Health Tips: ಮೊದಲೆಲ್ಲ ಶ್ರೀಮಂತರ ಮನೆಯಲ್ಲಿ ಅಷ್ಟೇ ಫೋನ್ ಇರುತ್ತಿತ್ತು. ಒಂದು ಏರಿಯಾದಲ್ಲಿ ಒಬ್ಬರ ಮನೆಯಲ್ಲಿ ಮಾತ್ರ ಫೋನ್ ಇರುತ್ತಿತ್ತು. ಏರಿಯಾ ಜನರ ಸಂಬಂಧಿಕರ ಕಾಲ್ ಅದೇ ಫೋನ್‌ಗೆ ಬರುತ್ತಿತ್ತು. ಆದರೆ ಈಗ ಹಾಗಲ್ಲ. ಮನೆಯಲ್ಲಿ ಪ್ರತಿಯೊಬ್ಬರ ಹತ್ತಿರವೂ ಮೊಬೈಲ್ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಮೊಬೈಲ್ ಬಳಸುವವರೇ. ಇತ್ತೀಚಿನ ದಿನಗಳಲ್ಲಂತೂ ಮಕ್ಕಳ ಕಾಟ ತಡಿಯಲಾರದೇ, ಅಪ್ಪ ಅಮ್ಮ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಟ್ಟು ಕೂರಿಸಿಬಿಡುತ್ತಾರೆ. ಅದು ಗೇಮ್ ಆಡಲುಸ, ವೀಡಿಯೋ ನೋಡುವುದೆಲ್ಲ ಕಲಿಯುತ್ತದೆ. ಆದರೆ ಇದೆಷ್ಟು ಅಪಾಯಕಾರಿ ಕೆಲಸ ಅನ್ನುವ ಬಗ್ಗೆ ಆ ತಂದೆ ತಾಯಿಗೆ ಅರಿವೇ ಇರುವುದಿಲ್ಲ. ಇಂದು ನಾವು ಮಕ್ಕಳು ಹೆಚ್ಚು ಫೋನ್ ಬಳಕೆ ಮಾಡಿದ್ದಲ್ಲಿ ಏನಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.
ನೀವು ಮಕ್ಕಳಿಗೆ ಮೊಬೈಲ್ ಕೊಟ್ಟಾಗ, ಬರೀ ಅದರ ಆರೋಗ್ಯವಷ್ಟೇ ಅಲ್ಲದೇ, ಶಿಕ್ಷಣದ ಮೇಲಿನ ಆಸಕ್ತಿಯೂ ಕುಂಠಿತವಾಗುತ್ತದೆ. ಓದುವಾಗಲೂ, ಬರೆಯುವಾಗಲೂ ಅದಕ್ಕೆ ಗೇಮ್‌ದೇ ಚಿಂತೆ. ಇಂದು ಯಾವ ವೀಡಿಯೋ ನೋಡಲಿ, ಯಾವ ಗೇಮ್ ಆಡಲಿ ಎಂಬುವುದೇ ಯೋಚನೆ. ಓದಿನ ಮೇಲಿನ ಆಸಕ್ತಿ ಇರುವುದೇ ಇಲ್ಲ. ಹಾಗಾಗಿ ಚಿಕ್ಕವರಿರುವಾಗಲೇ, ಮೊಬೈಲ್ ಕೊಟ್ಟರೆ, ಅವರ ಭವಿಷ್ಯ ಹಾಳು ಮಾಡಿದಂತೆ. ಅಲ್ಲದೇ, ಒಮ್ಮೆ ಮೊಬೈಲ್ ಚಟ ಹತ್ತಿದರೆ, ಅದನ್ನು ಬಿಡಿಸುವುದು ಕಷ್ಟ. ಇದರಿಂದ ಮಾನಸಿಕ ರೋಗ ಬರುವ ಸಾಧ್ಯತೆಯೂ ಉಂಟು.
ಕೋವಿಡ್ ಬಂದಾಗ, ಮಕ್ಕಳಿಗೆ ಮೊಬೈಲ್ ಲ್ಯಾಪ್‌ಟಾಪ್ ಅವಶ್ಯಕತೆ ಇತ್ತು. ಆ ಸಮಯಕ್ಕಷ್ಟೇ ಅದು ಬಳಸಬಹುದಿತ್ತು. ಆದರೆ ಈಗಲೂ ಹಲವರು ಮಕ್ಕಳಿಗೆ ಟ್ಯಾಬ್ ಕೊಡಿಸಿಬಿಟ್ಟಿದ್ದಾರೆ. ಬಳಸಲು ಅವಕಾಶ ಕೊಟ್ಟಿದ್ದಾರೆ. ಈ ಅವಕಾಶವೇ ಅವರ ಶೈಕ್ಷಣಿಕ ಭವಿಷ್ಯಕ್ಕೆ ಮುಳುವಾಗುತ್ತದೆ. ಹಾಗಾದರೆ ಮಕ್ಕಳು ಮೊಬೈಲ್‌ಗಾಗಿ ಹಠ ಮಾಡಿದರೆ, ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ, ತಂದೆ ತಾಯಿ, ಅಜ್ಜ ಅಜ್ಜಿ ಹೀಗೆ ಮನೆಜನ ಅದರೊಂದಿಗೆ ಸಮಯ ಕಳಿಯಬೇಕು. ಅದು ಓದುವಾಗ, ಅದರೊಂದಿಗೆ ಕುಳಿತು, ವಿದ್ಯಾಭ್ಯಾಸವನ್ನು ಹೇಳಿಕೊಡಬೇಕು. ವಾಕಿಂಗ್ ಕರೆದುಕೊಂಡು ಹೋಗಿ. ಅದರೊಂದಿಗೆ ಆಟವಾಡಿ. ಹೊಸ ಹೊಸ ಆಟಗಳನ್ನು ಕಲಿಸಿಕೊಡಿ. ಆಗ ಮಗುವಿಗೆ ಮೊಬೈಲ್ ಅವಶ್ಯಕತೆ ಇದೆ ಎನ್ನಿಸುವುದಿಲ್ಲ.
ಹೆಚ್ಚು ಹೊತ್ತು ಫೋನ್ ಬಳಸುತ್ತಿದ್ದಲ್ಲಿ, ನೀವು ಈ ಗಂಭೀರ ಸಮಸ್ಯೆಗೆ ತುತ್ತಾಗುತ್ತೀರಿ ಹುಷಾರ್..
ಪಾನೀಪುರಿ ಸ್ಟಾಲ್ ಇಡಲು ಇಷ್ಟಪಡುವವರಿಗೆ ಇಲ್ಲಿದೆ ನೋಡಿ ಬ್ಯುಸಿನೆಸ್ ಟಿಪ್ಸ್..
ಚಿಪ್ಸ್ ಬ್ಯುಸಿನೆಸ್ ಮಾಡಬೇಕೆಂದಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಟಿಪ್ಸ್..