Friday, December 13, 2024

Latest Posts

ಡ್ರೈಫ್ರೂಟ್ಸ್ ಲಾಡು ತಯಾರಿಸುವುದು ಹೇಗೆ..? ಇಲ್ಲಿದೆ ನೋಡಿ ವೀಡಿಯೋ ಸಮೇತ ರೆಸಿಪಿ

- Advertisement -

Recipe: ಇಂದು ನಾವು ನಿಮಗೆ ಡ್ರೈಫ್ರೂಟ್ಸ್ ಲಡ್ಡು ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಲಿದ್ದೇವೆ. ಪ್ರತಿದಿನ ಬೆಳಿಗ್ಗೆ ಒಂದು ಡ್ರೈಫ್ರೂಟ್ಸ್ ಲಡ್ಡು ಸೇವನೆಯಿಂದ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ದೇಹಕ್ಕೆ ಶಕ್ತಿ, ಚೈತನ್ಯ ಸಿಗುತ್ತದೆ. ಅಲ್ಲದೇ, ಕೂದಲು ಮತ್ತು ತ್ವಚೆಯ ಸೌಂದರ್ಯ ಕೂಡ ಹೆಚ್ಚುತ್ತದೆ. ಹಾಗಾದ್ರೆ ಡ್ರೈಫ್ರೂಟ್ಸ್ ಲಡ್ಡು ಹೇಗೆ ಮಾಡುವುದು ಅಂತಾ ತಿಳಿಯೋಣ ಬನ್ನಿ..

2 ಟೇಬಲ್ ಸ್ಪೂನ್ ತುಪ್ಪ, ಒಂದು ಬೌಲ್ ತರಿ ತರಿಯಾಗಿ ಪುಡಿ ಮಾಡಿದ ಬಾದಾಮಿ, ಗೋಡಂಬಿ, ಕೊಬ್ಬರಿ ತುರಿ, ಒಣ ಖರ್ಜೂರ, ಒಂದು ಬೌಲ್ ಗೋಂದ(ಇದನ್ನು ಅಂಟು ಅಂತಲೂ ಕರೆಯುತ್ತಾರೆ). ಒಣದ್ರಾಕ್ಷಿ, ಪಿಸ್ತಾ, ಒಂದು ಟೇಬಲ್ ಸ್ಪೂನ್ ಮೆಂತ್ಯೆ ಪುಡಿ, ಏಲಕ್ಕಿ ಪುಡಿ, ಇವಿಷ್ಟು ಡ್ರೈಫ್ರೂಟ್ಸ್ ಲಾಡು ತಯಾರಿಸೋಕ್ಕೆ ಬೇಕಾಗಿರುವ ಪದಾರ್ಥಗಳು.

ಮೊದಲು ಪ್ಯಾನ್ ಬಿಸಿ ಮಾಡಿ, ತುಪ್ಪ ಹಾಕಿ ಇಲ್ಲಿ ಹೇಳಿರುವ ಎಲ್ಲ ಸಾಮಗ್ರಿಯನ್ನು (ಮೆಂತ್ಯೆ ಪುಡಿ, ಏಲಕ್ಕಿ ಪುಡಿ  ಬಿಟ್ಟು) ಸಪರೇಟ್ ಆಗಿ ಹುರಿಯಬೇಕು. ಗೋಂದ್ ಹುರಿಯುವಾಗ ಹೆಚ್ಚು ತುಪ್ಪ ಬೇಕಾಗಬಹುದು. ಏಕೆಂದರೆ ಇದು ಕರಿದಾಗ, ಪಾಪ್‌ಕಾರ್ನ್ ರೀತಿ ಉಬ್ಬುತ್ತದೆ. ಇನ್ನು ಖರ್ಜೂರ ವನ್ನು ಹುರಿಯಬೇಕು ಅಂತಿಲ್ಲ, ಪಿಸ್ತಾ ಈಗಾಗಲೇ ಹುರಿದಿದ್ದರೆ, ಅದನ್ನು ಹಾಗೇ ಸೇರಿಸಬಹುದು.

ಈಗ ಇದಕ್ಕೆ ಬೇಕಾದಷ್ಟು ಬೆಲ್ಲದ ಪಾಕವನ್ನು ತಯಾರಿಸಿಕೊಳ್ಳಿ. ಈಗ ಹುರಿದ ಸಾಮಗ್ರಿ, ಮೆಂತ್ಯೆ ಪುಡಿ, ಏಲಕ್ಕಿ ಪುಡಿ ಮತ್ತು ಖರ್ಜೂರವನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಉಂಡೆ ಕಟ್ಟುವ ಹದಕ್ಕೆ ಈ ಮಿಶ್ರಣ ಬಂದ ಮೇಲೆ ಗ್ಯಾಸ್ ಆಫ್ ಮಾಡಿ. ತಕ್ಷಣ ನೀವು ಉಂಡೆ ಕಟ್ಟಲು ಶುರು ಮಾಡಬೇಕು. ಇದನ್ನು ಹಾಗೇ ಬಿಟ್ಟಲ್ಲಿ, ಈ ಮಿಶ್ರಣ ಗಟ್ಟಿಯಾಗುತ್ತದೆ. ಹಾಗಾಗಿ ತುಪ್ಪದ ಸಹಾಯದಿಂದ ಉಂಡೆ ಕಟ್ಟಬೇಕು. ಈ ರೆಸಿಪಿ ಹೇಗೆ ಮಾಡಬೇಕು ಎಂದು ತಿಳಿಯಬೇಕಾದಲ್ಲಿ ಈ ವೀಡಿಯೋ ನೋಡಿ..

ರವೆ ಲಾಡು ರೆಸಿಪಿ: ವೀಡಿಯೋ ಸಮೇತ

ನಿಮ್ಮ ಮುಖ ಸುಂದರವಾಗಿ ಕಾಣಬೇಕು ಅಂದ್ರೆ ಈ ಸೇರಮ್ ಬಳಸಿ ನೋಡಿ..

ವಿವಾಹಿತೆಯರು ಇಂಥ ತಪ್ಪುಗಳನ್ನು ಎಂದಿಗೂ ಮಾಡಬೇಡಿ..

- Advertisement -

Latest Posts

Don't Miss