Health Tips: ವೈದ್ಯರಾದ ಡಾ.ಚಂದ್ರಿಕಾ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಟಿಪ್ಸ್ಗಳನ್ನು ನೀಡಿದ್ದಾರೆ. ಪಿಸಿಓಡಿ ಸಮಸ್ಯೆ ಅಂದರೇನು..? ಈ ಆರೋಗ್ಯ ಸಮಸ್ಯೆ ಬರಲು ಕಾರಣವೇನು..? ಹೀಗೆ ಹಲವು ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ಇದೀಗ ಜನನಾಂಗವನ್ನು ಯಾವ ರೀತಿಯಾಗಿ ಶುಚಿಯಾಗಿರಿಸಿಕೊಳ್ಳಬೇಕು ಅನ್ನೋ ಬಗ್ಗೆಯೂ ವೈದ್ಯರು ಸಲಹೆ ನೀಡಿದ್ದಾರೆ.
ವೈದ್ಯರು ಜನನಾಂಗ ಶುಚಿಗೊಳಿಸುವ ಬಗ್ಗೆ ವಿವರಿಸಿದ್ದು, ಆ ಸ್ಥಳದಲ್ಲಿ ಬೆಳೆಯುವ ಕೂದಲನ್ನು ಪದೇ ಪದೇ ತೆಗೆಯಬಾರದು ಎನ್ನುತ್ತಾರೆ. ಜನನಾಂಗ ಶುಚಿಯಾಗಿಟ್ಟುಕೊಳ್ಳುವುದು ಉತ್ತಮ. ಆದರೆ ಆ ಸ್ಥಳದಲ್ಲಿ ಬೆಳೆಯುವ ಕೂದಲು, ನಿಮ್ಮ ಹಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಕಾರಿಯಾಗಿದೆ. ಹಾಗಾಗಿ ಆ ಕೂದಲುಗಳನ್ನು ಕ್ಲೀನ್ ಆಗಿ ಇರಿಸಿಕೊಳ್ಳಿ. ಆದರೆ ಪದೇ ಪದೇ ಅದನ್ನು ಕ್ಲೀನ್ ಗೊಳಿಸುವ ಅಗತ್ಯವಿಲ್ಲ ಅಂತಾರೆ ವೈದ್ಯರು.
ಇನ್ನು ಸ್ನಾನ ಮಾಡುವಾಗ ಆ ಸ್ಥಳವನ್ನು ನೀಟ್ ಆಗಿ ಕ್ಲೀನ್ ಮಾಡಿಕೊಳ್ಳಬೇಕು. ಕಾಟನ್ ಬಟ್ಟೆಯನ್ನೇ ಧರಿಸಬೇಕು. ಹೀಗೆ ಮಾಡುವುದರಿಂದ ಆ ಸ್ಥಳ ಆರೋಗ್ಯವಾಗಿರುತ್ತದೆ. ಮತ್ತು ಜನನಾಂಗ ಆರೋಗ್ಯವಾಗಿದ್ದರೆ, ಪ್ರತೀ ಹೆಣ್ಣು ಮಕ್ಕಳು ನೆಮ್ಮದಿಯಾಗಿ, ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ.
ಇನ್ನು ತುಂಬ ಟೈಟ್ ಆಗಿರುವ ಬಟ್ಟೆ ಧರಿಸುವುದು, ಡಿಯೋ, ಸ್ಪ್ರೇಗಳನ್ನೆಲ್ಲ ಬಳಸಬಾರದು. ಡೆಟಾಲ್, ಸ್ಯಾವಲಾನ್ ಹಾಕಿ ಪ್ರತಿದಿನ ಕ್ಲೀನ್ ಮಾಡಿಕೊಳ್ಳಬಾರದು. ನೀವು ಹೀಗೆ ಪ್ರತಿದಿನ ಮಾಡಿದ್ರೆ, ಅಲ್ಲಿರುವ ನ್ಯಾಚುರಲ್ ಆಗಿ ಪ್ರೊಟೆಕ್ಟ್ ಮಾಡುವ ಶಕ್ತಿ ಕುಂದುತ್ತದೆ. ಹಾಗಾಗಿ ಸೋಪ್ ಬಳಸಿ ಒಮ್ಮೆ ಕ್ಲೀನ್ ಮಾಡಿದರೆ ಸಾಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..