Health Tips: ದಕ್ಷಿಣ ಭಾರತೀಯರಿಗಿಂತ ಉತ್ತರ ಭಾರತದವರು ಹೆಚ್ಚಾಗಿ ಸೋರೇಕಾಯಿ ಬಳಸುತ್ತಾರೆ. ಯಾಕಂದ್ರೆ ಇದು ತರಕಾರಿಯಲ್ಲೇ ಅತ್ಯಂತ ಆರೋಗ್ಯಕಾರಿ ತರಕಾರಿಯಾಗಿದೆ. ಇದರ ಸೇವನೆಯಿಂದ ಹಲವು ರೋಗಗಳು ಬರುವುದನ್ನು ತಡೆಗಟ್ಟಬಹುದು. ಹಾಗಾದ್ರೆ ಸೋರೇಕಾಯಿ ಸೇವನೆಯ ಉಪಯೋಗಗಳೇನು ಅಂತಾ ತಿಳಿಯೋಣ ಬನ್ನಿ..
ನಮ್ಮ ದೇಹದೊಳಗೆ ಎಂಥೆಂಥ ಕಸವಿದೆ ಎನ್ನುವುದು ನಮಗೆ ಗೊತ್ತಾಗುವುದಿಲ್ಲ. ಅದನ್ನು ನಾವು ಆಹಾರ ಸೇವಿಸುವುದರ ಮೂಲಕವೇ ತೆಗೆದು ಹಾಕಬೇಕಾಗುತ್ತದೆ. ಅದಕ್ಕಾಗಿ ಸೋರೆಕಾಯಿ ಜ್ಯೂಸ್ ಕುಡಿಯುವುದು ಉತ್ತಮ. ಸೋರೆಕಾಯಿ ಜ್ಯೂಸ್ ಕುಡಿದಾಗ, ಅದು ನಮ್ಮ ದೇಹದಲ್ಲಿರುವ ಕೊಳೆಯನ್ನು ತೆಗೆದು ಹಾಕಿ, ದೇಹವನ್ನು ಶುದ್ಧಗೊಳಿಸುತ್ತದೆ. ದೇಹ ಶುದ್ಧವಾದಾಗ, ನಿಮ್ಮ ಆರೋಗ್ಯ, ಸೌಂದರ್ಯ ಚೆನ್ನಾಗಿ ಇರುತ್ತದೆ.
ಇದರಿಂದ ನಿಮ್ಮ ತ್ವಚೆ ಸುಂದರವಾಗಿ ಕಾಣುತ್ತದೆ. ಸೋರೆಕಾಯಿಯಲ್ಲಿರುವ ಪೋಷಕಾಂಶವು, ಚರ್ಮದ ಸುಕ್ಕು ತೊಡೆದು ಹಾಕಿ, ನೀವು ಯಂಗ್ ಆಗಿ ಕಾಣುವಂತೆ ಮಾಡುತ್ತದೆ. ಕೂದಲಿನ ಆರೋಗ್ಯ ಉತ್ತಮವಾಗಿ, ಕೂದಲು ಉದುರುವ ಸಮಸ್ಯೆ, ಬಿಳಿಯಾಗುವ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಶ್ವಾಸಕೋಶದ ಸಮಸ್ಯೆಯಿಂದ ಮುಕ್ತಿ ಕೊಡಿಸಿ, ಸರಿಯಾಗಿ ಉಸಿರಾಡಲು ಸೋರೆಕಾಯಿ ಸಹಾಯ ಮಾಡುತ್ತದೆ. ಅದಕ್ಕಾಗಿ ಉಸಿರಾಟದ ಸಮಸ್ಯೆ ಇದ್ದವರು, ಸೋರೆಕಾಯಿ ರಸದ ಸೇವನೆ ಮಾಡಿ.
ಒಂದು ಕಪ್ ಬೀಜ ತೆಗೆದು, ಸಿಪ್ಪೆ ತೆಗೆದ ಸೋರೆಕಾಯಿ, 10ರಿಂದ 20 ಪುದೀನಾ ಎಲೆ, ಚಿಟಿಕೆ ಜೀರಿಗೆ, ಒಂದು ಸ್ಪೂನ್ ನಿಂಬೆರಸ , ಚಿಟಿಕೆ ಉಪ್ಪು ಇವಿಷ್ಟನ್ನು ಸೇರಿಸಿ, ಜ್ಯೂಸ್ ಮಾಡಿ ಸೇವಿಸಿ. ವಾರದಲ್ಲಿ ಒಂದರಿಂದ ಎರಡು ಬಾರಿ ಜ್ಯೂಸ್ ಸೇವಿಸಿದರೆ ಸಾಕು. ನಿಮಗೆ ಪ್ರತಿದಿನ ಜ್ಯೂಸ್ ಕುಡಿಯಬೇಕೆಂದಲ್ಲಿ, ಬೇರೆ ಬೇರೆ ಹಣ್ಣು, ತರಕಾರಿಗಳ ಜ್ಯೂಸ್ ಮಾಡಿ ಸೇವಿಸಿ. ಇದರಿಂದ ಎಲ್ಲ ಹಣ್ಣು, ತರಕಾರಿಗಳ ಪೋಷಕಾಂಶ ನಿಮಗೆ ಸಿಗುತ್ತದೆ.ಇನ್ನು ಸೋರೆಕಾಯಿ ಜ್ಯೂಸನ್ನು ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ಇನ್ನು ಯಾರು ಸೋರೆಕಾಯಿ ಜ್ಯೂಸ್ ಕುಡಿಯುವ ಹಾಗಿಲ್ಲವೆಂದರೆ, ಹೊಟ್ಟೆಯ ಸಮಸ್ಯೆ ಮತ್ತು ಕರುಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದವರು, ಸೋರೆಕಾಯಿಯ ಹಸಿ ರಸದ ಸೇವನೆ ಮಾಡಬಾರದು. ನೀವು ಒಮ್ಮೆ ಜ್ಯೂಸ್ ಕುಡಿದಾಗ, ನಿಮಗೆನೂ ಅಲರ್ಜಿಯಾಗದಿದ್ದಲ್ಲಿ ಮಾತ್ರ, ಇನ್ನೊಮ್ಮೆ ಸೋರೆಕಾಯಿ ಜ್ಯೂಸ್ ಸೇವಿಸಿ, ಅಲರ್ಜಿಯಾಗಿದ್ದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ಬಳಿಕ ಸೇವಿಸುವುದು ಉತ್ತಮ.




