Tuesday, April 15, 2025

Latest Posts

ಅಗತ್ಯವಿಲ್ಲದ ಚಿಂತೆಯಿಂದ ಪಾರಾಗುವುದು ಹೇಗೆ..?

- Advertisement -

Health Tips: ಜೀವನ ಅಂದಮೇಲೆ ಹಲವಾರು ಆಲೋಚನೆಗಳಿರುತ್ತದೆ. ಚಿಂತೆ, ದುಃಖ ಎಲ್ಲವೂ ಇರುತ್ತದೆ. ಆದರೆ ಕೆಲವು ವಿಷಯಗಳ ಬಗ್ಗೆ ನಾವು ವಿನಾಕಾರಣ ಚಿಂತೆ ಮಾಡುತ್ತೇವೆ. ಮುಂದೊಂದು ದಿನ ನಮಗೇ ಅನ್ನಿಸುತ್ತೇವೆ. ನಾವು ಬೇಡವಾದ ವಿಚಾರಕ್ಕೆಲ್ಲಾ ಎಷ್ಟು ಚಿಂತೆ ಮಾಡಿದೆವಲ್ಲಾ ಎಂದು. ಇಂದು ನಾವು ಅಗತ್ಯವಿಲ್ಲದ ಚಿಂತೆಯಿಂದ ಹೇಗೆ ಪಾರಾಗುವುದು ಎಂದು ಹೇಳಲಿದ್ದೇವೆ.

ಚಿಂತೆ ಎಂಬ ಸಂತೆಯಿಂದ ದೂರವಾಗಬೇಕು ಅಂದ್ರೆ, ನೀವು ಕೆಲವು ಉತ್ತಮ ಹವ್ಯಾಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಕು. ಕೆಲವರಿಗೆ ಹೊಲಿಗೆ, ಕ್ಯಾಂಡಲ್‌ ತಯಾರಿಸುವುದು, ಪುಸ್ತಕ ಓದುವುದು, ಅಡುಗೆ ಸೇರಿ ಹಲವು ಉತ್ತಮ ಹವ್ಯಾಸಗಳನ್ನು ನೀವು ಮೈಗೂಡಿಸಿಕೊಳ್ಳಬಹುದು. ಇದರಿಂದ ನೀವು ನಿಮ್ಮ ಹವ್ಯಾಸದ ಮೇಲೆ ಗಮನ ಕೊಡಬಹುದು. ಆಗ ನೀವು ನಿಮ್ಮ ಚಿಂತೆಯನ್ನು ಮರೆಯಬಹುದು.

ಇಷ್ಟೇ ಅಲ್ಲದೇ, ಮನೆಗೆಲಸ ಮಾಡುವುದು ಕೂಡ ಉತ್ತಮ ಹವ್ಯಾಸ. ಇದರಿಂದ ನೀವು ದಣಿಯುತ್ತೀರಿ. ನಿಮಗೆ ಉತ್ತಮ ನಿದ್ರೆ ಬರುತ್ತದೆ. ಮನೆಗೆಲಸ, ಹವ್ಯಾಸ, ಹರಟೆ, ನಿದ್ದೆ ಇವೆಲ್ಲದರ ಮಧ್ಯೆ ನಿಮಗೆ ಚಿಂತೆ ಮಾಡುವುದಕ್ಕೂ ಸಮಯವಿರಬಾರದು. ಅಷ್ಟು ನೀವು ಉತ್ತಮ ಕೆಲಸಗಳಲ್ಲಿ ಬ್ಯುಸಿಯಾಗಿರಬೇಕು.

ಇನ್ನೊಬ್ಬರ ಬಗ್ಗೆ ಋಣಾತ್ಮಕವಾಗಿ ಯೋಚಿಸುವುದು. ಇನ್ನೊಬ್ಬರನ್ನು ಮನಸ್ಸಿನಲ್ಲಿ ಬಯ್ಯುವುದು. ಇನ್ನೊಬ್ಬರು ನಿಮಗೆ ಯಾವುದೋ ಸಹಾಯ ಮಾಡಬೇಕು ಎಂದು ಬಯಸುವುದು. ಇವಿಷ್ಟು ಚಿಂತೆಗೆ ಕಾರಣವಾಗುತ್ತದೆ. ಹಾಗಾಗಿ ಸದಾ ಎಲ್ಲರ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ, ಯಾರನ್ನೂ ಬಯ್ಯಬೇಡಿ. ಅವರು ನಿಮ್ಮ ಮನಸ್ಸಿಗೆ ನೋವು ಮಾಡಿದ್ದರೆ, ಅವರು ಅದರ ಕರ್ಮವನ್ನು ಅನುಭವಿಸುತ್ತಾರೆ. ಇನ್ನು ಇನ್ನೊಬ್ಬರು ನಿಮಗೆ ಸಹಾಯ ಮಾಡಬೇಕು, ಏನಾದರೂ ಕೊಡಬೇಕು ಎಂದು ಎಂದಿಗೂ ಬಯಸಬೇಡಿ. ನಮ್ಮ ಆಸೆಯೇ ದುಃಖಕ್ಕೆ ಮೂಲವಾಗಿರುತ್ತದೆ. ಅದರಿಂದಲೇ ಚಿಂತೆ ಶುರುವಾಗುತ್ತದೆ.

ಮನೆ ರುಚಿ ಕೊಡುವ ಐಸ್ಕ್ರೀಮ್ ಟೇಸ್ಟ್ ಮಾಡಬೇಕು ಅಂದ್ರೆ ನೀವು ಇಲ್ಲಿ ಬರ್ಲೇಬೇಕು..

ನಿಮ್ಮ ಸೀರೆಗೆ ತಕ್ಕ ಮ್ಯಾಚಿಂಗ್ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಈ ಶಾಪ್‌ಗೆ ಭೇಟಿ ಕೊಡಿ..

ಗಂಟಲ ಕಿರಿಕಿರಿಯಾದರೆ ಮನೆಮದ್ದು ಮಾಡುವುದು ಹೇಗೆ..? ಇಲ್ಲಿದೆ ನೋಡಿ ವೈದ್ಯರ ಸಲಹೆ

- Advertisement -

Latest Posts

Don't Miss