ಕೆಲವರಿಗೆ ಒಮ್ಮೆ ಸೀನು ಬಂದರೆ, ಒಂದೇ ಬಾರಿ 7 ಸಲ ಸೀನುತ್ತಾರೆ. ಅಥವಾ ಅವರಿಗೆ ಪದೇ ಪದೇ ಸೀನು ಬರುತ್ತಲೇ ಇರುತ್ತದೆ. ಶೀತವಿಲ್ಲದಿದ್ದರೂ, ಸೀನಂತೂ ಬರುತ್ತದೆ. ಅದು ಅಲರ್ಜಿಯ ಪ್ರಭಾವ. ಹಾಗಾದ್ರೆ ಪದೇ ಪದೇ ಸೀನು ಬಂದರೆ, ಅದಕ್ಕೆ ಹೇಗೆ ಮನೆಮದ್ದು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಧೂಳು, ಮಣ್ಣಿನ ಕಣಗಳು ಮುಖಕ್ಕೆ ಸೋಕುವುದರಿಂದ ಕೆಲವರಿಗೆ ಸೀನು ಬರುತ್ತದೆ. ಅಲ್ಲದೇ, ಕೆಲ ಅಲರ್ಜಿಗಳಿಂದಲೂ ಸೀನು ಬರುತ್ತದೆ. ಅಂಥವರು ಒಂದು ಚಿಕ್ಕ ಲೋಟ ನೀರನ್ನು ಬಿಸಿ ಮಾಡಿ, ಅದರಲ್ಲಿ ಚಿಕ್ಕ ತುಂಡು ಶುಂಠಿ ಹಾಕಿ, ಅದನ್ನು ಕುದಿ ಬರಿಸಿ. ಸೋಸಿ, ಆ ಕಶಾಯಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ. ರಾತ್ರಿ ಮಲಗುವ ಮುನ್ನ ಇದನ್ನು ಕುಡಿದು ಮಲಗಿದ್ರೆ, ಸೀನು ಬರುವುದು ನಿಲ್ಲುತ್ತದೆ.
ಅಲ್ಲದೇ ಒಂದು ಬೆಳ್ಳುಳ್ಳಿ ಎಸಳನ್ನು ಜಜ್ಜಿ ಅದರ ಪರಿಮಳ ತೆಗೆದುಕೊಳ್ಳುವುದರಿಂದಲೂ, ಸೀನು ಬರುವುದು ನಿಲ್ಲುತ್ತದೆ. ವಾರದಲ್ಲಿ ಎರಡು ಬಾರಿ ಬಿಸಿ ನೀರಿನಲ್ಲಿ ಮಿಂಟ್ ಎಣ್ಣೆಯನ್ನ ಹಾಕಿ, ಅದರ ಹಬೆ ತೆಗೆದುಕೊಳ್ಳಿ. ಆದ್ರೆ ಇದು ಅತಿಯಾಗಬಾರದು. ಇದು ಅತೀಯಾಗಿ ತೆಗೆದುಕೊಂಡ್ರೆ, ಮೂಗಿನಿಂದ ರಕ್ತ ಬರುವ ಸಾಧ್ಯತೆ ಇರುತ್ತದೆ.
ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?