Thursday, November 30, 2023

Latest Posts

ವಿಶ್ವಕಪ್ ತಂಡ ಪ್ರಕಟಿಸಿದ ಐಸಿಸಿ, ಭಾರತದ ಇಬ್ಬರಿಗೆ ಸ್ಥಾನ..!

- Advertisement -

ಹತ್ತಾರು ರೋಚಕ ಕ್ಷಣಗಳಿಗೆ ಸಾಕ್ಷಿಯಾದ 12ನೇ ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಐಸಿಸಿ, 12 ಆಟಗಾರರ ವಿಶ್ವಕಪ್ ತಂಡವನ್ನ ಪ್ರಕಟಿಸಿದೆ. ಟೂರ್ನಿಯಲ್ಲಿ ಹಲವು ಕ್ರಿಕೆಟಿಗರು ಸ್ಥಿರ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಸಂದರ್ಭದಲ್ಲಿ ಐಸಿಸಿ, 2019ರ ಏಕದಿನ ವಿಶ್ವಕಪ್ ತಂಡವನ್ನು ಪ್ರಕಟಿಸಿದ್ದು, ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಗೆ ನಾಯಕತ್ವದ ಪಟ್ಟ ಕಟ್ಟಲಾಗಿದೆ. ಅಷ್ಟೇ ಅಲ್ಲದೇ ಭಾರತದ ರೋಹಿತ್ ಶರ್ಮಾ ಮತ್ತು ಜೆಸ್ಪ್ರೀತ್ ಬೂಮ್ರಾ ಐಸಿಸಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.


ಹೇಗಿದೆ ಐಸಿಸಿ ವಿಶ್ವಕಪ್ ತಂಡ
-ಓಪನರ್
ರೋಹಿತ್ ಶರ್ಮಾ-ಜೇಸನ್ ರಾಯ್
-ಮಿಡಲ್ ಆರ್ಡರ್
ಕೇನ್ ವಿಲಿಯಮ್ಸನ್, ಜೋ ರೂಟ್,
-ಆಲ್ ರೌಂಡರ್
ಬೆನ್ ಸ್ಟೋಕ್ಸ್, ಶಕಿಬ್ ಅಲ್ ಹಸನ್,
-ವಿಕೆಟ್ ಕೀಪರ್
ಅಲೆಕ್ಸ್ ಕ್ಯಾರಿ
-ಬೌಲರ್ಸ್
ಮಿಚೆಲ್ ಸ್ಟಾರ್ಕ್, ಜೋಫ್ರಾ ಆರ್ಚರ್, ಲಾಕಿ ಫರ್ಗುಸನ್, ಜೆಸ್ಪ್ರೀತ್ ಬೂಮ್ರಾ,
-12ನೇ ಆಟಗಾರ
ಟ್ರೆಂಟ್ ಬೌಲ್ಟ್

ವಿಶ್ವಕಪ್ ಕ್ರಿಕೆಟ್ ಮಹಾ ಸಮರದಲ್ಲಿ ಭಾಗವಹಿಸಿದ್ದ ಹತ್ತು ತಂಡಗಳ ಪೈಕಿ, ಐದು ತಂಡಗಳ ಆಯ್ದ ಆಟಗಾರರು ಮಾತ್ರ ಐಸಿಸಿ ಪ್ರಕಟಿಸಿದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ಥಾನದ ಯಾವೊಬ್ಬ ಆಟಗಾರನಿಗೂ ಐಸಿಸಿ ತಂಡದಲ್ಲಿ ಸ್ಥಾನ ದೊರೆತಿಲ್ಲ.

https://www.youtube.com/watch?v=nVEoBNyYLps
- Advertisement -

Latest Posts

Don't Miss