ಹಲ್ಲಿ, ಕಾಗೆ, ಬೆಕ್ಕು ಇವೆಲ್ಲ, ಈ ಭೂಮಿಯ ಮೇಲೆ ಬದುಕುವ ಸಾಮಾನ್ಯ ಪ್ರಾಣಿ, ಪಕ್ಷಿ, ಜೀವಗಳು. ಆದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಇವುಗಳಿಗೆ ಮಾನ್ಯತೆ ನೀಡಲಾಗಿದೆ. ಮನುಷ್ಯನ ಮೇಲೆ ಈ ಜೀವಗಳು ಬೀರುವ ಕೆಲ ಪರಿಣಾಮಗಳು, ಕೆಲವು ಸಲ ನಿಜವೆನ್ನಿಸುತ್ತದೆ. ಎಷ್ಟೋ ಜನ ಕಾಕ ಶಾಸ್ತ್ರವನ್ನು ನಂಬುತ್ತಾರೆ. ಬೆಕ್ಕು ಅಡ್ಡ ಹೋದರೆ, ಶ್ರೀಕೃಷ್ಣನನ್ನು ನೆನೆಸಿ ಮುಂದೆ ಹೋಗುತ್ತಾರೆ. ಅದೇ ರೀತಿ ಹಲ್ಲಿಯ ಕೆಲ ಸೂಚನೆಗಳು ಕೂಡ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಹಬ್ಬ ಒಂದೇ ಆದರೆ ಪದ್ದತಿಗಳು ಹಲವು.. ಅದೇ ಸಂಕ್ರಾಂತಿ.. ಅದರ ವಿಶೇಷತೆಗಳನ್ನು ತಿಳಿಯೋಣ..!
ನಿಮ್ಮ ಮನೆಯ ದೇವರುಕೋಣೆಯಲ್ಲಿ ಹಲ್ಲಿ ಇದ್ದರೆ, ಇದು ಶುಭ ಸಂಕೇತವಾಗಿದೆ. ಇದರಿಂದ ನಿಮ್ಮ ಜೀವನದಲ್ಲಿ ನೆಮ್ಮದಿ ಇರುತ್ತದೆ. ಸುಖ ಸಂತೋಷ ಸಿಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಸಂಕೇತವನ್ನು ಇದು ಕೊಡುತ್ತದೆ. ನಿಮ್ಮ ಕುತ್ತಿಗೆಯ ಮೇಲೆ ಹಲ್ಲಿ ಬಿದ್ದರೆ, ಅದನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಮೂಗಿನ ಮೇಲೆ ಬಿದ್ದರೆ ವಿವಾಹ ಯೋಗವಿದೆ ಎಂದರ್ಥ. ವಿವಾಹಿತರಾಗಿದ್ದರೆ, ಸಂಗಾತಿಯೊಂದಿಗೆ ಉತ್ತಮವಾಗಿರುತ್ತೀರಿ ಎಂದರ್ಥ.
ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.. ಈ ರಾಶಿಯವರಿಗೆ ಜೀವನದಲ್ಲಿ ದೊಡ್ಡ ಬದಲಾವಣೆಗಳು..!
ಎಡಗೈ ಮೇಲೆ ಹಲ್ಲಿ ಬಿದ್ದರೆ ಹಣ ಹೋಗುತ್ತದೆ. ಬಲಗೈ ಮೇಲೆ ಹಲ್ಲಿ ಬಿದ್ದರೆ, ಹಣ ಬರುತ್ತದೆ ಎಂದರ್ಥ. ಹಣೆಯ ಮೇಲೆ ಹಲ್ಲಿ ಬಿದ್ದರೆ, ನಿಮಗೆ ಆರ್ಥಿಕ ಲಾಭವಾಗಲಿದೆ ಎಂದರ್ಥ. ಆದರೆ ಬೆನ್ನಿನ ಮೇಲೆ ಹಲ್ಲಿ ಬಿದ್ದರೆ, ಅವನ ಮಾನಸಿಕ ನೆಮ್ಮದಿ ಹಾಳಾಗುತ್ತದೆ ಎಂದರ್ಥ. ತಲೆಯ ಮೇಲೆ ಹಲ್ಲಿ ಬಿದ್ದರೆ, ಆಕಸ್ಮಿಕವಾಗಿ ನಿಮಗೆ ಪೆಟ್ಟಾಗಲಿದೆ ಎಂದರ್ಥ. ಬಲಗಾಲಿನ ಮೇಲೆ ಹಲ್ಲಿ ಬಿದ್ದರೆ, ನೀವು ದೇವರ ದರ್ಶನಕ್ಕೆ ಹೋಗಲಿದ್ದೀರಿ ಎಂದರ್ಥ. ಅದೇ ಎಡಗಾಲಿನ ಮೇಲೆ ಹಲ್ಲಿ ಬಿದ್ದರೆ, ಆರ್ಥಿಕ ತೊಂದರೆಯುಂಟಾಗುತ್ತದೆ ಎಂದರ್ಥ.

