Political News: ಕರ್ನಾಟಕ ಟಿವಿ ಸಚಿನ ಸಂತೋಷ್ ಲಾಡ್ ಬಗ್ಗೆ ಕೇಳಿದ ಅಭಿಪ್ರಾಯಕ್ಕೆ ಉತ್ತರಿಸಿದ ಯುವಕರು , ಚಹಾ ಮಾರುವವರೇ ಪ್ರಧಾನಿಯಾಗಿರ್ಬೇಕಾದ್ರೆ, ಸಿದ್ಧಾಂತಗಳನ್ನು ಓದಿರುವವರು ಸಿಎಂ ಆಗುವುದರಲ್ಲಿ ತಪ್ಪಿಲ್ಲವೆಂದು ಹೇಳಿದ್ದಾರೆ.
ಜನರೆಲ್ಲ ಧರ್ಮದ ನಶೆಯಲ್ಲಿ ಹೋಗುತ್ತಿರುವಾಗ, ಸಂವಿಧಾನವೇ ಧರ್ಮ ಅಂತಾ ಹೇಳಿದ ಬುದ್ಧ ಅಂಬೇಡ್ಕರ್ ಅವರ ಬಗ್ಗೆ ಕಾರ್ಯಕ್ರಮ ಮಾಡುತ್ತಿರುವುದು ತುಂಬಾ ಒಳ್ಳೆಯದು. ಗ್ಯಾರಂಟಿಯಿಂದ ಬಡವರು ಚೆನ್ನಾಗಿದ್ದಾರೆ. ಕೆಲವು ಕುಟುಂಬಗಳಿಗೆ ಒಂದು ಹೊತ್ತಿನ ಅನ್ನ ಉಣ್ಣಲು ಕೂಡ ಕಷ್ಟವಿದೆ. ಅಂಥವರಿಗೆ ಕಾಂಗ್ರೆಸ್ ಕೊಟ್ಟ ಗ್ಯಾರಂಟಿಯಿಂದ ಉಪಯೋಗವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ ಪ್ರಧಾನಿ ಮೋದಿ ಅದಾನಿ ಅಂಬಾನಿಯವರಂಥ ಕೋಟಿ ಕೋಟಿ ಸಾಲ ಮಾಡಿರುವವರ ಸಾಲ ಮನ್ನಾ ಮಾಡಿದ್ದಾರೆ. ಆದರೆ ಬಡವರ ಸಾಲ ಮನ್ನಾ ಮಾಡಲು ಅವರಿಗೆ ಸಾಧ್ಯವಾಗಿಲ್ಲ. ಬಡವರಿಗಾಗಿ ಗ್ಯಾರಂಟಿ ಮಾಡಿಕೊಟ್ಟರೆ, ಅದು ಹೇಗೆ ಬಿಟ್ಟಿಭಾಗ್ಯವಾಗುತ್ತದೆ..? ಶ್ರೀಮಂತರ ಸಾಲ ಮನ್ನಾ ಮಾಡೋದು ಬಿಟ್ಟಿ ಭಾಗ್ಯ ಎಂದು ಯುವಕ ಕಿಡಿಕಾರಿದ್ದಾರೆ.
ಇನ್ನೋರ್ವರು ಮಾತನಾಡಿ, ಸಂತೋಷ್ ಲಾಡ್ ಅಂದ್ರೆ, ಯುವಕರ ಆಶಾ ಕಿರಣ ಇದ್ದ ಹಾಗೆ. ಅವರು ಬಡವರು, ದೀನದಲಿತರ, ಎಲ್ಲ ಜನಾಂಗದ ಪರ ಇರುವಂಥ ನಾಯಕರಾಗಿದ್ದಾರೆ. ಅತ್ಯಂತ ಸರಳ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ಎಲ್ಲರಿಗೂ ನ್ಯಾವನ್ನು ಕೊಡಿಸುವಂಥ ದಿಟ್ಟ ನಾಯಕ ಅಂದ್ರೆ ಸಂತೋಷ್ ಲಾಡ್ ಎಂದಿದ್ದಾರೆ.
ಇನ್ನು ಕೆಲ ಕಾಂಗ್ರೆಸ್ ಮುಖಂಡರು ಮಾತನಾಡಿದ್ದು, ಸಾಹೇಬರು ಯುವಕರಾಗಿರುವುದರಿಂದ, ಯುವಕರಿಗೆ ಸ್ಪೂರ್ತಿ. ಹಿಂದುಳಿದ ವರ್ಗದ ಯುವಕರಿಗೆ ತುಂಬಾ ಹತ್ತಿರಾಗುವಂಥ ನಾಯಕರಂದ್ರೆ ಸಂತೋಷ್ ಲಾಡ್ ಅವರು. ಸಿಎಂ ಆಗುವ ಎಲ್ಲ ಲಕ್ಷಣ ಅವರಲ್ಲಿದೆ. ಅವರು ಬರೀ ರಾಜ್ಯ ನಾಯಕರಲ್ಲ. ಸಂತೋಷ್ ಲಾಡ್ ರಾಷ್ಟ್ರ ನಾಯಕರು ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
ಬಡವರಿಗೆ ಮನಮುಟ್ಟುವಂತೆ ಸರ್ಕಾರ ನಡೆಯುತ್ತಿದೆ. ಜನಪರ ಆಡಳಿತ ಕೊಟ್ಟಿರುವುದಕ್ಕಾಗಿ ಕಾಂಗ್ರೆಸ್ 135 ಸೀಟ್ ಗೆದ್ದಿದೆ. ಲೋಕಸಭೆ ಚುನಾವಣೆಯಲ್ಲೂ ಇದೇ ರೀತಿ ರಿಸಲ್ಟ್ ಬರಲಿದೆ ಎಂದಿದ್ದಾರೆ.
ಕಾಂಗ್ರೆಸ್ ಬಿಕ್ಕಟ್ಟು ಬಗೆಹರಿಸಲು ಹಿಮಾಚಲ ಪ್ರದೇಶಕ್ಕೆ ಡಿಸಿಎಂ ಡಿಕೆಶಿ ದೌಡು