ಗುಜರಾತ್ : ಸೂರತ್ ನಗರದ ವಾಣಿಜ್ಯ ಸಂಕೀರ್ಣದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಸುಮಾರು 20 ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಲ್ಲಿನ ತಕ್ಷಶಿಲಾ ಆರ್ಕೇಡ್ ನಲ್ಲಿ ಈ ಅಘಡ ನಡೆದಿದೆ. 4 ಅಂತಸ್ಥಿನ ಈ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ನಲ್ಲಿ ತೀವ್ರ ತರದ ಬೆಂಕಿ ಕಾಣಿಸಿಕೊಂಡಿದೆ. ಕ್ಷಣ ಮಾತ್ರದಲ್ಲಿ ಆವರಿಸಿದ ದಟ್ಟ ಹೊಗೆ ಸಹಿತ ಬೆಂಕಿಯನ್ನ ನೋಡಿ ಪಾರಾಗಲೆತ್ನಿಸುವಷ್ಟರಲ್ಲಿ ಕೆಲವರು ದಟ್ಟಹೊಗೆ ಸೇವಿಸಿ ಪ್ರಾಣಬಿಟ್ಟರೆ ಇನ್ನು ಕೆಲ ವಿದ್ಯಾರ್ಥಿಗಳು ಸುಟ್ಟು ಕರಕಲಾಗಿದ್ದಾರೆ. ಲಿಫ್ಟ್ ಮತ್ತು ಮೆಟ್ಟಿಲು ಮಾರ್ಗದಲ್ಲೂ ಕೂಡ ದಟ್ಟ ಹೊಗೆ ಸುತ್ತುವರೆದಿದ್ದರಿಂದ ವಿದ್ಯಾರ್ಥಿಗಳು ಅಲ್ಲೇ ಪರದಾಡುತ್ತಿದ್ದರು ಎನ್ನಲಾಗಿದೆ. ದಾರಿ ಕಾಣದ ಉಳಿದ ವಿದ್ಯಾರ್ಥಿಗಳು 4ನೇ ಮಹಡಿಯಿಂದಲೇ ಹಿಂದೂ ಮುಂದೂ ನೋಡದೆ ಜಿಗಿದು ತಮ್ಮ ಪ್ರಾಣ ಉಳಿಸಿಕೊಂಡಿದ್ದು ಅವರಿಗೆಲ್ಲಾ ಕೈ ಕಾಲು ಮುರಿತ ಮತ್ತು ಸಣ್ಣ ಪುಟ್ಟ ಗಾಯಗಳಾಗಿವೆ ಅಂತ ವರದಿಯಾಗಿದೆ.
ಇನ್ನು ಅಲ್ಲಿದ್ದ ವಿದ್ಯಾರ್ಥಿಗಳೆಲ್ಲಾ ಸುಮಾರು 14-17 ವರ್ಷ ವಯಸ್ಸಿನವರು ಅಂತ ತಿಳಿದು ಬಂದಿದ್ದು, ಕಟ್ಟಡದ ಕೆಳಗಿನಿಂದ ರಕ್ಷಣೆಗೆಂದು ನಿಂತಿದ್ದ ಜನರು ಜಿಗಿಯಲು ಹೇಳುತ್ತಿದ್ದಂತೆ ಕೆಳಕ್ಕೆ ಜಿಗಿದುಬಿಟ್ಟಿದ್ದಾರೆ.
ಕಟ್ಟಡಕ್ಕೆ ಅಗ್ನಿ ಸುರಕ್ಷಾ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದಾಗಿ ಸುದ್ದಿ ತಿಳಿಯುತ್ತಿದ್ದಂತೆ ಕಟ್ಟಡದ ಮಾಲೀಕರು ತಲೆಮರೆಸಿಕೊಂಡಿದ್ದಾರೆ. ಘಟನೆಯಲ್ಲಿ ಒಟ್ಟು 20 ಮಂದಿ ಸಾವನ್ನಪ್ಪಿದ್ದು, ಇನ್ನೂ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಈ ಕುರಿತು ಟ್ವೀಟ್ ಮಾಡಿರೋ ಪ್ರಧಾನಿ ನರೇಂದ್ರ ಮೋದಿ, ಈ ಘಟನೆ ನನಗೆ ತುಂಬಾ ನೋವು ತಂದಿದೆ. ಸಾವನ್ನಪ್ಪಿರುವವರ ಕುಟುಂಬಗಳಿಗೆ ದೇವರು ದುಃಖ ಬರಿಸೋ ಶಕ್ತಿ ನೀಡಲಿ. ಗಾಯಾಳುಳಿಗೆ ಎಲ್ಲಾ ಅಗತ್ಯ ನೆರವು ಒದಗಿಸಲು ಗುಜರಾತ್ ಸರ್ಕಾರ ಮತ್ತು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದೇನೆ ಅಂತ ಸಾಂತ್ವನ ಹೇಳಿದ್ದಾರೆ.
ಕಾಂಗ್ರೆಸ್ ಗೆ ಕೈ ಕೊಟ್ಟು ಬಿಜೆಪಿಗೆ ಜಾರಿಕೊಂಡ್ರಾ ಜಾರಕಿಹೊಳಿ…? ಈ ವಿಡಿಯೋ ತಪ್ಪದೇ ನೋಡಿ.