Health Tips: ನಿಸರ್ಗದಿಂದ ನಮಗೆ ಸಿಕ್ಕ ಕೊಡುಗೆಗಳಲ್ಲಿ ಜೇನುತುಪ್ಪ ಕೂಡ ಒಂದು. ಜೇನುಹುಳುವಿನಿಂದ ಬರುವ ಈ ಸಿಹಿತುಪ್ಪ, ಆರೋಗ್ಯಕ್ಕೆ ಅತ್ಯಂತ ಉತ್ತಮ ಔಷಧಿ. ಹಾಗಾಗಿಯೇ ಆಯುರ್ವೇದದಲ್ಲಿ ಜೇನುತುಪ್ಪವನ್ನು ಮಿತವಾಗಿ, ಔಷಧಿ ತೆಗೆದುಕೊಳ್ಳುವಾಗ ಬಳಸಲಾಗುತ್ತದೆ. ಆಯುರ್ವೇದ ಔಷಧಿಯಲ್ಲಿ ಸಿಗುವ ಕೆಲ ಪುಡಿಯನ್ನು, ಜೇನುತುಪ್ಪದೊಂದಿಗೆ ಬೆರೆಸಿಯೇ ಸೇವಿಸಬೇಕು. ಆಗಲೇ ಕೆಲ ರೋಗಗಳು ವಾಸಿಯಾಗುತ್ತದೆ. ಹಾಗಾದರೆ ಜೇನುತುಪ್ಪದ ಸೇವನೆ ಹೇಗೆ ಮಾಡಬೇಕು..? ಇದರಿಂದಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ದೇಹದ ಬೊಜ್ಜು ಕರಗಬೇಕು, ತೂಕ ಇಳಿದು ನೀವು ಸ್ಲಿಮ್ ಆಗಬೇಕು ಅಂದ್ರೆ ವ್ಯಾಯಾಮ ಮಾಡುವುದರ ಜೊತೆಗೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ ಒಂದು ಸ್ಪೂನ್ ಜೇನುತುಪ್ಪ ಸೇವಿಸಿ ಕುಡಿಯಬೇಕು. ಸರಿಯಾಗಿ ನಿದ್ರೆ ಬರುತ್ತಿಲ್ಲವೆಂದಲ್ಲಿ, ಪ್ರತಿದಿನ ಕೊಂಚ ಜೇನುತುಪ್ಪ ಸೇವನೆ ಮಾಡಬೇಕು. ಇದರಿಂದ ಕ್ರಮೇಣ ಉತ್ತಮ ನಿದ್ರೆ ಬರುತ್ತದೆ. ಜೇನುತುಪ್ಪ ಸೇವನೆಯಿಂದ ದೇಹದಲ್ಲಿ ರಕ್ತಸಂಚಾರ ಸರಿಯಾಗುತ್ತದೆ.
ಆಯುರ್ವೇದದಲ್ಲಿ ಕೆಮ್ಮು, ನೆಗಡಿ, ಕಫದ ಸಮಸ್ಯೆ ಇದ್ದರೆ, ಜೇನುತುಪ್ಪದೊಂದಿಗೆ ಔಷಧಿ ತೆಗೆದುಕೊಳ್ಳಲು ಹೇಳಲಾಗುತ್ತದೆ. ಏಕೆಂದರೆ, ಜೇನುತುಪ್ಪದ ಸೇವನೆಯಿಂದ, ಗಂಟಲ ಕಿರಿಕಿರಿ ಕಡಿಮೆಯಾಗುತ್ತದೆ. ಕೊಂಚ ಅರಿಶಿನ ಮತ್ತು ಕೊಂಚ ಜೇನುತುಪ್ಪವನ್ನು ಸೇರಿಸಿ, ಸೇವಿಸುವುದರಿಂದಲೂ ಕೆಮ್ಮು ನಿಲ್ಲುತ್ತದೆ.
ಜೇನಿನ ಸೇವನೆಯಿಂದ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು. ಜೀರ್ಣಕ್ರಿಯೆ ಉತ್ತಮವಾಗಿ, ಮಲವಿಸರ್ಜನೆ ಸರಿಯಾಗಿ ಆಗಬೇಕು ಅಂದ್ರೆ, ಜೇನಿನ ಸೇವನೆ ಮಾಡಬೇಕು. ತ್ವಚೆಯ ಸೌಂದರ್ಯ, ತಲೆಗೂದಲ ಸೌಂದರ್ಯ ಕಾಪಾಡುವಲ್ಲಿ ಜೇನುತುಪ್ಪ ಪ್ರಮುಖ ಪಾತ್ರ ವಹಿಸುತ್ತದೆ.
ಅಕ್ಕಿ ತೊಳೆದ ನೀರನ್ನು ಬಳಸುವುದರಿಂದ ಎಷ್ಟೆಲ್ಲ ಚಮತ್ಕಾರಿ ಉಪಯೋಗವಿದೆ ಗೊತ್ತಾ..?

