Friday, November 22, 2024

Latest Posts

ಈ ಪೇಯವನ್ನು ನೀವು ಸೇವಿಸಿದರೆ, ಶುಗರನ್ನು ಕಂಟ್ರೋಲಿನಲ್ಲಿಡಬಹುದು.

- Advertisement -

Health Tips: ಡಯಾಬಿಟೀಸ್‌ ಅನ್ನೋದು ಇತ್ತೀಚೆಗೆ ಕಾಮನ್ ರೋಗವಾಗಿದೆ. ಆದರೆ ಇದಕ್ಕಾಗಿ ಮಾಡಬೇಕಾದ ತ್ಯಾಗ ಅಷ್ಟಿಷ್ಟಲ್ಲ. ಸಿಹಿ ತಿಂಡಿ ತಿನ್ನುವುದನ್ನು ಕಂಟ್ರೋಲ್ ಮಾಡಬೇಕು. ಕೆಲವು ಹಣ್ಣುಗಳನ್ನ ತಿನ್ನಬಾರದು. ವೈಟ್ ರೈಸ್‌ನಿಂದ ದೂರವಿರಬೇಕು. ಹೀಗೆ ಹಲವು ಪಥ್ಯಗಳನ್ನು ಅನುಸರಿಸಬೇಕು. ಆದರೆ ನಾವಿಂದು ಶುಗರ್‌ ಕಂಟ್ರೋಲಿನಲ್ಲಿಡಲು ಯಾವ ಪೇಯ ಕುಡಿಯಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ..

ಗ್ರೀನ್ ಟೀ. ಡಯಟ್ ಮಾಡುವವರು ಹೆಚ್ಚಾಗಿ ಗ್ರೀನ್ ಟೀ ಕುಡಿಯುತ್ತಾರೆ. ನಮಗೆ ಡಯಟ್ ಎಲ್ಲ ಮಾಡಕ್ಕಾಗಲ್ಲ. ಆದರೂ ಆರೋಗ್ಯವಾಗಿರಬೇಕು ಅನ್ನುವವರೂ ಗ್ರೀನ್ ಟೀ ಕುಡಿಯುತ್ತಾರೆ. ಇದರೊಂದಿಗೆ ಈ ಪೇಯವನ್ನು ಡಯಾಬಿಟೀಸ್ ಇರುವವರು ಕೂಡ ಕುಡಿಯಬಹುದು. ಇದರಿಂದ ಶುಗರ್ ಕಂಟ್ರೋಲಿನಲ್ಲಿರುತ್ತದೆ.

ಎರಡನೇಯ ಪೇಯ ಲಿಂಬೆ ನೀರು. ಲಿಂಬೆ ಪಾನಕ ಮಾಡುವಾಗ ಅದರಲ್ಲಿ ಸಕ್ಕರೆಯ ಬಳಕೆ ಮಾಡೇ ಮಾಡುತ್ತಾರೆ. ಆದರೆ ಸಕ್ಕರೆ ಖಾಯಿಲೆ ಇದ್ದವರು, ಒಂದು ಗ್ಲಾಸ್ ರೂಮ್ ಟೇಂಪ್ರೆಚರ್‌ ನೀರಿಗೆ, ಒಂದು ಸ್ಪೂನ್ ನಿಂಬೆರಸ ಬೆರೆಸಿ, ಚಿಟಿಕೆ ಕಾಳು ಮೆಣಸಿನ ಪುಡಿ ಸೇರಿಸಿ, ಕುಡಿಯಿರಿ. ಸಕ್ಕರೆ ಬದಲು ಇದಕ್ಕೆ ನೀವು ಜೇನುತುಪ್ಪ ಅಥವಾ ಬೆಲ್ಲ ಬಳಸಬಹುದು.

ಮೂರನೇಯ ಪೇಯ ಬ್ಲಾಕ್ ಕಾಫಿ. ಬ್ಲಾಕ್ ಕಾಫಿ ಎಂದರೆ, ಸಕ್ಕರೆ ಮತ್ತು ಹಾಲು ಬಳಸದೇ ಮಾಡುವ ಕಾಫಿ, ಬ್ಲಾಕ್ ಕಾಫಿ. ಇದು ಕಹಿಯಾಗಿರುವ ಕಾರಣಕ್ಕೆ, ಶುಗರ್ ಕಂಟ್ರೋಲ್ ಮಾಡಲು ಇದು ಅನುಕೂಲವಾಗಿದೆ.

ಕೊನೆಯ ಪೇಯ ನೆಲ್ಲಿಕಾಯಿ ಜ್ಯೂಸ್. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಸೇವನೆ ಮಾಡುವುದರಿಂದ, ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಸಕ್ಕರೆ ಖಾಯಿಲೆ ಕಂಟ್ರೋಲಿಗೆ ಬರುತ್ತದೆ. ನೀವು ನೋಡಲು ಯಂಗ್ ಆಗಿ ಕಾಣುತ್ತೀರಿ. ಇದು ಬರೀ ಶುಗರ್ ಕಂಟ್ರೋಲಿಗೆ ತರುವುದಲ್ಲದೇ, ಹಲವು ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ದೂರವಿಡುತ್ತದೆ.

ಗರ್ಭಿಣಿಯರು ಜೀರಿಗೆ ನೀರು ಕುಡಿಯುವುದರಿಂದ ಎಷ್ಟೆಲ್ಲ ಉತ್ತಮ ಪ್ರಯೋಜನವಿದೆ ಗೊತ್ತಾ..?

ಸಾಬಕ್ಕಿ ಮತ್ತು ಕಾಯಿಹಾಲು ಪಾಯಸ

ದೇಹದಲ್ಲಿ ಬರುವ ಬೆವರಿನ ವಾಸನೆ ತಡೆಯಲು ಈ ಕ್ರಮ ಅನುಸರಿಸಿ..

- Advertisement -

Latest Posts

Don't Miss