Friday, November 22, 2024

Latest Posts

ಮನೆಯಲ್ಲಿ ಮಕ್ಕಳಿಗೆ ಹೇಗೆ ಪಾಠ ಹೇಳಿಕೊಡಬೇಕು..?

- Advertisement -

Health Tips: ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಅನ್ನೋದು ಜೀವನದ ಸತ್ಯ. ಯಾಕಂದ್ರೆ, ಮಕ್ಕಳು ತಾಯಿಯ ಮಾತನ್ನೇ ಅನುಕರಿಸುತ್ತಾರೆ. ಹಾಗಾಗಿಯೇ ಎಷ್ಟೋ ಜನ, ತಾಯಿಯ ಭಾಷೆಯನ್ನೇ ಮಾತನಾಡುತ್ತಾರೆ. ಹಾಗಾಗಿಯೇ ಮನೆಯಲ್ಲಿ ಮಾತನಾಡುವ ಭಾಷೆಯನ್ನನು ಮಾತೃಭಾಷೆ ಎಂದು ಕರೆಯಲಾಗುತ್ತದೆ. ಇಂಥ ತಾಯಂದಿರಿಗೆ ಇರುವ ಇನ್ನೊಂದು ಚಾಲೆಂಜ್ ಅಂದ್ರೆ, ಮಕ್ಕಳು ಶಾಲೆಗೆ ಹೋಗುವ ಮುನ್ನ, ಅದಕ್ಕೆ ಬೇಕಾದ ಬೇಸಿಕ್ ಪಾಠಗಳನ್ನನು ಕಲಿಸುವುದು. ಹಾಗಾಗಿ ಶಾಲೆಗೆ ಹೋಗುವ ಮುನ್ನ ನಿಮ್ಮ ಮಕ್ಕಳಿಗೆ ನೀವು ಹೇಗೆ ತರಬೇತಿ ಕೊಡಬೇಕು ಅನ್ನವ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ ನೋಡಿ..

ಮಕ್ಕಳು ನೀವು ಮಾತನಾಡುವುದನ್ನು ಮೊದಲು ಕೇಳಿಸಿಕೊಳ್ಳುತ್ತಾರೆ. ಹಾಗಾಗಿ ಒಳ್ಳೆಯದನ್ನು ಮಾತನಾಡಿ, ಬೈಗುಳ ಬೈಯ್ಯುವುದು, ಕೆಟ್ಟ ಕೆಟ್ಟದಾಗಿ ಮಾತನಾಡುವುದೆಲ್ಲ ಮಾಡಬೇಡಿ. ಇದನ್ನು ಕೂಡ ಮಕ್ಕಳು ಕಲಿಯುತ್ತಾರೆ. ಭಜನೆ, ಶ್ಲೋಕಗಳು, ಕನ್ನಡ- ಇಂಗ್ಲೀಷ್ ಪದ್ಯಗಳನ್ನು ಹಾಡುತ್ತೀರಿ. ಮಕ್ಕಳು ಕೂಡ ನೀವು ಹಾಡುವುದನ್ನು ಕೇಳಿಸಿಕೊಂಡು ಕಲಿಯುತ್ತಾರೆ.

ಇನ್ನು ತರಕಾರಿ, ಹಣ್ಣು, ಸೊಪ್ಪು, ಕಾಳುಗಳು ಬಗ್ಗೆ ತಿಳಿಸಿಕೊಡುವಾಗ, ಆದಷ್ಟು ಆ ತರಕಾರಿ, ಹಣ್ಣುಗಳನ್ನು ಮುಂದಿಟ್ಟುಕೊಂಡು ಕಲಿಸಿ. ನೀವು ಅಡುಗೆ ಮಾಡುವಾಗ ಬಳಸುವ ತರಕಾರಿಗಳನ್ನು, ಸೊಪ್ಪು, ಕಾಳುಗಳನ್ನು ತೋರಿಸಿ, ಅದರ ಹೆಸರು ಹೇಳಿ. ನಂತರ ಮಕ್ಕಳಿಗೂ ಇದೇನು ಎಂದು ಪ್ರಶ್ನಿಸಿ. ಈ ರೀತಿ ಮಕ್ಕಳು ತರಕಾರಿ, ಹಣ್ಣುಗಳನ್ನು ಗುರುತಿಸಲು ಕಲಿಯುತ್ತಾರೆ. ಇನ್ನು ಪ್ರಾಣಿ ಪಕ್ಷಿಗಳ ಬಗ್ಗೆ ಹೇಳಿಕೊಡಬೇಕು ಎಂದಲ್ಲಿ, ನೀವು ಚಿತ್ರ, ಟಿವಿ ನೋಡಿ ಮಕ್ಕಳಿಗೆ ತಿಳಿಸಿಕೊಡಬಹುದು. ಜೂಗಳಿಗೆ ಕರೆದುಕೊಂಡು ಹೋಗಬಹುದು.

ವಾರದ ಹೆಸರು, ಬಣ್ಣದ ಹೆಸರು, ತಿಂಗಳುಗಳ ಹೆಸರು ಹೇಳುವುದು, ಬಣ್ಣಗಳನ್ನು ಗುರುತಿಸಲು ಹೇಳಿಕೊಡಿ. ಇದಕ್ಕಾಗಿ ಕಾರ್ಡ್ ಬಳಸುವುದು ಉತ್ತಮ ದಾರಿ. ಇನ್ನು ಸ್ನಾನ ಮಾಡುವಾಗ, ಮಕ್ಕಳಿಗೆ ರೆಡಿ ಮಾಡುವ ಸಮಯದಲ್ಲೂ ನೀವು ಈ ರೀತಿ ಬಾಯಿಪಾಠಗಳನ್ನು ಕೇಳಿ. ಅವರು ಹೇಳುವಾಗ, ಅವರೊಂದಿಗೆ ನೀವು ಹೇಳಿ. ಇದರಿಂದ ಮಕ್ಕಳು ಎಂಜಾಯ್ ಮಾಡುತ್ತ ಬೇಗ ಕಲಿಯುತ್ತಾರೆ.

ಆದರೆ ಕೆಲ ಮಕ್ಕಳಿಗೆ ಹೇಳಿದ್ದೆಲ್ಲ ಬೇಗ ಬೇಗ ತಲೆಗೆ ಹತ್ತುವುದಿಲ್ಲ. ಅವರು ಲೇಟ್ ಆಗಿ ಕಲಿಯುವವರಾಗಿರುತ್ತಾರೆ. ಅಂಥ ಮಕ್ಕಳ ಪೋಷಕರು ತಾಳ್ಮೆಯಿಂದ ಮಕ್ಕಳಿಗೆ ಇದನ್ನೆಲ್ಲ ಹೇಳಿಕೊಡಿ. ಮಕ್ಕಳು ಪಾಠ ಹೇಳಲಿಲ್ಲವೆಂದು ಬಯ್ಯುವುದು, ಬಡಿಯುವುದೆಲ್ಲ ಮಾಡಬೇಡಿ. ಇದರಿಂದ ಮಕ್ಕಳಿಗೆ ಮೊಂಡು ಸ್ವಭಾವ ಬರುತ್ತದೆ. ಇನ್ನು ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸಲು ಒಂದೆಲಗದ ಒಂದು ಎಲೆಯನ್ನು ಪ್ರತಿದಿನ ತಿನ್ನಲು ಕೊಡಿ.

ಅವಲಕ್ಕಿ ಶೀರಾ ರೆಸಿಪಿ

ಹುಟ್ಟುವ ಮಗುವಿನ ತೂಕ ಎಷ್ಟಿರಬೇಕು?

ಗರ್ಭಿಣಿಯರಿಗೆ ವೈಟ್ ಡಿಸ್ಚಾರ್ಜ್ ಆಗಲು ಕಾರಣವೇನು..? ಇದು ಸಹಜನಾ..? ಅಸಹಜನಾ..?

- Advertisement -

Latest Posts

Don't Miss