Tuesday, April 15, 2025

Latest Posts

ಮಕ್ಕಳು ಸಂಸ್ಕಾರವಂತರಾಗಬೇಕೆಂದರೆ ನೀವು ಯಾವ ರೀತಿ ನಡೆದುಕೊಳ್ಳಬೇಕು..?

- Advertisement -

ಎಲ್ಲ ತಂದೆ ತಾಯಿಯರಿಗೂ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗಬೇಕು. ಅವರು ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಬೇಕು. ಎಲ್ಲರೊಂದಿಗೂ ಉತ್ತಮ ಸಂಬಂಧವನ್ನು ಹೊಂದಿರಬೇಕು ಎಂಬ ಆಸೆ ಇರುತ್ತದೆ. ಹಾಗಾದ್ರೆ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಗಬೇಕು. ಅವರು ಬುದ್ಧಿವಂತರಾಗಬೇಕು ಅಂದ್ರೆ ತಂದೆ ತಾಯಿ ಹೇಗಿರಬೇಕು ಅಂತಾ ತಿಳಿಯೋಣ ಬನ್ನಿ..

ಹಣದ ಅವಶ್ಯಕತೆ ಇದ್ದಾಗ ಮನಸ್ಸಿನಲ್ಲಿ ಈ ಸಂಖ್ಯೆಯನ್ನು ನೆನೆಯಿರಿ, ಖಂಡಿತ ಸಮಸ್ಯೆ ದೂರವಾಗುತ್ತದೆ..!

ತಂದೆ ತಾಯಿಯರಲ್ಲಿ ನಾಲ್ಕು ರೀತಿಯ ಕೆಟಗರಿ ಇರುತ್ತದೆ. ಒಂದು ನನಗೆ ಈ ಆಟಿಕೆ ಬೇಕೆಂದು ಕೇಳಿದಾಗ, ಮೊದಲನೇಯ ಕೆಟಗರಿ ತಂದೆ ತಾಯಿ, ಬೇಡ, ಕೊಡಿಸಲ್ಲಾ ಎನ್ನುತ್ತಾರೆ. ಆ ಮಗು ಹೆಚ್ಚು ಒತ್ತಾಯಿಸಿದರೆ, ಬೇಡಾ ಅಂದ್ರೆ ಬೇಡಾ, ಹೆಚ್ಚು ಹಠ ಮಾಡಿದ್ರೆ ಪೆಟ್ಟು ಬೀಳತ್ತೆ ಎಂದು ಗದರಿಸುತ್ತಾರೆ. ಇಂಥ ತಂದೆ ತಾಯಿಯ ಜೊತೆ ಬೆಳೆದ ಮಕ್ಕಳು, ಯಾವ ಕೆಲಸ ಮಾಡುವುದಿದ್ದರೂ ಹಿಂಜರಿಯುತ್ತಾರೆ. ಕೆಲವೊಮ್ಮೆ ತಮ್ಮ ಗುರಿಯನ್ನ ಬದಿಗಿರಿಸಿ, ಇತರರ ಮಾತನ್ನೇ ಕೇಳುತ್ತಾರೆ. ಯಾಕಂದ್ರೆ ಚಿಕ್ಕಂದಿನಲ್ಲೇ ಇವರ ಮನಸ್ಸಿನಲ್ಲಿ ಹೆದರಿಕೆ ಕುಳಿತಿರುತ್ತದೆ.

ಎರಡನೇಯ ಕೆಟಗರಿ ತಂದೆ ತಾಯಿ, ತೊಗೋ ನಿನಗೇನು ಬೇಕೋ ತೊಗೋ ಎನ್ನುತ್ತಾರೆ. ಆ ಮಗು ಇನ್ನೊಂದು ಆಟಿಕೆ ಕೇಳಿದರು, ಅದನ್ನೂ ತೊಗೋ ಎನ್ನುತ್ತಾರೆ. ಇಂಥ ತಂದೆ ತಾಯಿಗೆ, ತಮ್ಮ ಮಕ್ಕಳು ಮಾಡಿದ ತಪ್ಪು ಅರ್ಥವಾಗುವುದಿಲ್ಲ. ಹಾಗಾಗಿ ಅವರು ಮಾಡಿದ್ದೆಲ್ಲ ಸ ರಿಯೇ ಎಂಬಂತೆ ಇರುತ್ತಾರೆ. ಹಾಗಾಗಿ ಇಂಥ ಮಕ್ಕಳು ಯಾವಾಗಬೇಕಾದ್ರೂ ಅಡ್ಡ ದಾರಿ ಹಿಡಿಯಬಹುದು.

ನೀವು ತ್ವಚೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ..ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ..!

ಮೂರನೇಯ ಕೆಟಗರಿ ತಂದೆ ತಾಯಿ, ಮಕ್ಕಳಿಗೆ ಏನು ಬೇಕು ಏನು ಬೇಡ ಅನ್ನುವುದರ ಬಗ್ಗೆ ಕಿಂಚಿತ್ತೂ ಗಮನ ಕೊಡುವುದಿಲ್ಲ. ಯಾಕಂದ್ರೆ ಅವರು ತಮ್ಮ ಲೋಕದಲ್ಲೇ ಕಳೆದು ಹೋಗಿರ್ತಾರೆ. ಮಗು ಆಟಿಕೆ ಕೇಳುತ್ತಿದೆ. ಅದಕ್ಕೆ ಆ ಆಟಿಕೆಯನ್ನ ಕೊಡಿಸಬೇಕೋ ಬೇಡವೋ ಅನ್ನೋದು ಅವ್ರಿಗೆ ಗೊತ್ತಿರುವುದಿಲ್ಲ. ಇಂಥ ಮಕ್ಕಳು ತಂದೆ ತಾಯಿ ಪ್ರೀತಿ ಕಲೆದುಕೊಂಡು, ಸಿಕ್ಕ ಸಿಕ್ಕವರ ಸಂಗ ಮಾಡುತ್ತದೆ.

ನಾಲ್ಕನೇಯ ಕೆಟಗರಿ ತಂದೆ ತಾಯಿ, ಆ ಮಗು ಆಟಿಕೆ ಕೇಳಿದಾಗ, ಈಗ ಆ ಆಟಿಕೆ ಬೇಡ. ಮನೆಯಲ್ಲಿ ಸಾಕಷ್ಟು ಆಟಿಕೆ ಇದೆಯಲ್ಲಾ ಅದರಲ್ಲಿ ಆಡು. ನಂತರ ನಿನಗೆ ಈ ಆಟಿಕೆ ತೆಗಿಸಿಕೊಡುತ್ತೇವೆ. ಈಗ ಸುಮ್ಮನೆ ದುಡ್ಡು ಖರ್ಚು ಮಾಡೋದು ಬೇಡಾ. ಅವಶ್ಯಕತೆ ಇರುವ ವಸ್ತುಗಳನ್ನಷ್ಟೇ ತೆಗೆದುಕೊಳ್ಳೋಣ ಎಂದು ಹೇಳುತ್ತಾರೆ. ಹೀಗೆ ಬೆಳೆದ ಮಕ್ಕಳು, ಅಪ್ಪ ಅಮ್ಮನ ಬಳಿ ಪ್ರತೀ ಕೆಲಸ ಮಾಡುವಾಗಲು, ಅವರ ಅಭಿಪ್ರಾಯ ತಿಳಿದುಕೊಳ್ಳಲು ಬಯಸುತ್ತಾರೆ. ಅಲ್ಲದೇ, ಸಂಸ್ಕಾರ ಕಲಿಯುತ್ತಾರೆ. ಹೇಗೆ ಜೀವಿಸಬೇಕು ಎಂಬುದನ್ನೂ ಅರಿತುಕೊಳ್ಳುತ್ತಾರೆ. ಸಂಸ್ಕಾರ ಅನ್ನೋದು ತಂದೆ ತಾಯಿ ಚಿಕ್ಕಂದಿನಲ್ಲೇ ಕಲಿಸಬೇಕು ಹೊರತು, ದೊಡ್ಡವರಾದ ಮೇಲಲ್ಲ. ಯಾಕಂದ್ರೆ ಗಿಡವಾಗಿ ಬಗ್ಗದ್ದು.. ಮರವಾಗಿ ಬಗ್ಗಿತೇ..?

- Advertisement -

Latest Posts

Don't Miss