Tuesday, October 14, 2025

Latest Posts

ಈ ಕೆಲಸ ಮಾಡುವುದನ್ನು ನೀವು ಬಿಡದಿದ್ದಲ್ಲಿ, ಲಕ್ಷ್ಮೀ ನಿಮ್ಮ ಮನೆಗೆ ಕಾಲಿಡುವುದಿಲ್ಲ- ಭಾಗ 2

- Advertisement -

ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು ಕೆಲ ಸಂಗತಿಗಳನ್ನು ಹೇಳಿದ್ದೆವು. ಹಾಗೆ ಮಾಡುವುದರಿಂದ ಲಕ್ಷ್ಮೀ ನಿಮ್ಮ ಮೇಲೆಂದೂ ಕೃಪೆ ತೋರುವುದಿಲ್ಲವೆಂದು ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ನಾವು ಇನ್ನೂ ಹೆಚ್ಚಿನ ಸಂಗತಿಗಳನ್ನ ಹೇಳಲಿದ್ದೇವೆ.

ಮುಸ್ಸಂಜೆ ಹೊತ್ತು, ಅಂದರೆ ದೀಪ ಹಚ್ಚುವ ವೇಳೆ, ತಲೆ ಬಾಚಿಕೊಳ್ಳುವುದಾಗಲಿ, ಜಗಳ ಮಾಡುವುದಾಗಲಿ, ಹೊಸ್ತಿಲ ಮೇಲೆ ಕುಳಿತು ಹರಟೆ ಹೊಡೆಯುವುದಾಗಲಿ ಮಾಡಬೇಡಿ. ಕಸ ಗುಡಿಸುವುದು, ನಿದ್ರೆ ಮಾಡುವುದು ತಪ್ಪು. ಇನ್ನು ಸಂಜೆ ಹೊತ್ತು ತಲೆಗೆ ಎಣ್ಣೆ ಹಾಕುವುದನ್ನು ಕೂಡ ತಪ್ಪು ಎನ್ನಲಾಗಿದೆ. ಅಲ್ಲದೇ, ಮನೆ ಹೆಣ್ಣು ಮಕ್ಕಳು ದೀಪ ಹಚ್ಚುವ ವೇಳೆ ಕಣ್ಣೀರಿಡಬಾರದು. ಇದೆಲ್ಲವೂ ಮನೆಗೆ ದರಿದ್ರ ಎನ್ನಲಾಗಿದೆ. ಈ ಕಾರಣದಿಂದಾಗಿ ಲಕ್ಷ್ಮೀ ದೇವಿ ನಿಮ್ಮ ಮನೆಗೆ ಕಾಲಿರಿಸುವುದಿಲ್ಲ. ಹಾಗಾಗಿ ಇವೆಲ್ಲವನ್ನೂ 6 ಗಂಟೆಯೊಳಗೆ ಮಾಡಿ ಮುಗಿಸಿ.

ಸ್ನಾನ ಮಾಡಿ ಊಟ ಮಾಡಬೇಕು ಅಂತಾ ಹೇಳೋದ್ಯಾಕೆ..? ಇದರ ಹಿಂದಿನ ವೈಜ್ಞಾನಿಕ ಸತ್ಯವೇನು..?

ಮನೆಯಲ್ಲಿರುವ ಹಿರಿಯರಿಗೆ, ಮಕ್ಕಳಿಗೆ ಗೌರವ ಮತ್ತು ಪ್ರೀತಿಯಿಂದ ನೋಡಿಕೊಳ್ಳಿ. ಯಾವ ಮನೆಯಲ್ಲಿ ಮಕ್ಕಳಿಗೆ ಹಿಂಸೆ ನೀಡಲಾಗುತ್ತದೆಯೋ, ಯಾವ ಮನೆಯಲ್ಲಿ ಹಿರಿಯರನ್ನು ಗೌರವದಿಂದ ಕಾಣಲಾಗುವುದಿಲ್ಲವೋ ಅಂಥ ಮನೆಯಲ್ಲಿ ಲಕ್ಷ್ಮೀ ಎಂದಿಗೂ ನೆಲೆಸುವುದಿಲ್ಲ. ಇನ್ನು ಓರ್ವ ಗೃಹಿಣಿಯಾದವಳಿಗೆ ಉತ್ತಮ ಗುಣಗಳಿರಬೇಕು. ಆಕೆ ಯಾವ ಮನೆಗೆ ಸೊಸೆಯಾಗಿ ಹೋಗಿರುತ್ತಾಳೋ, ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕು ಅಂದ್ರೆ, ಆಕೆ ಸಂಸ್ಕಾರವಂತೆಯಾಗಿರಬೇಕು. ಕೊಂಕು ಮಾತನಾಡುವ ಬುದ್ಧಿ, ಹೊಟ್ಟೆ ಕಿಚ್ಚಿನ ಬುದ್ಧಿಯ ಹೆಂಗಸು ಉತ್ತಮ ಗೃಹಿಣಿಯಾಗಲು ಸಾಧ್ಯವಿಲ್ಲ. ಅಂಥ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಲಕ್ಷ್ಮೀ ಬಂದು ನೆಲೆಸಲು ಸಾಧ್ಯವಿಲ್ಲ.

ದಾನ ಧರ್ಮ ಮಾಡದ ಬುದ್ಧಿ ಯಾರಿಗಿರುತ್ತದೆಯೋ ಅಂಥ ಮನೆಯಲ್ಲಿ ಲಕ್ಷ್ಮೀ ಎಂದಿಗೂ ನೆಲೆಸಲು ಇಷ್ಟಪಡುವುದಿಲ್ಲ. ದಾನ ಮಾಡಿದವನಿಗೆ ದೇವರು ಇನ್ನಷ್ಟು ದಾನ ಮಾಡುವ ಅರ್ಹತೆ ಕೊಡುತ್ತಾನೆ. ಹಾಗಾಗಿ ದಾನ ಮಾಡುವ ಉದಾರ ಮನಸ್ಸಿರುವ ಜನರ ಮನೆಯಲ್ಲಿ ಮಾತ್ರ ಲಕ್ಷ್ಮೀ ನೆಲೆಸಿರುತ್ತಾಳೆ.

- Advertisement -

Latest Posts

Don't Miss