Health Tips: ಹೈ ಬ್ಲಡ್ ಪ್ರೆಶರ್ ಅಂದ್ರೆ ಹೈ ಬಿಪಿ. ಅಧಿಕ ರಕ್ತದೊತ್ತಡ ಇದ್ದಾಗ, ಮನುಷ್ಯನ ಜೀವ ಅಪಾಯದಲ್ಲಿರುತ್ತದೆ. ಅಂಥ ಜನ ಸುಮ್ಮನೆ ತಿರುಗಾಡುತ್ತಿರುತ್ತಾರೆ. ಸಡೆನ್ ಆಗಿ ತಲೆ ತಿರುಗಿ ಬೀಳಬಹುದು. ಅಥವಾ ಕೆಲ ನಿಮಿಷಗಳಲ್ಲೇ ಅವರ ಪ್ರಾಣ ಹೋಗಬಹುದು. ಮೂತ್ರಪಿಂಡ, ಕಿಡ್ನಿ, ಮೆದುಳು ಹೀಗೆ ಮುಖ್ಯವಾದ ಜಾಗಕ್ಕೆ ಪೆಟ್ಟು ಬೀಳಬಹುದು. ಹಾಗಾಗಿ ಹೈ ಬಿಪಿ ಇದ್ದವರು, ಪದೇ ಪದೇ ಬಿಪಿ ಚೆಕ್ ಮಾಡಿಸಿಕೊಳ್ಳಬೇಕು. ಮತ್ತು ಅದಕ್ಕೆ ಬೇಕಾದ ಪರಿಹಾರಗಳನ್ನು ಮಾಡಿಕೊಳ್ಳಬೇಕು. ಇಂದು ನಾವು ಹೈ ಬಿಪಿ ಇದ್ದಲ್ಲಿ, ಅದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಅಂತಾ ಹೇಳಲಿದ್ದೇವೆ.
ನಾವು ತಪ್ಪು ತಪ್ಪಾಗಿ ಆಹಾರ ಸೇವಿಸಿದರೆ, ಅಥವಾ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿದ್ದಲ್ಲಿ. ನಮ್ಮ ಜೀವನ ಶೈಲಿ ಆಲಸ್ಯದಿಂದ ಕೂಡಿದ್ದಲ್ಲಿ. ನಾವು ವಾಕಿಂಗ್, ಯೋಗ, ಮನೆಗೆಲಸದಂಥ ಕೆಲಸಗಳನ್ನು ಮಾಡದೇ, ಸೋಂಬೇರಿಯಾಗಿದ್ದಲ್ಲಿ. ಉಪ್ಪಿನ ಬಳಕೆ ಅತೀ ಹೆಚ್ಚು ಮಾಡಿದ್ದಲ್ಲಿ, ಚಿಕ್ಕ ಚಿಕ್ಕ ವಿಷಯಕ್ಕೂ ಟೆನ್ಶನ್ ತೆಗೆದುಕೊಂಡಲ್ಲಿ, ಹೈ ಬಿಪಿ ಬರುತ್ತದೆ.
ಇದಕ್ಕೆ ಪರಿಹಾರವಾಗಿ ನೀವು ಮಾಡಬೇಕಾದ ಕೆಲಸವೆಂದರೆ, ಸ್ವಲ್ಪ ಹೊತ್ತು ಕುಳಿತು ವಿಶ್ರಾಂತಿ ಪಡೆಯಬೇಕು. ದಿನದಲ್ಲಿ 2 ಹೊತ್ತಾದರೂ ನೀವು ಸುಮ್ಮನೆ ಕುಳಿತು ವಿಶ್ರಾಂತಿ ಪಡೆಯಬೇಕು. ವಿಶ್ರಾಂತಿ ಎಂದರೆ, ಕುಳಿತು ಟಿವಿ, ಮೊಬೈಲ್ ನೋಡುವುದಲ್ಲ. ಹರಟೆ ಹೊಡೆಯುವುದಲ್ಲ. ಬದಲಾಗಿ ಒಂದು ಶಾಂತವಾದ ಜಾಗದಲ್ಲಿ ಸುಮ್ಮನೆ ಕುಳಿತುಕೊಳ್ಳುವುದು. ಧ್ಯಾನ ಮಾಡಿದರೆ ಇನ್ನೂ ಉತ್ತಮ. ಹೀಗೆ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ರಕ್ತದೊತ್ತಡ ಕಡಿಮೆಯಾಗುತ್ತದೆ.
ನಿಮಗೆ ಖುಷಿ ಕೊಡುವ ಕೆಲಸವನ್ನು ಮಾಡಿ. ಅದನ್ನು ಹೊಲಿಗೆ, ಪೇಯ್ಟಿಂಗ್, ಕುಕಿಂಗ್, ಆ್ಯಕ್ಟಿಂಗ್, ರೀಲ್ಸ್ ಮಾಡುವುದು, ಹೀಗೆ ಹಲವು ಹವ್ಯಾಸಗಳು ನಿಮಗೆ ಇಷ್ಟವಾಗಿದ್ದಲ್ಲಿ, ಪ್ರತಿದಿನ ನಿಮ್ಮ ಹವ್ಯಾಸಕ್ಕಾಗಿ ಕೊಂಚ ಹೊತ್ತು ಮೀಸಲಿಡಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಿರಿ. ಆಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ವ್ಯಾಯಾಮ, ಯೋಗಾಸನಗಳನ್ನು ಕಲಿಯಿರಿ. ಪ್ರತಿದಿನ ತಪ್ಪದೇ ವಾಕಿಂಗ್, ಯೋಗ ಮಾಡಿ. ಇದು ನಿಮ್ಮಲ್ಲಿ ಚೈತನ್ಯ ತುಂಬಲು ಸಹಾಯಕವಾಗಿದೆ. ಇನ್ನು ಧೂಮಪಾನ, ಮದ್ಯಪಾನ ಮಾಡುವ ಚಟವಿದ್ದವರು, ಅದನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ. ಇದೆಲ್ಲದಕ್ಕಿಂತ ಮುಖ್ಯವಾದ ವಿಷಯ ಅಂದ್ರೆ, ನೀವು ನಿಮ್ಮ ತೂಕ ಹೆಚ್ಚದಂತೆ ನೋಡಿಕೊಳ್ಳಬೇಕು. ತೂಕ ಸರಿಯಾಗಿ ಇದ್ದರೆ, ಬಿಪಿ ಕಂಟ್ರೋಲಿನಲ್ಲಿರುತ್ತದೆ.
ಈ 5 ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ..
ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?