ಹೃದಯ ಸಂಬಂಧಿ ಖಾಯಿಲೆ ಬರುವ ಬಗ್ಗೆ ಕೆಲವರಿಗೆ ಮುನ್ಸೂಚನೆ ಇರುವುದಿಲ್ಲ. ಇದ್ದರೂ ಅದನ್ನ ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಸಡೆನ್ ಆಗಿ ಹಾರ್ಟ್ ಅಟ್ಯಾಕ್ ಬರುತ್ತದೆ. ಕೆಲವರಂತೂ ಜಿಮ್ ಮಾಡುತ್ತ, ಅಥವಾ ಬೇರೆ ಬೇರೆ ಕೆಲಸಗಳನ್ನು ಮಾಡುತ್ತ ಹಾರ್ಟ್ ಅಟ್ಯಾಕ್ಸಆಗಿ ಸತ್ತ ಸುದ್ದಿಯನ್ನ ನಾವು ಇತ್ತೀಚೆಗೆ ತುಂಬ ಕೇಳುತ್ತಿದ್ದೇವೆ. ಹೀಗಿ ತೀರಿಕೊಂಡವರಂತೂ ಪ್ರಪಂಚದಿಂದ ಪಾರಾಗುತ್ತಾರೆ. ಆದ್ರೆ ಅವರನ್ನ ನಂಬಿಕೊಂಡವರ ಗತಿ ಏನು..? ಹಾಗಾಗಿ ಹೃದಯ ರೋಗ ಬರುವ ಮುಂಚೆ ಏನೇನು ಸೂಚನೆ ಸಿಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಹೃದಯ ಸಮಸ್ಯೆ ಬರಲು ನಿಮಗೆ ವಯಸ್ಸಾಗಿರಬೇಕು ಅಂತೇನಿಲ್ಲ. ಇತ್ತೀಚಿಗೆ ಚಿಕ್ಕ ಮಕ್ಕಳಲ್ಲಿ, ಯುವಕರಲ್ಲೂ ಹೃದಯದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ನಿಮಗೂ ಹೃದಯ ಸಮಸ್ಯೆಯ ಸೂಚನೆ ಸಿಕ್ಕರೆ, ಅದನ್ನು ಕಡೆಗಣಿಸದೇ, ಅಗತ್ಯ ಚಿಕಿತ್ಸೆ ತೆಗೆದುಕೊಳ್ಳಿ.
ನೆನೆಸಿದ ಬಾದಾಮ್ಗಿಂತಲೂ ಆರೋಗ್ಯಕಾರಿಯಾಗಿದೆ ನೆನೆಸಿಟ್ಟ ಕಡಲೆ..
ಮೊದಲ ಸೂಚನೆ, ಹೃದಯದ ಭಾಗದಲ್ಲಿ ನೋವು ಬರುವುದು. ಅಥವಾ ಒತ್ತಡ ಬಿದ್ದ ಹಾಗೆ ಆಗುವುದು. ಟೈಟ್ ನೆಸ್ ಆಗುವುದು. ಕೆಲವೊಮ್ಮೆ ಈ ನೋವು ಹೇಗಿರತ್ತೆ ಅಂದ್ರೆ, ಆನೆ ನಿಮ್ಮ ಎದೆಯ ಮೇಲೆ ಕಾಲಿಟ್ಟಾಗ, ಭಾರ ಬೀಳುವಷ್ಟು ನೋವಾಗುತ್ತದೆ. ನಿಮಗೂ ಹೀಗೆ ನೋವು ಶುರುವಾದರೆ, ತಡ ಮಾಡದೇ, ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಿರಿ.
ಎರಡನೇಯ ಸೂಚನೆ, ಕುತ್ತಿಗೆ, ಹೊಟ್ಟೆಯ ಮೇಲ್ಭಾಗ, ಬೆನ್ನು ನೋವು ಬರುತ್ತದೆ. ಕೆಲವರು ಈ ನೋವನ್‌ನೆಲ್ಲಾ ನಿರ್ಲಕ್ಷ್ಯ ಮಾಡುತ್ತಾರೆ. ಆದ್ರೆ ಈ ನೋವು ಹೆಚ್ಚಾದಾಗ, ಮನೆ ಮದ್ದನ್ನು ಕಂಟಿನ್ಯೂ ಮಾಡದೇ, ವೈದ್ಯರ ಬಳಿ ತೋರಿಸಿ. ಅದರಲ್ಲೂ ಮಹಿಳೆಯರು ಮುಟ್ಟು ನಿಂತ ಮೇಲೆ, ಹೀಗೆ ನೋವು ಕಾಣಿಸಿಕೊಂಡರೆ, ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ.
ಮೂರನೇಯ ಸೂಚನೆ ಕೈ ಕಾಲು ಮರಗಟ್ಟಿದ ಹಾಗೆ ಆಗುವುದು. ಪದೇ ಪದೇ ನಿಮಗೆ ಕೈ ಕಾಲು ಮರಗಟ್ಟಿದ ಹಾಗೆ ಆದರೆ, ಅದನ್ನು ನಿರ್ಲಕ್ಷಿಸದೇ ಚಿಕಿತ್ಸೆ ಪಡೆದುಕೊಳ್ಳಿ.
ಕೂದಲು ಯಾಕೆ ಉದುರುತ್ತೆ ಗೊತ್ತಾ..?
ನಾಲ್ಕನೇಯ ಸೂಚನೆ ಉಸಿರಾಡಲು ತೊಂದರೆಯಾಗುವುದು. ನಿಮಗೆ ಉಸಿರಾಟದ ತೊಂದರೆಯಾಗಲು ಶುರುವಾದರೆ, ಹೃದಯದ ಸಮಸ್ಯೆ ಶುರುವಾಗುತ್ತಿದೆ ಎಂಬುದಕ್ಕೆ ಅದು ಎಲ್ಲಕ್ಕಿಂತ ದೊಡ್ಡ ಸೂಚನೆಯಾಗಿದೆ. ನಿಮಗೆ ಕೊಂಚ ನಡೆದರೂ ಉಸಿರಾಡಲು ತೊಂದರೆಯಾಗುತ್ತಿದೆ ಎಂದಾದಲ್ಲಿ, ನಿಮ್ಮ ಹಾರ್ಟ್ ವೀಕ್ ಆಗಿದೆ ಎಂದರ್ಥ. ಇನ್ನು ನೀವು ವಾಕ್, ಜಿಮ್ ಮಾಡುವಾಗ ನಿಮಗೆ ಸುಸ್ತಾಗುತ್ತಿದೆ ಅಂತಾ ಸೂಚನೆ ಸಿಕ್ಕ ತಕ್ಷಣವೇ ನೀವು ವಾಕಿಂಗ್, ರನ್ನಿಂಗ್, ಜಿಮ್ ಮಾಡುವುದನ್ನ ನಿಲ್ಲಿಸಿಬಿಡುವುದು ಒಳ್ಳೆಯದು.
ಐದನೇಯ ಸೂಚನೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತಿಲ್ಲ ಎಂದಾಗಲೂ ಹಾರ್ಟ್ ವೀಕ್ ಆಗುತ್ತದೆ. ಕೆಲವರಿಗೆ ಗ್ಯಾಸ್ಟಿಕ್ ಸಮಸ್ಯೆ ಬಂದು, ಕೆಲ ದಿನಗಳಲ್ಲಿ ಅದು ಹೃದಯ ಸಮಸ್ಯೆಯಾಗಿ ಪರಿವರ್ತನೆಯಾಗತ್ತೆ. ಹಾಗಾಗಿ ಆರೋಗ್ಯಕರ ಊಟವನ್ನು, ಸರಿಯಾದ ಹೊತ್ತಿಗೆ ಮಾಡಿ. ಹೊತ್ತಿಗೆ ಸರಿಯಾಗಿ ಊಟ ಮಾಡಿದರೆ, ಗ್ಯಾಸ್ಟಿಕ್ ಸಮಸ್ಯೆ ಬರುವುದಿಲ್ಲ. ಅಂತೆಯೇ ಹಾರ್ಟ್ ಪ್ರಾಬ್ಲಂ ಬರುವುದನ್ನ ಕೂಡ ತಪ್ಪಿಸಬಹುದು.