ಬುದ್ಧಿವಂತ, ಚತುರ ಅಂತೆಲ್ಲ ಕರೆಯಲ್ಪಡುವ ಚಾಣಕ್ಯರು ಜೀವನಕ್ಕೆ ಬೇಕಾದ ಸಾರವನ್ನು ಹೇಳಿ ಹೋಗಿದ್ದಾರೆ. ಯಾರಾದರೂ ಬುದ್ಧಿ ಉಪಯೋಗಿಸಿ ಮಾತನಾಡಿದ್ರೆ, ಜಾಣತನ ತೋರಿಸಿದ್ರೆ, ಅವರನ್ನ ನೀನು ಚಾಣಕ್ಯ ಎಂದು ಹೊಗಳುತ್ತಾರೆ. ಯಾಕಂದ್ರೆ ಚಾಣಕ್ಯರು ತಮ್ಮ ಬುದ್ಧಿ ಉಪಯೋಗಿಸಿ, ಸಮಾಜದಲ್ಲಿ ಅತ್ಯುತ್ತಮ ಕೆಲಸವನ್ನು ಮಾಡಿದ್ದರು. ಲೋಕ್ಕಕೆ ಉತ್ತಮ ಸಂದೇಶವನ್ನು ಸಾರಿದ್ದರು. ತಮ್ಮ ಬಳಿ ಕೆಲಸ ಮಾಡುತ್ತಿದ್ದ ಸಾಮಾನ್ಯ ಹುಡುಗನನ್ನು ಚಕ್ರವರ್ತಿ ಪಟ್ಟಕ್ಕೇರಿಸಿದ್ದು, ಚಾಣಕ್ಯರ ಬುದ್ಧಿವಂತಿಕೆಯೇ ಸರಿ. ಅಂಥ ಚಾಣಕ್ಯರು, ಮನುಷ್ಯ ನೆಮ್ಮದಿಯಿಂದ ಇರಬೇಕಂದ್ರೆ ಏನು ಮಾಡಬೇಕೆಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ಮಾತು, ನೀವು ಎಲ್ಲದರ ಮೋಹವನ್ನು ಬಿಟ್ಟುಬಿಟ್ಟರೆ, ಆರಾಮವಾಗಿ, ನೆಮ್ಮದಿಯಾಗಿರಬಹುದು ಎನ್ನುತ್ತಾರೆ ಚಾಣಕ್ಯರು. ಅಂದರೆ, ನೀವು ಸಂಬಂಧ, ವಸ್ತು, ಕೆಲಸ, ಹಣ ಎಲ್ಲದರ ಮೇಲಿನ ಮೋಹವೂ ಬಿಟ್ಟು, ತನ್ನ ಹಣೆ ಬರಹದಲ್ಲಿ ಇದ್ದಷ್ಟೇ ತನಗೆ ಎಂಬುದನ್ನ ಅರಿತುಕೊಂಡರೆ, ನೀವು ನೆಮ್ಮದಿಯಾಗಿ ಬದುಕಬಹುದು. ಅದನ್ನು ಬಿಟ್ಟು ಪತ್ನಿ ಅಥವಾ ಪತಿಯ ಮೇಲೆ, ಮಕ್ಕಳ ಮೇಲೆ ಅಪಾರವಾದ ಪ್ರೀತಿಯನ್ನಿಟ್ಟುಕೊಂಡಿದ್ದರೆ, ಅಥವಾ ಹಣ, ಶ್ರೀಮಂತಿಕೆಯ ಮೋಹದಲ್ಲಿದ್ದರೆ, ನೀವೆಂದೂ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಯಾಕಂದ್ರೆ ಅದು ಕಳೆದು ಹೋಗುವ ಭಯ ನಿಮ್ಮಲ್ಲಿರುತ್ತದೆ.
ಶ್ರೀರಾಮ 14 ವರ್ಷ ವನವಾಸಕ್ಕೆ ಹೋಗಲು ಕಾರಣವೇನು..?
ಎರಡನೇಯ ಮಾತು, ಮೂರ್ಖರೊಂದಿಗೆ ವಾದ ಮಾಡಬೇಡಿ. ಬುದ್ಧಿ ಇಲ್ಲದವರು, ತಪ್ಪು ಮಾಡಿದರೂ, ತನ್ನದೇ ಸರಿ ಎನ್ನುವವರು ಮೂರ್ಖರಾಗಿರುತ್ತಾರೆ. ಜಾಣನಾದವನು ಎಂದಿಗೂ ತಪ್ಪು ಮಾಡಿ ವಾದಿಸುವುದಿಲ್ಲ. ತನ್ನ ತಪ್ಪನ್ನ ಒಪ್ಪಿಕೊಳ್ಳುತ್ತಾನೆ. ಮತ್ತು ಎದುರಿಗಿರುವವನು ಮೂರ್ಖನೆಂದು ಗೊತ್ತಾದಾಗ ಜಾಣ ವಾದ ಮುಂದುವರಿಸುವುದಿಲ್ಲ. ಯಾಕಂದ್ರೆ ಮೂರ್ಖರೊಂದಿಗೆ ವಾದ ಮಾಡಿದ್ರೆ, ನಿಮ್ಮ ನೆಮ್ಮದಿಯೇ ಹಾಳಾಗುತ್ತದೆ. ಮತ್ತು ಮೂರ್ಖನಾದವನು ನಿಮಗೆ ಗೌರವಿಸುವುದಿಲ್ಲ. ಇದರಿಂದದ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ಮೂರ್ಖರೊಂದಿಗೆ ವಾದಿಸಬೇಡಿ.
ಮೂರನೇಯ ಮಾತು, ಯಾರ ಬಳಿಯೂ ನಿಮ್ಮ ದೌರ್ಬಲ್ಯವನ್ನ ತೋರಿಸಿಕೊಳ್ಳಬೇಡಿ. ಮತ್ತು ನಿಮ್ಮ ಬಾಳಸಂಗಾತಿಗಾದರೂ ನೀವು ನಿಮ್ಮ ದೌರ್ಬಲ್ಯವನ್ನು ಹೇಳಿಕೊಳ್ಳಬೇಡಿ. ಯಾಕಂದ್ರೆ ಎಷ್ಟೇ ಪ್ರೀತಿ ಇದ್ದರೂ, ಜಗಳವಂತೂ ಆಗೇ ಆಗುತ್ತದೆ. ಆಗ ನಿಮ್ಮ ಬಾಳ ಸಂಗಾತಿ ಇದೇ ಮಾತನ್ನಿಟ್ಟುಕೊಂಡು ನಿಮ್ಮನ್ನು ಅವಮಾನಿಸಿದರೂ, ಅವಮಾನಿಸಬಹುದು. ಹಾಗಾಗಿ ನಿಮ್ಮ ದೌರ್ಬಲ್ಯವನ್ನು ಯಾರಲ್ಲಿಯೂ ಹೇಳಿಕೊಳ್ಳಬೇಡಿ..
ಸೀತಾಮಾತೆ ಲಕ್ಷ್ಮಣನನ್ನೇ ನುಂಗಿದ್ದಳಂತೆ.. ಯಾಕೆ ಗೊತ್ತಾ..?
ನಾಲ್ಕನೇಯ ಮಾತು, ದುಡ್ಡನ್ನು ಯೋಚಿಸಿ ಖರ್ಚು ಮಾಡಿ. ನೀವು ಚೆನ್ನಾಗಿ ದುಡಿದು ಸಂಪಾದನೆ ಮಾಡುತ್ತಿರಬಹುದು. ಇಂದು ನಿಮ್ಮ ಬಳಿ ಲಕ್ಷ ಲಕ್ಷ ದುಡ್ಡಿರಬಹುದು. ಹಾಗಂತ ನೀವು ಅದನ್ನ ನೀರಿನಂತೆ ಖರ್ಚು ಮಾಡಬಾರದು. ಬದಲಾಗಿ ಇಂದಿನ ಅವಶ್ಯಕತೆಗೆ ಬೇಕಾದಷ್ಟು ದುಡ್ಡನ್ನ ಮಾತ್ರ ಖರ್ಚು ಮಾಡಬೇಕು. ಉಳಿದಿದ್ದನ್ನ, ಭವಿಷ್ಯಕ್ಕಾಗಿ ಕೂಡಿಡಬೇಕು. ಹಾಗಂತ ಜೀವನದಲ್ಲಿ ಎಂಜಾಯ್ ಮಾಡಲೇಬಾರದು ಅಂತಲ್ಲ. ಹಾಗೆ ಎಂಜಾಯ್ ಮಾಡುವುದಕ್ಕೂ ಮಿತಿಯಲ್ಲೇ ಹಣ ಖರ್ಚು ಮಾಡಿ. ಭವಿಷ್ಯದಲ್ಲಿ ದುಡ್ಡಿಲ್ಲದೇ, ಪರದಾಡುವಂಥ ಕಷ್ಟ ಬಾರದಂತೆ ನೋಡಿಕೊಳ್ಳಿ.
ಐದನೇಯ ಮಾತು, ನೀವು ಯಾರ ಬಳಿಯಾದರೂ ಯಾವುದಾದರೂ ಉತ್ತಮ ವಿಷಯ ಹೇಳುವಾಗ, ಅವನು ನಿಮ್ಮ ಮಾತನ್ನ ಗಮನವಿಟ್ಟು ಕೇಳುತ್ತಿಲ್ಲವೆಂದಲ್ಲಿ, ಅಂಥವರ ಬಳಿ ಏನನ್ನೂ ಹೇಳಬೇಡಿ. ಅದು ಅವರು ನಿಮಗೆ ಮಾಡುವ ಅವಮಾನ, ಹಾಗಾಗಿ ನಿಮ್ಮ ಮಾತಿಗೆ ಬೆಲೆ ಕೊಡದವರ ಬಳಿ ಎಂದಿಗೂ ಉತ್ತಮ ಮಾತಿನ ಜ್ಞಾನವನ್ನ ಅವರಿಗೆ ನೀಡಬೇಡಿ.