Tuesday, May 30, 2023

Latest Posts

ನೀರು ಹಿಡಿಯುವಾಗ ಜಡೆ ಜಗಳ- ಕಾದಾಟದಲ್ಲಿ ಓರ್ವ ಮಹಿಳೆ ಸಾವು..!

- Advertisement -

ಆಂಧ್ರಪ್ರದೇಶ: ಸಾರ್ವಜನಿಕ ನಲ್ಲಿಯಿಂದ ಕುಡಿಯುವ ನೀರು ಹಿಡಿಯುವ ವಿಚಾರಕ್ಕೆ ಶುರುವಾದ ಮಹಿಳೆಯರ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಆಂಧ್ರದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ.

ಶ್ರೀಕಾಕುಳಂ ಜಿಲ್ಲೆಯ ಸೋಂಪೇಟಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶಾಲೆಯೊಂದರ ಆವರಣದಲ್ಲಿ ಅಳವಡಿಸಲಾಗಿದ್ದ ನಲ್ಲಿಯಿಂದ ನೀರು ಹಿಡಿಯಲು ದಿನ ನಿತ್ಯ ಹತ್ತಾರು ಮಂದಿ ಬರುತ್ತಾರೆ. ಹೀಗೆ ಇಂದು ಕೂಡಾ ನೀರು ಹಿಡಿಯಲು ಮಹಿಳೆಯರು ಬಂದಿದ್ರು. ಈ ವೇಳೆ ನೀರು ಹಿಡಿಯಲು ನಾ ಮುಂದು ತಾ ಮುಂದು ಅನ್ನೋ ವಿಚಾರವಾಗಿ ಮಹಿಳೆಯರು ಕಿತ್ತಾಡಿಕೊಂಡಿದ್ದಾರೆ.

ಮಾತಿಗೆ ಮಾತು ಬೆಳೆದ ಜಗಳ ಕೈಕೈ ಮಿಲಾಯಿಸುವ ಹಂತ ತಲುಪಿದೆ. ಪದ್ಮ ಎಂಬುವವರ ಮೇಲೆ ಸುಂದರಮ್ಮ ಎಂಬುವರು ಹಲ್ಲೆ ನಡೆಸಿದ್ದಾರೆ. ಪದ್ಮಾ ಕೂಡ ಆಕೆಯ ಮೇಲೆ ಪ್ರತಿ ದಾಳಿ ನಡೆಸಿದ್ರು. ಇಬ್ಬರೂ ಮಹಿಳೆಯರು ಬಿಂದಿಗೆ, ಬಕೆಟ್ ಇತ್ಯಾದಿಗಳಿಂದ ಪರಸ್ಪರ ಬಡಿದಾಡಿಕೊಂಡಿದ್ದಾರೆ ಈ ವೇಳೆ ಪದ್ಮಾ ಎಂಬ ಮಹಿಳೆಗೆ ತಲೆ ಮತ್ತು ಎದೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಆಕೆ ಅಲ್ಲೆ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾರೆ. ಇನ್ನು ಈ ಕುರಿತು ಆರೋಪಿ ಸುಂದರಮ್ಮಾ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಸಿಂಗಂ ಪೊಲೀಸ್ ಕೆಲಸ ಬಿಟ್ಟಿದ್ದೇಕೆ..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=iHvKXkOxwIE
- Advertisement -

Latest Posts

Don't Miss