Friday, April 18, 2025

Latest Posts

ಗರ್ಭಿಣಿಗೆ ಕ್ಯಾನ್ಸರ್ ಬಂದಾಗ ಹೇಗೆ ಚಿಕಿತ್ಸೆ ಮಾಡಲಾಗತ್ತೆ..?

- Advertisement -

Health Tips: ಕ್ಯಾನ್ಸರ್‌ ಗುಣಗಳೇನು..? ಸ್ತನ ಕ್ಯಾನ್ಸರ್ ಲಕ್ಷಣಗಳೇನು..? ಇದು ಅನುವಂಶಿಕವಾಗಿ ಬರುತ್ತದೆಯಾ..? ಕ್ಯಾನ್ಸರ್ ಲಕ್ಷಣ ಕಂಡುಬಂದಾಗ ಏನು ಮಾಡಬೇಕು ಎಂಬ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ತಾಯಿಯಿಂದ ಮಗುವಿಗೆ ಕ್ಯಾನ್ಸರ್ ಬರುತ್ತಾ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಗರ್ಭಿಣಿ ಮಹಿಳೆಗೆ ಕ್ಯಾನ್ಸರ್ ಇದ್ದರೆ, ಅವರಿಗೆ ಹುಟ್ಟುವ ಮಗುವಿಗೂ ಕ್ಯಾನ್ಸರ್ ಬರುತ್ತಾ..? ಆ ಗರ್ಭಿಣಿಗೆ ಯಾವ ರೀತಿ ಟ್ರೀಟ್‌ಮೆಂಟ್ ಕೊಡಲಾಗುತ್ತೆ ಅನ್ನೋದು ನಮ್ಮ ಪ್ರಶ್ನೆಯಾಗಿತ್ತು. ಇದಕ್ಕೆ ಉತ್ತರಿಸಿದ ವೈದ್ಯರು, ಗರ್ಭಿಣಿಗೆ 8 ತಿಂಗಳು ತುಂಬಿದರೆ, ಇನ್ನು ಕೆಲ ದಿನಗಳ ಕಾಲ ತಡೆದು, ಡಿಲೆವರಿ ಆದ ಬಳಿಕ ಚಿಕಿತ್ಸೆ ಶುರು ಮಾಡುತ್ತಾರೆ. ಆದರೆ ಮಗು ಸರಿಯಾಗಿ ಬೆಳೆಯದಿದ್ದಾಗ, ತಾಯಿಗೆ ಕ್ಯಾನ್ಸರ್‌ ಬಂದರೆ, ಆಗ ವೈದ್ಯರು ತಡ ಮಾಡದೇ, ಚಿಕಿತ್ಸೆ ಆರಂಭಿಸುತ್ತಾರೆ. ಆಗ ಮಗುವಿನ ಜೀವ ಉಳಿಸಲು ಕಷ್ಟವಾಗಬಹುದು.

ಇನ್ನು ಕ್ಯಾನ್ಸರ್ ಬರದಂತೆ ತಡೆಗಟ್ಟಲು, ನಾವು ಹೆಚ್ಚು ಮನೆಯೂಟವನ್ನು ಸೇವಿಸಬೇಕು. ಆ ಊಟದಲ್ಲಿ ಸೋಡಾ, ರುಚಿ ಬರುವ ಪೌಡರ್‌ಗಳನ್ನೆಲ್ಲ ಬಳಸಬಾರದು. ಉತ್ತಮವಾದ ಎಣ್ಣೆ ಬಳಸಿ ಅಡುಗೆ ತಯಾರಿಸಿರಬೇಕು. ಬೆಳಗ್ಗೆ ತಯಾರಿಸಿದ ತಿಂಡಿಯನ್ನು ಬೆಳಿಗ್ಗೆಯೇ ಬಿಸಿ ಬಿಸಿಯಾಗಿ ಸೇವಿಸಬೇಕು. ಅದನ್ನು ಬಿಟ್ಟು, ಆ ಆಹಾರವನ್ನು ಫ್ರಿಜ್‌ನಲ್ಲಿರಿಸಿ, ಆಮೇಲೆ ಬಿಸಿ ಮಾಡಿಕೊಂಡು ತಿನ್ನಬಾರದು.

ಹೆಚ್ಚು ಜಂಕ್‌ಫುಡ್, ಕರಿದ ತಿಂಡಿ, ಕೂಲ್ ಡ್ರಿಂಕ್ಸ್ ಇಂಥವುಗಳ ಸೇವನೆಯಿಂದಲೇ ಕ್ಯಾನ್ಸರ್ ಬರುತ್ತದೆ. ಹಣ್ಣು, ತರಕಾರಿ, ಸೊಪ್ಪು, ಮೊಳಕೆ ಕಾಳುಗಳ ಸೇವನೆ ಹೆಚ್ಚು ಮಾಡಬೇಕು. ಇವುಗಳ ಸೇವನೆ ಮಾಡುವಾಗ, ಇವುಗಳನ್ನು ಸ್ವಚ್ಛವಾಗಿ ತೊಳೆದು ಬಳಸಬೇಕು. ಚೆನ್ನಾಗಿ ನೀರು ಕುಡಿಯಬೇಕು. ನಮ್ಮ ಸುತ್ತಮುತ್ತಲಿನ ವಾತಾವರಣ, ನಮ್ಮ ಮನೆ, ನಮ್ಮ ದೇಹವನ್ನು ನಾವು ಸ್ವಚ್ಛವಾಗಿರಿಸಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಈ ಚಟ್ನಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ..

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 1

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 2

- Advertisement -

Latest Posts

Don't Miss