ಇತ್ತೀಚಿನ ಕಾಲದಲ್ಲಿ ಸಂತಾನ ಸಮಸ್ಯೆ ಹೆಚ್ಚಾಗಿದೆ. 10ರಲ್ಲಿ ಒಬ್ಬರಿಗಾದರೂ ಸಂತಾನ ಸಮಸ್ಯೆ ಇದೆ. ಕೆಲವರಲ್ಲಿ ಪುರುಷರಿಗೆ ಸಮಸ್ಯೆ ಇದ್ದರೆ, ಇನ್ನು ಕೆಲ ಮಹಿಳೆಯರಲ್ಲಿ ಸಮಸ್ಯೆ ಇರುತ್ತದೆ. ಇವೆಲ್ಲ ಸಮಸ್ಯೆ ಬರುವುದೇ ನಮ್ಮ ತಪ್ಪಾದ ಆಹಾರ ಪದ್ಧತಿಯಿಂದ. ಬ್ಯುಸಿ ಜೀವನ ಶೈಲಿಯಿಂದ ರೇಡಿಮೇಡ್ ಫುಡ್‌ಗಳ ಮೇಲೆ ಅವಲಂಬಿತವಾಗಿರುವ ಕಾರಣಕ್ಕೆ, ಸಂತಾನ ಸಮಸ್ಯೆ ಸೇರಿ, ಹಲವು ಅನಾರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತಿದೆ. ಹಾಗಾಗಿ ನಾವಿಂದು ಸಂತಾನ ಸಮಸ್ಯೆಯಾಗುವುದು ಯಾವ ತಪ್ಪಿನಿಂದ ಎಂದು ಹೇಳಲಿದ್ದೇವೆ.
ಸಂತಾನ ಸಮಸ್ಯೆಗೆ ಪ್ರಮುಖ ಕಾರಣವೆಂದರೆ, ರೇಡಿಮೇಡ್ ಫುಡ್ ಮತ್ತು ಕೂಲ್ ಡ್ರಿಂಕ್ಸ್. ಮಾರುಕಟ್ಟೆಯಲ್ಲಿ ತರಹೇವಾರಿ ಕೂಲ್ ಡ್ರಿಂಕ್ಸ್ ಬಂದಿದ್ದು, ಅವುಗಳನ್ನು ಕುಡಿಯುವ ಚಟ ಒಮ್ಮೆ ಶುರುವಾದರೆ, ಅದು ಬಿಡುವುದು ಕಷ್ಟವಾಗುತ್ತದೆ. ಕೊಂಚ ಕುಡಿದರೆ, ಮತ್ತೆ ಮತ್ತೆ ಕುಡಿಯಬೇಕು ಎನ್ನಿಸುತ್ತದೆ. ಮತ್ತು ಪ್ರತಿದಿನ ಕೂಲ್ ಡ್ರಿಂಕ್ಸ್ ಕುಡಿಯಲೇಬೇಕೆಂದು ಚಟವೇರಿಸಿಕೊಂಡವರು ಹಲವು ರೋಗಗಳಿಗೆ ತುತ್ತಾಗುತ್ತಾರೆ.
ಹೆಚ್ಚಿನ ಜನ ಕೂಲ್ ಡ್ರಿಂಕ್ಸ್ ಕುಡಿದು, ಕಿಡ್ನಿ ಫೇಲ್ ಸಮಸ್ಯೆಗೆ ತುತ್ತಾಗಿದ್ದಾರೆ. ಇನ್ನು ಕೆಲವರು ಚಿಕ್ಕ ವಯಸ್ಸಿನಲ್ಲೇ ಶುಗರ್ ಬಂದು ಸಾವನ್ನಪ್ಪಿದ್ದಾರೆ. ಅದೇ ರೀತಿ ಹಲವರು ಸಂತಾನ ಸಮಸ್ಯೆಗೆ ಈಡಾಗಿದ್ದಾರೆ. ಹಾಗಾಗಿ ಕೂಲ್ ಡ್ರಿಂಕ್ಸ್ ಮಾರಕವಾಗಿರುವ ಪ್ರಾಡಕ್ಟ್ ಆಗಿದೆ. ಅಷ್ಟೇ ಅಲ್ಲದೇ, ಹಸಿವಾದಾಗ, ಪಿಜ್ಜಾ, ಬರ್ಗರ್, ಸೇರಿ ಹಲವು ರೆಡಿಮೇಡ್ ಆಹಾರಗಳ ಸೇವನೆಯೇ, ದೇಹದಲ್ಲಿ ಅಂಡಾಣು, ವೀರ್ಯಗಳ ಉತ್ಪತ್ತಿ ಕಡಿಮೆಯಾಗಲು ಕಾರಣವಾಗಿದೆ.
ಈ ಎಲ್ಲ ವಿಷಯಗಳನ್ನ ಬಿಟ್ಟು ಬೇರೆ ತಪ್ಪು ಎಂದರೆ, ಧೂಮಪಾನ, ಮದ್ಯಪಾನ ಮಾಡುವುದು. ಅತೀಯಾಗಿ ಹೊಟೇಲ್ ಊಟದ ಸೇವನೆ ಮಾಡುವುದು. ಬೇಕರಿ ತಿಂಡಿಗಳನ್ನ ತಿನ್ನದೇ ಆಗುವುದೇ ಇಲ್ಲವೆನ್ನುವುದು. ಅಗತ್ಯಕ್ಕಿಂತ ಹೆಚ್ಚು ಟೀ, ಕಾಫಿ ಸೇವನೆ ಮಾಡುವುದು. ಹೊತ್ತಿಗೆ ಸರಿಯಾಗಿ ಊಟ ಮಾಡದೇ, ಸಮಯ ಸಿಕ್ಕಾಗ ಊಟ ಮಾಡುವುದು. ಇದೆಲ್ಲವೂ ಸಂತಾನ ಸಮಸ್ಯೆಗೆ ಕಾರಣವಾಗಿದೆ.
ಎಲ್ಲಕ್ಕಿಂತ ಮುಖ್ಯವಾದ ವಿಷಯ ಎಂದರೆ, ಅಗತ್ಯಕ್ಕಿಂತ ಹೆಚ್ಚು ಮೊಬೈಲ್ ಬಳಸುವುದರಿಂದಲೂ, ಸಂತಾನ ಸಮಸ್ಯೆಯಾಗುತ್ತಿದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ..