Wednesday, November 29, 2023

Latest Posts

ದಚ್ಚು ಕ್ಲಿಕ್ ಮಾಡಿದ್ದ ಫೋಟೋ ಖರೀದಿಸಿದ ಚಿಕ್ಕಣ್ಣ

- Advertisement -

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲಿಕ್ ಮಾಡಿದ್ದ ಫೋಟೋವನ್ನ, ಹಾಸ್ಯನಟ ಚಿಕ್ಕಣ್ಣ ಬರೋಬ್ಬರಿ 1 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದಾರೆ.

ಕೆಲ ತಿಂಗಳ ಹಿಂದೆ ನಟ ದರ್ಶನ್ ಫಾರೆಸ್ಟ್ ವಾಚರ್ಸ್ ಕ್ಷೇಮಾಭಿವೃದ್ಧಿಗೆ ದೇಣಿಗೆ ಸಂಗ್ರಹಿಸಲು ತಾವು ತೆಗೆದಿದ್ದ ಫೋಟೋಗಳ  ಮಾರಾಟ ಹಾಗೂ ಪ್ರದರ್ಶನ ಏರ್ಪಡಿಸಿದ್ದರು. ಇದೀಗ ಚಿಕ್ಕಣ್ಣ, ದಚ್ಚು ತೆಗೆದಿರೋ ಆನೆಯ ದೊಡ್ಡ ಫೋಟೋವನ್ನ 1 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ಆನೆಯ ಫೋಟೋವನ್ನು ದಚ್ಚು ಅತ್ಯದ್ಭುತವಾಗಿ ತೆಗೆದಿದ್ದಾರೆ. ಇನ್ನು ವಿಷಯವನ್ನು ದರ್ಶನ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ‘ನಮ್ಮ ಚಿಕ್ಕಣ್ಣ, ನಾನು ಸೆರೆಹಿಡಿದಿದ್ದ ಆನೆಯ ಫೋಟೋವನ್ನು ಅರಣ್ಯ ಇಲಾಖೆ ನೆರವಿಗಾಗಿ 1 ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿರೋದು ಶ್ಲಾಘನೀಯ. ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನನ್ನ ಕೃತಜ್ಞತೆಗಳು’ ಅಂತ ಟ್ವೀಟ್ ಮಾಡಿದ್ದಾರೆ.

- Advertisement -

Latest Posts

Don't Miss