Saturday, April 12, 2025

Latest Posts

ಹುಬ್ಬಳ್ಳಿ ಆಕಾಶ್ ಹಿರೇಮಠ ಕೊ*ಲೆ ಪ್ರಕರಣ: 8 ಜನರ ಬಂಧನ

- Advertisement -

Hubli News: ಹುಬ್ಬಳ್ಳಿ: ಆಟೋ ಚಾಲಕ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಪುತ್ರ ಆಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಎಂಟು ಮಂದಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ತಿಳಿಸಿದ್ದಾರೆ. ಶನಿವಾರ (ಜೂ.22) ರಾತ್ರಿ 30 ವರ್ಷದ ಆಕಾಶ್ ಮಠಪತಿಯನ್ನು ಲೋಹಿಯಾ ನಗರದ ಪವನ್ ಸ್ಕೂಲ್ ಹಿಂಭಾಗ ಕೊಲೆ ಮಾಡಲಾಗಿತ್ತು. ಪುತ್ರ ಆಕಾಶ್ ಕೊಲೆ ಅವನ ಸ್ನೇಹಿತರಿಂದಲೇ ಆಗಿದೆ ಎಂದು ತಂದೆ ಶೇಖರಯ್ಯ ಮಠಪತಿ ಅನುಮಾನ ವ್ಯಕ್ತಪಡಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಆಕಾಶ್ ಮಠಪತಿ ಪತ್ನಿ, ಅತ್ತೆ ಮತ್ತಯ ಮಾವ ಸೇರಿದಂತೆ 12 ಜನರ ವಿರುದ್ಧ ಶೇಖರಯ್ಯ ಮಠಪತಿ ಅವರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ಆಕಾಶ್ ಪತ್ನಿ ಕಾವ್ಯಾ, ಅತ್ತೆ ಶ್ರಿದೇವಿ, ಮಾವ ಮೋಹನ ನಾಯಕ್, ಭರತ್ ನಾಯಕ್, ಅರ್ಜುನ್ ಮಗಲಿ, ಸಂಜು ಕೊಪ್ಪದ್, ರಾಹುಲ್ ಕಾಂಬಳೆ, ವಿನಾಯಕ ತಾಳಿಕೋಟಿ, ಮನೋಜ್, ಚಮಕ್ ಮೌನೇಶ್, ಮಹೇಶ್ ಮತ್ತು ಕಾರ್ತಿಕ್ ರಜಪೂತ್ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 1860 ಯು/ಎಸ್ 149-302 ಅಡಿಯಲ್ಲಿ ದಾಖಲಾಗಿದೆ.

ಮೃತ ಆಕಾಶ್ ಪತ್ನಿ ಕಾವ್ಯಾ, ಅತ್ತೆ ಶ್ರೀದೇವಿ ಮತ್ತು ಮಾವ ಮೋಹನ ನಾಯಕ್ ಅವರ ಕುಮ್ಮಕ್ಕಿನಿಂದಲೇ ಕೊಲೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ 12 ಜನರಲ್ಲಿ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ. ಮೃತ ಆಕಾಶ್ನದ್ದು ಪ್ರೇಮ ವಿವಾಹ. ಆಕಾಶ್ ಮತ್ತು ಪತ್ನಿ ಕಾವ್ಯ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ವಾಸವಾಗಿದ್ದರು.

Political News: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ರೇವಣ್ಣ ಅರೆಸ್ಟ್‌..

Political News: ಹಾಸನ ಪೊಲೀಸ್ ಠಾಣೆಗೆ ಬಂದ ಸೂರಜ್ ರೇವಣ್ಣ

ಲೈಂಗಿಕ ದೌರ್ಜನ್ಯ ಆರೋಪ: ಸೂರಜ್ ರೇವಣ್ಣ ವಿರುದ್ಧ FIR ದಾಖಲು

- Advertisement -

Latest Posts

Don't Miss