Tuesday, October 22, 2024

Latest Posts

ಮನೆಯಲ್ಲೇ ಸೋಪ್ ತಯಾರಿಸೋದು ಹೇಗೆ..?

- Advertisement -

ನಾವು ಮಾರುಕಟ್ಟೆಯಿಂದ ವೆರೈಟಿ ವೆರೈಟಿ ಸೋಪ್‌ಗಳನ್ನ ತಂದು ಬಳಕೆ ಮಾಡಿದ್ರೂ, ನಮ್ಮ ತ್ವಚೆಯ ಸಮಸ್ಯೆ ಎಂದೂ ಸಂಪೂರ್ಣವಾಗಿ ಕಡಿಮೆಯಾಗುವುದಿಲ್ಲ. ಹಾಗಾಗಿ ನಾವಿಂದು ಮನೆಯಲ್ಲೇ ಸೋಪ್ ತಯಾರು ಮಾಡೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಮೊದಲನೇಯದಾಗಿ ಸೋಪ್ ಮಾಡಲು ಬೇಕಾಗುವ ಸಾಮಗ್ರಿ ತೆಗೆದುಕೊಳ್ಳಿ. ಎಸ್ಸೆನ್ಶಿಯಲ್ ಆಯಿಲ್, ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ, ಸೋಪ್ ಬೇಸ್. ಆನ್‌ಲೈನ್‌ನಲ್ಲಿ ನಿಮಗೆ ಈ ಎಲ್ಲ ವಸ್ತುಗಳು ಈಸಿಯಾಗಿ ಸಿಗುತ್ತದೆ. ಕ್ಯಾಸ್ಟೈಲ್ ಸೋಪ್ ಎಂದು ಹುಡುಕಿದರೆ, ನಿಮಗೆ ಸೋಪ್ ಬೇಸ್ ಪ್ರಾಡಕ್ಟ್ಗಳು ಸಿಗುತ್ತದೆ.

ಆ್ಯಲೋವೆರಾ ಸೋಪ್ ತಯಾರಿಸಲು, ನ್ಯಾಚುರಲ್ ಆ್ಯಲೋವೆರಾ ಜೆಲ್, ಎಸ್ಸೆನ್ಶಿಯಲ್ ಆಯಿಲ್, ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ, ಸೋಪ್ ಬೇಸ್ ತೆಗೆದುಕೊಳ್ಳಿ. ಒಂದು ಮಿಕ್ಸಿ ಜಾರ್‌ಗೆ ಅರ್ಧ ಕಪ್ ಆ್ಯಲೋವೆರಾ ಜೆಲ್, ಸೋಪ್ ಬೇಸ್ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಎರಡು ಸ್ಪೂನ್ ತೆಂಗಿನ ಎಣ್ಣೆ ಮತ್ತು ನಾಲ್ಕು ಹನಿ ಎಸೆನ್ಶಿಯಲ್ ಎಣ್ಣೆ ಹಾಕಿ ಎರಡು ಬಾರಿ, ಮಿಕ್ಸಿ ಮಾಡಿ.

ಈ ನೊರೆ ನೊರೆಯಾದ ಲಿಕ್ವಿಡ್ ಸಿಗುತ್ತದೆ. ಇದನ್ನು ಐಸ್ ಕ್ಯೂಬ್ಸ್ ಟ್ರೇಗೆ ಹಾಕಿ, 12 ತಾಸುಗಳ ಕಾಲ ಹಾಗೆ ಬಿಡಿ. ಈಗ ರೆಡಿಯಾದ ಸೋಪನ್ನ ಒಂದು ಡಬ್ಬದಲ್ಲಿ ಶೇಖರಿಸಿ ಇಟ್ಟು, ಬಳಸಿ. ಇದೇ ರೀತಿ ನೀವು ಕಡಲೆ ಹಿಟ್ಟು, ಮುಲ್ತಾನಿ ಮಿಟ್ಟಿ, ತುಳಸಿ, ಪುದೀನಾ ಎಲೆ, ಆರೆಂಜ್, ನಿಂಬೆ ಹಣ್ಣು, ಹೀಗೆ ಹಲವು ರೀತಿಯ ಸೋಪನ್ನ ತಯಾರು ಮಾಡಬಹುದು.

- Advertisement -

Latest Posts

Don't Miss