Thursday, April 24, 2025

Latest Posts

ಕಾಳ ಸರ್ಪ ದೋಷವಿದ್ದಲ್ಲಿ, ಯಾವ ಸೂಚನೆ ಇರುತ್ತದೆ..? ಎಂಥ ಘಟನೆಗಳು ನಡೆಯುತ್ತದೆ..?

- Advertisement -

Spiritual: ಹಿಂದೂಗಳಲ್ಲಿ ದೇವರನ್ನು ಪೂಜಿಸುವ ಹಾಗೆ, ಕೆಲವು ದೋಷಗಳನ್ನು ಕೂಡ ನಂಬಲಾಗುತ್ತದೆ. ಮತ್ತು ಅದಕ್ಕೆ ತಕ್ಕಂತೆ, ನಮಗೆ ಸೂಚನೆಯೂ ಸಿಗುತ್ತದೆ. ಕೆಲವು ದೋಷವಿದ್ದ ಕಾರಣ, ಮದುವೆಯಾಗುವುದಿಲ್ಲ. ಇನ್ನು ಕೆಲವರಿಗೆ ಮಕ್ಕಳಾಗುವುದಿಲ್ಲ. ಪದೇ ಪದೇ ಅಪಘಾತ, ಆರೋಗ್ಯ ಸಮಸ್ಯೆಯಾಗುತ್ತದೆ. ಹಾಗಾದರೆ ಕಾಳ ಸರ್ಪ ದೋಷವಿದ್ದಲ್ಲಿ, ಯಾವ ಸೂಚನೆ ಸಿಗುತ್ತದೆ..? ಎಂಥ ಘಟನೆ ನಡೆಯುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಕಾಳ ಸರ್ಪ ದೋಷವಿದ್ದಾಗ, ಕನಸಿನಲ್ಲಿ ಹಾವುಗಳು ಕಾಣಿಸುತ್ತದೆ. ಕನಸಿನಲ್ಲಿ ಹಾವು ಬಂದು ಕಚ್ಚಿದರೆ, ಶುಭ ಸಂಕೇತವೆಂದು ಹೇಳುತ್ತಾರೆ. ಇದರಿಂದ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಅಥವಾ ಆ ದಿನ ಧನ ಲಾಭವಾಗುತ್ತದೆ. ಆದರೆ ಪದೇ ಪದೇ ಕನಸಿನಲ್ಲಿ ಹಾವುಗಳು ಕಾಣಿಸಿಕೊಂಡರೆ, ಆದರೆ ಅದು ಕಚ್ಚುತ್ತಿಲ್ಲವೆಂದಲ್ಲಿ, ಅದು ಕಾಳ ಸರ್ಪ ದೋಷವಿರುವ ಸಂಕೇತವೆಂದು ತಿಳಿಯಬೇಕು.

ಕನಸಿನಲ್ಲಿ ಹಾವುಗಳು ಹಾರುತ್ತಿದ್ದಂತೆ, ಅಥವಾ ನಿಮ್ಮ ಮೈ ಮೇಲೆ ಹರಿದಂತೆ ಕನಸು ಬಿದ್ದರೆ, ಇದು ಕಾಳ ಸರ್ಪ ದೋಷದ ಸಂಕೇತವಾಗಿರಬಹುದು. ನಿಮಗೆ ಪದೇ ಪದೇ ಇಂಥ ಕನಸ್ಸು ಬೀಳುತ್ತಿದ್ದರೆ, ನೀವು ಜ್ಯೋತಿಷಿಗಳ ಬಳಿ ಈ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು. ಅಥವಾ ಕಳಸರ್ಪದೋಷವಿದೆಯಾ ಎಂದು ಕೇಳಬೇಕು. ಮತ್ತು ಅದಕ್ಕಾಗಿ ಪರಿಹಾರವನ್ನೂ ಕಂಡುಕೊಳ್ಳಬೇಕು.

ಹಿಂದೂಗಳು ಚಾರ್ ಧಾಮ್ ಯಾತ್ರೆ ಮಾಡಲೇಬೇಕು ಅಂತಾ ಹೇಳೋದು ಯಾಕೆ..?

ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಸಿಗುತ್ತದೆ ಈ ಸೂಚನೆ..

ಈ ಪಾಪ ಮಾಡಿದ್ರೆ, ಪ್ರಾಣಿಗಳ ಯೋನಿಯಲ್ಲಿ ಜನ್ಮ ಸಿಗುತ್ತಂತೆ..

- Advertisement -

Latest Posts

Don't Miss