Spiritual: ಪಿತೃದೋಷವೆಂದರೆ, ನೀವು ನಿಮ್ಮ ಮೃತ ಹಿರಿಯರ ನಿರ್ಲಕ್ಷ್ಯ ಮಾಡಿದಾಗ ಉಂಟಾಗುವ ದೋಷವನ್ನು ಪಿತೃದೋಷವೆಂದು ಕರೆಯಲಾಗುತ್ತದೆ. ತಂದೆ ತಾಯಿ, ಅಜ್ಜ ಅಜ್ಜಿ ಹೀಗೆ ಕುಟಂಬಸ್ಥರು ತೀರಿಹೋದಾಗ, ಅವರ ಅಂತ್ಯಸಂಸ್ಕಾರವನ್ನು ಸರಿಯಾಗಿ ಮಾಡದಿದ್ದಲ್ಲಿ, ಶ್ರಾದ್ಧಕಾರ್ಯವನ್ನು ಸರಿಯಾಗಿ ಮಾಡದಿದ್ದಲ್ಲಿ, ಅಂಥವರಿಗೆ ಪಿತೃದೋಷ ಉಂಟಾಗುತ್ತದೆ. ಹಾಗಾದ್ರೆ ಪಿತೃದೋಷವಿದ್ದಲ್ಲಿ ಎಂಥ ಸೂಚನೆ ಸಿಗುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ನಿಮ್ಮ ಮನೆಯಲ್ಲಿ ಸದಾ ಜಗಳವಾಗುತ್ತಿದೆ. ನೆಮ್ಮದಿಯೇ ಇಲ್ಲದಂತಾಗಿದೆ. ಏನೇ ಮಾಡಿದರೂ, ಮನಸ್ಸಿಗೆ ಸಮಾಧಾನವೇ ಇಲ್ಲ. ಹೀಗೆ ಜೀವನವೇ ಬೇಡ ಎಂಬಂತಿದ್ದರೆ, ನಿಮ್ಮ ಪಿತೃಗಳು ನಿಮ್ಮ ಮೇಲೆ ಕೋಪಿಸಿಕೊಂಡಿದ್ದಾರೆ ಎಂದರ್ಥ. ನೀವು ಅವರ ಶ್ರಾದ್ಧ ಕಾರ್ಯವನ್ನು ಮನಸ್ಸಿನಿಂದ, ಭಕ್ತಿಯಿಂದ ಮಾಡುತ್ತಿಲ್ಲ. ಕಾಟಾಚಾರಕ್ಕೆ, ಬೈಯ್ಯುತ್ತ ಶ್ರಾದ್ಧ ಕಾರ್ಯ ಮಾಡಿದರೂ, ಈ ರೀತಿ ಮನೆಯಲ್ಲಿ ಸದಾ ಜಗಳವಾಗುತ್ತದೆ. ಮನಸ್ಸಿಗೆ ನೆಮ್ಮದಿ ಎಂಬುದೇ ಇರುವುದಿಲ್ಲ. ಹಾಗಾಗಿ ಪಿತೃಗಳ ಶ್ರಾದ್ಧಕಾರ್ಯಗಳನ್ನು ಶ್ರದ್ಧೆಯಿಂದ ಮಾಡಬೇಕು.
ನೀವು ಎಷ್ಟೇ ಉತ್ತಮ ಆಹಾರ ತಿಂದರೂ, ನಿಮಗೆ ನಿಮ್ಮ ಮನೆಯವರಿಗೆ ಪದೇ ಪದೇ ಆರೋಗ್ಯ ಸಮಸ್ಯೆ ಬರುತ್ತಿದೆ. ಮನೆಯೊಡೆಯನಿಗೆ ಅಥವಾ ಒಡತಿಗೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ತಲೆದೂರುತ್ತಿದೆ ಎಂದಲ್ಲಿ ಕೂಡ, ಇದನ್ನು ಪಿತೃಗಳ ಕೋಪ ಎಂದು ಹೇಳಲಾಗಿದೆ. ಅಪಘಾತವಾದಾಗಲೂ ನೀವು ಪಿತೃಗಳ ಕೋಪಕ್ಕೆ ಗುರಿಯಾಗಿದ್ದೀರಾ ಎಂದೊಮ್ಮೆ ಯೋಚಿಸಿ. ಪಿತೃಕಾರ್ಯ ಸರಿಯಾಗಿ ಮಾಡದಿದ್ದಲ್ಲಿ, ಈ ರೀತಿಯಾಗುತ್ತದೆ.
ನೀವು ಯಾವುದೇ ಕೆಲಸಕ್ಕೆ ಇಳಿದರೂ ಅದರಲ್ಲಿ ಬರೀ ನಷ್ಟವೇ ಅನುಭವಿಸುತ್ತಿದ್ದೀರಿ. ಸೋಲನ್ನೇ ಕಾಣುತ್ತಿದ್ದೀರಿ ಎಂದಾದಲ್ಲಿ, ಇದು ನೀವು ಸರಿಯಾಗಿ ಪಿತೃಕಾರ್ಯ ಮಾಡದ ಫಲಿತಾಂಶವೆಂದೇ ತಿಳಿಯಿರಿ. ಅದು ಮದುವೆ ಪ್ರಯತ್ನ, ಮನೆ ಕಟ್ಟುವ ಪ್ರಯತ್ನ, ಸಂತಾನ ಪ್ರಾಪ್ತಿಗಾಗಿ ಪ್ರಯತ್ನ. ಹೀಗೆ ಏನೇ ಕೆಲಸವಿದ್ದರೂ, ಅದಕ್ಕೆ ವಿಘ್ನವಾಗುತ್ತದೆ. ಏಕೆಂದರೆ, ಯಾರು ಗತಿಸಿಹೋದವರ ಶ್ರಾದ್ಧ ಕಾರ್ಯ, ಅಂತಿಮಸಂಸ್ಕಾರ, ಪಿಂಡಪ್ರಧಾನ ಕಾರ್ಯ ಎಲ್ಲವನ್ನೂ ಸರಿಯಾದ ರೀತಿಯಲ್ಲಿ, ಅದೇ ಮುಹೂರ್ತದಲ್ಲಿ ಮಾಡಬೇಕು. ಅದನ್ನು ಬಿಟ್ಟು ನಿಮಗೆ ಸಮಯ ಸಿಕ್ಕಾಗ ನೀವು ಪಿಂಡ ಪ್ರಧಾನ, ಶ್ರಾದ್ಧ ಕಾರ್ಯಗಳನ್ನು ಮಾಡಿದರೆ, ಅದರಿಂದ ಪಿತೃಗಳ ಕೋಪಕ್ಕೆ ಗುರಿಯಾಗುತ್ತೀರಿ. ಮತ್ತು ಜೀವನದಲ್ಲಿ ಎಂದಿಗೂ ಉದ್ಧಾರವಾಗುವುದಿಲ್ಲ.
ಇಂದಿನ ಕಾಲದಲ್ಲಿ ಹಲವರು ಈ ರೀತಿ ಮಾಡುತ್ತಿದ್ದಾರೆ. ಮಹಾಲಯದಲ್ಲಿ ಪಿತೃಕಾರ್ಯ ಮಾಡಲು ಕೆಲವರಿಗೆ ನೆನಪಿರುವುದಿಲ್ಲ. ಇನ್ನು ಯಾವಾಗ ಶ್ರಾದ್ಧ ಕಾರ್ಯದ ದಿನವಿರುತ್ತದೆಯೋ, ಅಂದು ಕೆಲವರು ಬ್ಯುಸಿ ಇರುತ್ತಾರೆ. ಹಿರಿಯರ ಶ್ರಾದ್ಧ ಕಾರ್ಯವನ್ನು ತಮಗೆ ರಜೆ ಇರುವ ದಿನ, ತಾವು ಫ್ರೀ ಇರುವ ದಿನ ಮಾಡುತ್ತಾರೆ. ಇದು ತಪ್ಪು. ಯಾವ ದಿನ ಶ್ರಾದ್ಧಕ್ಕೆ ಮುಹೂರ್ತವಿರುತ್ತದೆಯೋ, ಅದೇ ದಿನ ಶ್ರಾದ್ಧಕಾರ್ಯವನ್ನು ಮಾಡಬೇಕು. ತಂದೆ ತಾಯಿಯ ಶ್ರಾದ್ಧ ಕಾರ್ಯವಿದ್ದರೆ, ಮಕ್ಕಳಾದವರು ಒಟ್ಟುಗೂಡಿ ಶ್ರದ್ಧೆಯಿಂದ ಶ್ರಾದ್ಧಕಾರ್ಯ ಮಾಡಬೇಕು. ಆಗಲೇ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಅವರು ತೃಪ್ತಿಗೊಂಡಾಗ, ನಿಮ್ಮ ಜೀವನದಲ್ಲೇ ಯಾವುದೇ ಅಡೆತಡೆ ಇರುವುದಿಲ್ಲ. ಸುಖ ಶಾಂತಿ, ನೆಮ್ಮದಿ, ಯಶಸ್ಸು, ಆರ್ಥಿಕ ಪ್ರಬಲತೆ ಎಲ್ಲವೂ ಸಿಗುತ್ತದೆ.
ಈ ನಾಲ್ಕು ಸ್ಥಳಗಳು ನಿಮ್ಮ ಜೀವಕ್ಕೆ ಅಪಾಯ ತರಬಹುದು ಎನ್ನುತ್ತಾರೆ ಚಾಣಕ್ಯರು..
ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?
ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ, ಇಂಥ ವಸ್ತುಗಳನ್ನು ದಾನ ಮಾಡಬೇಡಿ..

