Health Tips: ತಂದೆಗೆ ಅಥವಾ ತಾಯಿಗೆ ಹೆಚ್‌ಐವಿ ಪಾಸಿಟಿವ್ ಇದ್ದಾಗ, ಏನು ಮಾಡಬೇಕು..? ಮಗುವಿಗೆ ಅದು ಹರಡದಂತೆ ತಡೆಯುವುದು ಹೇಗೆ ಅನ್ನುವ ವಿಚಾರದ ಬಗ್ಗೆ ವೈದ್ಯರಾದ ಡಾ.ಸುರೇಂದ್ರ ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಪತಿಗೆ ಹೆಚ್‌ಐವಿ ಇದೆ ಎಂದು ಗೊತ್ತಾದಾಗ, ಅವರು ಮಗು ಮಾಡಿಕೊಳ್ಳುವ ಯೋಚನೆಯೇ ಮಾಡಬಾರದು. (ಅವಿವಾಹಿತರಾಗಿದ್ದಲ್ಲಿ, ವಿವಾಹದ ಯೋಚನೆಯೂ ಮಾಡಬಾರದು). ಏಕೆಂದರೆ, ಪತಿ ಪತ್ನಿಯೊಂದಿಗೆ ದೈಹಿಕ ಸಂಬಂಧ ಹೊಂದಿದಾಗ, ಆಕೆಯೂ ಹೆಚ್‌ಐವಿ ಬರುತ್ತದೆ. ಮತ್ತು ಆಕೆಗೆ ಹುಟ್ಟುವ ಮಗುವಿಗೂ ಹೆಚ್‌ಐವಿ ಬರುತ್ತದೆ. ಹಾಗಾಗಿ ಒಬ್ಬರಿಂದ ಇವರೆಲ್ಲ ರೋಗವನ್ನು ಅನುಭವಿಸುವ ಬದಲು, ವಿವಾಹ ಮತ್ತು ಸಂತಾನದ ಬಗ್ಗೆ ಯೋಚನೆ ಮಾಡದಿರುವುದೇ ಉತ್ತಮ.
ಇನ್ನು ತಾಯಿಗೆ ಹೆಚ್‌ಐವಿ ಪಾಸಿಟಿವ್ ಇದ್ದಾಗಲೂ ಕೂಡ ಇದೇ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇದರಿಂದಲೂ ಇಬ್ಬರ ಜೀವನ ಕಷ್ಟಕ್ಕೆ ಬೀಳುತ್ತದೆ. ಇನ್ನು ಅಪ್ಪ ಅಮ್ಮ ಇಬ್ಬರಿಗೂ ಹೆಚ್‌ಐವಿ ಪಾಸಿಟಿವ್ ಇದ್ದು, ಈಗಾಗಲೇ ಗರ್ಭಿಣಿಯಾಗಿದ್ದಲ್ಲಿ, ಅಂಥವರಿಗೆ ಸಿಸೆರಿನ್ ಮೂಲಕ ಡಿಲೆವರಿ ಮಾಡಿ, ಮಗುವನ್ನು ಸೋಂಕಿನಿಂದ ರಕ್ಷಿಸಲಾಗುತ್ತದೆ. ಆದರೂ ಅದನ್ನು ಮತ್ತಷ್ಟು ರಕ್ಷಿಸುವುದು ತಂದೆ ತಾಯಿಯ ಜವಾಬ್ದಾರಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..