ಕಳಿಲೆಯನ್ನು ಕೆಲವರು ಬಾಂಬೂ ಅಂತಾ ಕರೆಯುತ್ತಾರೆ. ವರ್ಷಕ್ಕೊಮ್ಮೆಯಾದರೂ ಕಳಿಲೆಯನ್ನು ತಿನ್ನಬೇಕು. ಇದು ಆರೋಗ್ಯಕ್ಕೆ ತುಂಬಾ ಉತ್ತಮ ಅಂತಾ ಹೇಳಲಾಗುತ್ತದೆ. ಇದು ಉಷ್ಣ ಪದಾರ್ಥವಾಗಿದ್ದರೂ ಕೂಡ, ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾದ್ರೆ ಕಳಿಲೆ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ..
ನೀವು ಬೆಳೆಯುವ ವಯಸ್ಸಿನವರಾಗಿದ್ರೆ, ನಿಮ್ಮ ಎತ್ತರ ಬೆಳೆಯುವುದು ಸಾಧ್ಯವಿದ್ದಲ್ಲಿ, ನೀವು ಕಳಿಲೆಯನ್ನು ಸೇವಿಸಿ. ಕಳಿಲೆಯ ಸೀಸನ್ ಇರುವ ಸಮಯದಲ್ಲಿ, ನೀವು ಕಳಿಲೆಯನ್ನು ಮಿತವಾಗಿ ಸೇವಿಸಿದ್ದಲ್ಲಿ, ಅದು ನಿಮ್ಮ ಎತ್ತರವನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ.
ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..
ಇನ್ನು ಪುರುಷರ ದೇಹದಲ್ಲಿ ಶಕ್ತಿ ಇಲ್ಲದಿದ್ದಲ್ಲಿ, ವೀರ್ಯದ ಸಮಸ್ಯೆ ಇದ್ದಲ್ಲಿ ಅಂಥವರು ಕಳಿಲೆ ಸೇವನೆ ಮಾಡಬೇಕು. ಇದರಿಂದ ದೇಹದಲ್ಲಿ ಶಕ್ತಿ ಬರುವುದಲ್ಲದೇ, ನೀವು ಯಾವಾಗಲೂ ಚೈತನ್ಯದಾಯಕರಾಗಿರುವಂತೆ ಮಾಡುತ್ತದೆ. ದೇಹದಲ್ಲಿ ವೀರ್ಯ ಉತ್ಪತ್ತಿ ಮಾಡಲು ಇದು ಸಹಾಯ ಮಾಡುತ್ತದೆ.
ನೀವು ಸಂಧಿವಾತದ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ, ನಿಮಗೆ ಕೈ ಕಾಲು ನೋವಿದ್ದಲ್ಲಿ, ಕಳಿಲೆ ಸೇವನೆ ಮಾಡಿ. ಎಲುಬು ನೋವಿನ ಸಮಸ್ಯೆ ಇದ್ದರೂ ಕೂಡ ನೀವು ಇದನ್ನು ಬಳಸಬಹುದು. ಇದರಿಂದ ಎಲುಬು ಗಟ್ಟಿಯಾಗುತ್ತದೆ. ಎಲುಬಿನ ನೋವು, ಕೈ ಕಾಲು ನೋವಿದ್ದಲ್ಲಿ ಅದಕ್ಕೂ ಕೂಡ ಉಪಶಮನ ಸಿಗುತ್ತದೆ.
ಸ್ನಾನ ಮಾಡಿ ಊಟ ಮಾಡಬೇಕು ಅಂತಾ ಹೇಳೋದ್ಯಾಕೆ..? ಇದರ ಹಿಂದಿನ ವೈಜ್ಞಾನಿಕ ಸತ್ಯವೇನು..?