ದೇಹದಲ್ಲಿ ರಕ್ತ ಕಡಿಮೆಯಾದ್ರೆ, ನಮ್ಮ ಆರೋಗ್ಯ ಹಾಳಾಗುತ್ತದೆ. ನಿಶ್ಶಕ್ತಿ ಉಂಟಾಗುತ್ತದೆ. ಹಲವು ರೋಗಗಳಿಗೆ ಇದು ಆಹ್ವಾನ ನೀಡುವ ಸೂಚನೆಯಾಗಿದೆ. ಹಾಗಾದ್ರೆ ನಿಮ್ಮ ದೇಹದಲ್ಲಿ ರಕ್ತ ಕಡಿಮೆಯಾಗಿದೆ ಅಂತಾ ತಿಳಿಯುವುದು ಹೇಗೆ..? ಇದಕ್ಕೆ ಪರಿಹಾರವೇನು ಅಂತಾ ತಿಳಿಯೋಣ ಬನ್ನಿ..
ದೇಹದಲ್ಲಿ ರಕ್ತ ಕಡಿಮೆಯಾದ್ರೆ, ನಿಮ್ಮ ದೇಹದ ಬಣ್ಣ ತಿಳಿಯಾಗುತ್ತದೆ. ಕೆಲವರಿಗೆ ಬೇಧಿಯಾದಾಗ, ವಾಂತಿಯಾದಾಗ, ದೇಹ ಬಿಳಿಯಾಗುತ್ತದೆ. ಇದರ ಅರ್ಥ ಅವರ ಮೈಯಲ್ಲಿ ರಕ್ತ ಕಡಿಮೆಯಾಗಿದೆ ಎಂದರ್ಥ.
ಬ್ರಾಹ್ಮಿ ಎಲೆಯನ್ನು ಪ್ರತಿದಿನ ಸೇವಿಸಿದ್ದಲ್ಲಿ ಆಗುವ ಆರೋಗ್ಯಕರ ಲಾಭವೇನು ಗೊತ್ತಾ..?
ಇನ್ನು ದೇಹದಲ್ಲಿ ರಕ್ತ ಹೆಚ್ಚಿಸಲು ಮೆಂತ್ಯೆ ಸೊಪ್ಪಿನ ಜ್ಯೂಸ್ ಮತ್ತು ಪಾಲಕ್ ಜ್ಯೂಸ್ ಕುಡಿಯಬೇಕಾಗುತ್ತದೆ. ನಿಮಗೆ ಇದರ ಜ್ಯೂಸ್ ಕುಡಿಯಲು ಸಾಧ್ಯವಾಗದಿದ್ದಲ್ಲಿ, ನೀವು ಇದರ ಪಲ್ಯ, ಸೂಪ್, ಅಥವಾ ಸಾಂಬಾರ್ ಮಾಡಿ ತಿನ್ನಬಹುದು. ಆದ್ರೆ ಇದಕ್ಕೆ ನೀವು, ಉಪ್ಪು, ಖಾರ ಹೆಚ್ಚು ಹಾಕಬಾರದು. ಹೀಗೆ ಉಪ್ಪು, ಖಾರ, ಮಸಾಲೆ ಹೆಚ್ಚು ಹಾಕಿ, ಪಾಲಕ್ ಅಥವಾ ಮೆಂತ್ಯೆ ಪದಾರ್ಥ ಮಾಡಿದ್ದಲ್ಲಿ, ಅದು ನಿಮ್ಮ ನಾಲಿಗೆಗೆ ರುಚಿಯಷ್ಟೇ ಕೊಡುತ್ತದೆ ಹೊರತು, ರಕ್ತ ಹೆಚ್ಚಿಸುವುದಿಲ್ಲ.
ಅಥವಾ ನೀವು ರೊಟ್ಟಿ, ಚಪಾತಿ, ತಿನ್ನುವಾಗ ಹಸಿ ಮೆಂತ್ಯೆ ಮತ್ತು ಪಾಲಕ್ ಎಲೆ ತಿಂದರೂ ಉತ್ತಮ. ಕೆಲವರಿಗೆ ಪಾಲಕ್ ಮತ್ತು ಮೆಂತ್ಯೆ ಸೊಪ್ಪಿನ ಪದಾರ್ಥ ತಿಂದ್ರೆ, ಬೇಧಿ ಶುರುವಾಗುತ್ತದೆ. ಅಂಥವರು ಇದನ್ನ ಲಿಮಿಟಿನಲ್ಲಿ ತಿನ್ನಬೇಕು. ಅಥವಾ ನಿಮಗೆ ಯಾವಾಗ ಪಾಲಕ್ ಮತ್ತು ಮೆಂತ್ಯೆ ತಿಂದರೆ, ತಕ್ಷಣ ಬೇಧಿ ಶುರುವಾಗುತ್ತದೆ ಎಂದಾದರೆ ನೀವು ಪಾಲಕ್ ಮತ್ತು ಮೆಂತ್ಯೆ ತಿನ್ನಬೇಡಿ. ಅಲ್ಲದೇ ನಿಮಗೆ ಸರಿಯಾಗಿ ಮೂತ್ರ ವಿಸರ್ಜನೆಯಾಗುತ್ತಿಲ್ಲವೆಂದಲ್ಲಿ ಕೂಡ ನೀವು ಪಾಲಕ್ ಮತ್ತು ಮೆಂತ್ಯೆ ಸೊಪ್ಪು ಸೇವಿಸಬಾರದು.
ನಿದ್ದೆ ಬರದಿದ್ದರೆ ಅಥವಾ ಗೊರಕೆ ಸಮಸ್ಯೆ ಇದ್ದಲ್ಲಿ ಈ ಪರಿಹಾರ ಮಾಡಿಕೊಳ್ಳಿ..
ಇನ್ನು ಪ್ರತಿದಿನ 10 ಹಸಿ ಶೇಂಗಾದ ಜೊತೆ ಕೊಂಚ ಬೆಲ್ಲ ಸೇರಿಸಿ, ಸೇವಿಸಿದ್ರೆ ನಿಮ್ಮ ದೇಹದಲ್ಲಿ ರಕ್ತ ಹೆಚ್ಚುತ್ತದೆ. ಇದರ ಬದಲು ಬೇಕಾದರೆ ನೀವು ಮನೆಯಲ್ಲೇ ಶೇಂಗಾ ಚಿಕ್ಕಿ ತಯಾರಿಸಿ ತಿನ್ನಬಹುದು. ಆದ್ರೆ ಶೇಂಗಾ ಚಿಕ್ಕಿಯನ್ನ ಕೂಡ ನೀವು ಲಿಮಿಟಿನಲ್ಲಿ ತಿನ್ನಬೇಕು. ಮತ್ತು ಶೇಂಗಾ ಚಿಕ್ಕಿ ತಿಂದ ಮೇಲೆ ನೀವು ನೀರು ಕುಡಿಯಬಾರದು.