Thursday, December 5, 2024

Latest Posts

ನಿಮ್ಮ ಮನೆಯ ಮಹಿಳೆಯರು ಇಂಥ ಕೆಲಸವನ್ನ ಮಾಡಿದರೆ ಈಗಲೇ ತಡೆಯಿರಿ..

- Advertisement -

ಒಂದು ಮನೆ ಸ್ವಚ್ಛವಾಗಿರಬೇಕು. ಮನೆಯವರೆಲ್ಲ ನೆಮ್ಮದಿಯಿಂದರಬೇಕು. ಆ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಅಂದ್ರೆ, ಆ ಮನೆಯ ಸೊಸೆ ಅಥವಾ ಮಗಳು, ಅಥವಾ ಆ ಮನೆಯಲ್ಲಿರುವ ಹೆಣ್ಣು ಮಕ್ಕಳು ಉತ್ತಮ ಗುಣ ಉಳ್ಳವರಾಗಿರಬೇಕು.

ಆದರೆ ಆ ಹೆಣ್ಣು ಮಕ್ಕಳು ಬರೀ ದುಡ್ಡು ಖರ್ಚು ಮಾಡುವವರು, ಯಾವಾಗಲೂ ಕೊಂಕು ಮಾತನಾಡುವವರು, ಬೇರೆಯವರ ಬಗ್ಗೆ ಚಾಡಿ ಹೇಳುವವರಾಗಿದ್ದರೆ, ನಿಮ್ಮ ಮನೆಯ ನೆಮ್ಮದಿ, ಆರ್ಥಿಕ ಪರಿಸ್ಥಿತಿ ಎರಡೂ ಹಾಳಾಯಿತು ಎಂದರ್ಥ. ಅಂಥ ಮನೆಜನ ಎಂದಿಗೂ ಉದ್ಧಾರವಾಗುವುದಿಲ್ಲ. ಹಾಗಾಗಿ ನಿಮ್ಮ ಮನೆಯ ಮಹಿಳೆಯರು ಕೆಲ ಕೆಲಸವನ್ನ ಮಾಡಿದ್ರೆ ಈಗಲೇ ತಡೆಯಿರಿ. ಹಾಗಾದ್ರೆ ಮಹಿಳೆಯರು ಯಾವ ಕೆಲಸ ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ಕೆಲಸ ಪತಿಯನ್ನ ಗೌರವಿಸದಿರುವುದು. ಪತಿ ಪತ್ನಿ ಗೆಳೆಯರ ರೀತಿ ಇದ್ದಾಗ, ಜೀವನ ಇನ್ನೂ ಚೆಂದವಾಗಿರುತ್ತದೆ ಅಂತಾ ಹೇಳ್ತಾರೆ. ಹಾಗಾಗಿ ಪದೇ ಪದೇ ಜಗಳವಾಗುವುದು ಕಾಮನ್. ಆಗ ನಾಲ್ಕು ಗೋಡೆ ಮಧ್ಯೆ ಏಕವಚನದಲ್ಲಿ ಮಾತನಾಡುತ್ತಾರೆ. ಬಾಯಿಗೆ ಬಂದ ಹಾಗೆ ಬಯ್ಯುತ್ತಾರೆ. ಆದ್ರೆ ಅದು ನಾಲ್ಕು ಗೋಡೆ ಮಧ್ಯೆ ಇದ್ದರೆ ಚೆಂದ. ಅದನ್ನು ಬಿಟ್ಟು, ಹೊರಗಿನವರ ಎದುರಿಗು ಅವರು ನಿಮಗೆ ಗೌರವಿಸದಿದ್ದಲ್ಲಿ, ಅದು ಉತ್ತಮ ನಡತೆಯಲ್ಲ. ಆ ರೀತಿಯಾದರೆ, ಆದಷ್ಟು ಬೇಗ ಅವರಿಗೆ ತಿದ್ದಿ ಬುದ್ಧಿ ಹೇಳುವುದು ಒಳಿತು.

ಎರಡನೇಯ ಕೆಲಸ ದಾನಧರ್ಮ ಮಾಡದೇ ಇರುವುದು. ಮನುಷ್ಯ ಎಂದ ಮೇಲೆ ಇನ್ನೊಬ್ಬರ ಕಷ್ಟಕ್ಕೆ ಕರುಣೆ ತೋರಬೇಕು. ಹಾಗಂತ ದುಡಿದಿದ್ದೆಲ್ಲ ಬೇರೆಯವರಿಗೇ ಕೊಡಬೇಕು ಅಂತಲ್ಲ. ಬದಲಾಗಿ, ನಮ್ಮ ಕೈಲಾದಷ್ಟು ನಾವು ದಾನ ಮಾಡಬೇಕು. ಯಾವ ಹೆಣ್ಣು ದಾನ ಧರ್ಮ ಮಾಡದೇ, ಎಲ್ಲವೂ ತನಗೇ ಬೇಕೆಂಬ ದುರಾಸೆಯಲ್ಲಿರುತ್ತಾಳೋ, ಆ ಮನೆಯಲ್ಲೆಂದೂ ನೆಮ್ಮದಿ ಇರುವುದಿಲ್ಲ.

ಮೂರನೇಯ ಕೆಲಸ ಪದೇ ಪದೇ ತವರು ಮನೆಗೆ ಹೋಗುವ ಮಹಿಳೆಯರಿಂದ ಮನೆಯಲ್ಲಿ ಯಾವ ನೆಮ್ಮದಿಯೂ ಸಿಗುವುದಿಲ್ಲ. ಗೌರವವೂ ಇರುವುದಿಲ್ಲ. ಹಾಗಾಗಿ ನಿಮ್ಮ ಪತ್ನಿ ಪದೇ ಪದೇ ತವರು ಮನೆಗೆ ಎದ್ದು ಹೋಗುತ್ತಿದ್ದರೆ, ಅವಳ ತವರು ಮನೆಯವರ ಸಹಾಯ ಪಡೆದು, ಅವರು ಮತ್ತೆಂದೂ ಜಗಳ ಮಾಡಿ ತವರುಮನೆಗೆ ಹೋಗದಿರುವಂತೆ ನೋಡಿಕೊಳ್ಳಿ.

ನಾಲ್ಕನೇಯ ಕೆಲಸ ಮನೆಗೆ ಬಂದವರಿಗೆ, ನಿಮ್ಮ ಸಂಬಂಧಿಕರಿಗೆ ಗೌರವಿಸದಿರುವುದು. ಪತಿಯ ಮೇಲೆ ಇರುವ ಪ್ರೀತಿ, ಕಾಳಜಿ, ಅವರ ಮನೆಯವರ ಮೇಲೂ ಹೆಣ್ಣಿಗಿರಬೇಕು. ಪತ್ನಿಯ ಮನೆಯವರಿಗೆ ಪತಿ, ಪತಿಯ ಮನೆಯವರಿಗೆ ಪತ್ನಿ ಗೌರವ ನೀಡುವುದು ಧರ್ಮ. ಆದರೆ ನಿಮ್ಮ ಪತ್ನಿ ನಿಮ್ಮ ಮನೆಯವರಿಗೆ, ನಿಮ್ಮ ಸಂಬಂಧಿಕರಿಗೆ ಗೌರವಿಸದೇ ಇದ್ದರೆ, ಅವರಿಗೆ ಬುದ್ಧಿ ಹೇಳಿ, ಅವರಿಗೆ ಉತ್ತಮ ನಡುವಳಿಕೆ ಬರುವಂತೆ ಮಾಡಬೇಕಾದ್ದು ನಿಮ್ಮ ಕರ್ತವ್ಯ.

ಶ್ರೀಕೃಷ್ಣನಿಗೇಕೆ ಛಪ್ಪನ್ನಾರು ಭೋಜನವನ್ನ ನೈವೇದ್ಯ ಮಾಡಲಾಗತ್ತೆ..?

ಕರ್ಮ ದೊಡ್ಡದೋ..? ಧರ್ಮ ದೊಡ್ಡದೋ..?

ಮಾಡಿದ ಕರ್ಮಾ ಬಿಡೋದಿಲ್ಲಾ ಅಂತಾ ಹೇಳೋದ್ಯಾಕೆ ಗೊತ್ತಾ..?

- Advertisement -

Latest Posts

Don't Miss