Health Tips: ಹೆಣ್ಣು ಮಕ್ಕಳು ಬರೀ ಮುಖದ ಆರೋಗ್ಯ, ಸೌಂದರ್ಯ ಕಾಪಾಡಿಕೊಂಡರೆ ಸಾಲದು. ಬದಲಾಗಿ ಉಗುರು, ಕೂದಲಿನ ಬಗ್ಗೆಯೂ ಗಮನ ಕೊಡಬೇಕು. ಏಕೆಂದರೆ, ಕೂದಲು ಸೊಂಪಾಗಿದ್ದಾಗ, ಉಗುರು ಚೆಂದವಿದ್ದಾಗ, ನೀವು ಇನ್ನೂ ಆಕರ್ಷಕವಾಗಿ ಕಾಣುತ್ತೀರಿ. ಹಾಗಾಗಿ ವೈದ್ಯೆಯಾದ ಡಾ.ದೀಪಿಕಾ ಇಂದು ಉಗುರಿನ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಉಗುರಿನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನೀವು ಮೊದಲು ಮೆನಿಕ್ಯೂರ್, ಪೆಡಿಕ್ಯೂರ್ ಮಾಡಿಸಿಕೊಳ್ಳುವುದನ್ನು ಅವೈಡ್ ಮಾಡಬೇಕು. ಏಕೆಂದರೆ, ಬ್ಯೂಟಿ ಪಾರ್ಲರ್‌ನಲ್ಲಿ ಈ ಚಿಕಿತ್ಸೆ ನೀಡುವಾಗ, ಕೆಮಿಕಲ್‌ಗಳನ್ನು ಬಳಸೇ ಬಳಸುತ್ತಾರೆ. ಆಗ ನಿಮ್ಮ ಉಗುರು ಮತ್ತು ಕಾಲಿನ ಚರ್ಮದ ಆರೋಗ್ಯ ಬಹುಬೇಗ ಹಾಳಾಗುತ್ತದೆ. ಈ ಕಾರಣಕ್ಕೆ ಉಗುರಿನ ಆರೋಗ್ಯವನ್ನು ಆದಷ್ಟು ಮನೆಯಲ್ಲೇ ಕಾಪಾಡಿಕೊಳ್ಳಿ.
ದೇಹದ ಒಳಗಿನ ಆರೋಗ್ಯ ಉತ್ತವಾಗಿದ್ದಾಗ, ಸೌಂದರ್ಯ ಎದ್ದು ಕಾಣುತ್ತದೆ. ಹಾಗಾಗಿ ನೀವು ಬಯೋಟಿನ್ ಇರುವ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಆಗ ನಿಮ್ಮ ಉಗುರು ಆರೋಗ್ಯವಾಗಿರುತ್ತದೆ. ಮೆಗ್ನಿಷಿಯಂ, ಜಿಂಕ್, ಐರನ್ ಇವೆಲ್ಲವೂ ಇರುವ ಆಹಾರಗಳನ್ನು ಸೇವಿಸಬೇಕು. ಉಗುರು ಬೆಳೆಯುತ್ತಿದ್ದಂತೆ, ನೀಟ್ ಆಗಿ ಕಟ್ ಮಾಡಬೇಕು. ಉಗುರನ್ನು ಸ್ವಚ್ಛವಾಗಿರಿಸಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಗರ್ಭಿಣಿಯರು ಅಗತ್ಯಕ್ಕಿಂತ ಹೆಚ್ಚು ಸಿಹಿ ತಿಂಡಿ ತಿನ್ನಬಾರದು ಅಂತಾ ಹೇಳುವುದು ಯಾಕೆ..?
ಮಕ್ಕಳು ಬುದ್ಧಿವಂತರಾಗಿರಬೇಕು ಅಂದ್ರೆ ಇಂಥ ಆಹಾರ ಕೊಡುವುದನ್ನು ನಿಲ್ಲಿಸಿ..
ಮಕ್ಕಳ ಹೊಟ್ಟೆ ತುಂಬಲು ಹಾಲು ಬಿಸ್ಕೇಟ್ ಕೊಡುತ್ತೀರಾ..? ಅದೆಷ್ಟು ಅಪಾಯಕಾರಿ ಗೊತ್ತಾ..?