ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಈ ಮೊದಲ ಭಾಗದಲ್ಲಿ 3 ಲಕ್ಷಣಗಳ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ ಇನ್ನುಳಿದ ಕೆಲ ಲಕ್ಷಣ ಮತ್ತು ಕಿಡ್ನಿ ಆರೋಗ್ಯ ಉತ್ತಮವಾಗಿರಲು ಏನು ಮಾಡಬೇಕು ಅಂತಾ ಹೇಳಲಿದ್ದೇವೆ.
ನಾಲ್ಕನೇಯ ಲಕ್ಷಣ, ಊಟ, ತಿಂಡಿ ಮಾಡುವಾಗ, ಅದರ ಟೇಸ್ಟ್ ಸರಿಯಾಗಿ ಗೊತ್ತಾಗದಿರುವುದು. ಬಾಯಿಯಿಂದ ಕೆಟ್ಟದಾಗಿ ವಾಸನೆ ಬರುವುದು. ಕಿಡ್ನಿ ಆರೋಗ್ಯವಾಗಿ ಇಲ್ಲದಿದ್ದಾಗ ಹೀಗಾಗತ್ತೆ. ನೀವು ಇದಕ್ಕಾಗಿ ಏನೇ ಮನೆ ಮದ್ದು ಮಾಡಿದ್ರೂ, ಆ ಸಮಸ್ಯೆ ಸರಿ ಹೋಗಲಿಲ್ಲವೆಂದಲ್ಲಿ, ಒಮ್ಮೆ ನಿಮ್ಮ ಕಿಡ್ನಿ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವುದು ಒಳಿತು.
ಐದನೇಯ ಲಕ್ಷಣ, ಸಿಕ್ಕಾಪಟ್ಟೆ ಸುಸ್ತಾಗುವುದು. ಎಲ್ಲರಿಗೂ ಜ್ವರ ಬಂದಾಗ, ಸರಿಯಾಗಿ ಊಟ, ತಿಂಡಿ ಮಾಡದಿದ್ದಾಗ, ನಿಶ್ಯಕ್ತಿ, ಸುಸ್ತಾಗೋದು ಕಾಮನ್. ಆದ್ರೆ ನೀವೆಷ್ಟೇ ಚೆನ್ನಾಗಿ ಊಟ, ತಿಂಡಿ ಮಾಡಿದ್ರೂ. ಹೆಚ್ಚು ಕೆಲಸ ಮಾಡದೇ ಇದ್ದರೂ, ಸಣ್ಣ ವಸ್ತು ಎತ್ತಲಾಗದಷ್ಟು ಸುಸ್ತಾಗುತ್ತಿದ್ದರೆ ಕಿಡ್ನಿ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದರ್ಥ.
ಆರನೇಯ ಲಕ್ಷಣ, ಕಿಡ್ನಿ ಆರೋಗ್ಯ ಸರಿ ಇಲ್ಲದಿದ್ದಾಗ, ಸೊಂಟ ನೋವು, ಪದೇ ಪದೇ ಸೊಂಟ ಉಳುಕುವುದೆಲ್ಲ ಆಗುತ್ತದೆ. ಮೂತ್ರ ಪಿಂಡದ ಬಳಿ ಸಿಕ್ಕಾಪಟ್ಟೆ ನೋವುಂಟಾಗುತ್ತದೆ. ಹಾಗಾಗಿ ಇಂಥ ಲಕ್ಷಣಗಳಿದ್ದಾಗ, ಕಿಡ್ನಿ ಆರೋಗ್ಯದ ಬಗ್ಗೆ ಗಮನ ಕೊಡಿ.
ಇನ್ನು ಕಿಡ್ನಿ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ನೀವು ಹೆಚ್ಚೆಚ್ಚು ನೀರು ಕುಡಿಯಬೇಕು. ಹಾಗೆ ಕುಡಿದ ನೀರು ಸರಿಯಾಗಿ ಜೀರ್ಣವಾಗಬೇಕು. ಮೂತ್ರ ವಿಸರ್ಜನೆ ಸರಿಯಾಗಿ ಆಗಬೇಕು. ಆಗ ನೀವು ನೀರು ಕುಡಿದ ರೀತಿ ಸರಿಯಾಗಿದೆ ಎಂದರ್ಥ. ಯಾಕಂದ್ರೆ ಕೆಲವರಿಗೆ ಕುಡಿದ ನೀರು ಜೀರ್ಣವಾಗದೇ, ಹೊಟ್ಟೆ ಉಬ್ಬುತ್ತದೆ. ಉಸಿರಾಟದ ಸಮಸ್ಯೆಯಾಗುತ್ತದೆ. ಹಾಗಾಗಿ ನಿಮಗೆ ಎಷ್ಟು ನೀರು ಕುಡಿದರೆ, ಜೀರ್ಣವಾಗುತ್ತದೆಯೋ, ಅಷ್ಟು ನೀರು ಮತ್ತು ಜ್ಯೂಸ್, ಎಳನೀರು ಕುಡಿಯಿರಿ.
ಅಲ್ಲದೇ, ಮೂತ್ರ ವಿಸರ್ಜನೆಯನ್ನು ತಡೆದಿಟ್ಟುಕೊಳ್ಳಬೇಡಿ. ಯಾಕಂದ್ರೆ ಮೂತ್ರ ವಿಸರ್ಜನೆ ಮಾಡದಿದ್ದಾಗಲೇ, ಕಿಡ್ನಿಯಲ್ಲಿ ಕಲ್ಲಾಗೋದು. ಹಾಗಾಗಿ ಮೂತ್ರ ವಿಸರ್ಜನೆ ತಡೆಯಬೇಡಿ. ಸರಿಯಾಗಿ ಯೋಗ ಕಲಿತುಕೊಂಡು, ಪ್ರತಿದಿನ ಯೋಗ ಮಾಡಿ. ಯೋಗದಿಂದ ಹಲವು ರೋಗಗಳನ್ನು ವಾಸಿ ಮಾಡಬಹುದು.