ಬಂದಾಗಲೂ ಚೆಂಡಿನಂತೆ ಇರಬೇಕು. ಆರಕ್ಕೇರಬಾರದು ಮತ್ತು ಮೂರಕ್ಕಿಳಿಯಬಾರದು ಅಂತಾರೆ ಹಿರಿಯರು.

ಎಷ್ಟು ಸಲ ತೆರೆಗಳು ಬರುತ್ತದೆ, ಅಷ್ಟು ಸಲ ಚೆಂಡು ಮೇಲೆಳುತ್ತದೆ. ಅದು ನೋಡುವುದೇ ಚೆಂದ. ಅದೇ ರೀತಿ ಎಂಥ ಕಷ್ಟಗಳು ಬಂದರೂ, ನಾವು ಆ ಚೆಂಡಿನಂತೆ, ಮೇಲೆಳಬೇಕು. ಅದೇ ಜೀವನ ಅಂತಾರೆ ಸಿದ್ದೇಶ್ವರ ಸ್ವಾಮೀಜಿಗಳು.

ಜಿಮ್ ಹೋಗುವುದರಿಂದ ಆಗುವ ನಷ್ಟವೇನು ಗೊತ್ತಾ..?

- Advertisement -

Latest Posts

Don't Miss