Food Adda: ನಾವು ನಮ್ಮ ಕರ್ನಾಟಕ ಟಿವಿ ಮೂಲಕ ನಿಮಗೆ ಹಲವು ರೆಸ್ಟೋರೆಂಟ್‌ಗಳ ಪರಿಚಯ ಮಾಡಿಸಿದ್ದೇವೆ. ಅದೇ ರೀತಿ, ಇಂದು ಕೂಡ ಒಂದು ರೆಸ್ಟೋರೆಂಟ್ ಪರಿಚಯ ಮಾಡಿಸಲಿದ್ದೇವೆ. ಹಾಗಾದ್ರೆ ಇದು ಎಲ್ಲಿದೆ..? ಈ ರೆಸ್ಟೋರೆಂಟ್ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ..
ಈ ರೆಸ್ಟೋರೆಂಟ್ ಹೆಸರು ಬಾಂಬೆ ಬ್ರ್ಯಾಸರಿ. ಇದು ಬೆಂಗಳೂರಿನ ಇಂದಿರಾ ನಗರದಲ್ಲಿದೆ. ನೀವು ನಾಸ್ಕು ಗೋಡೆ ಮಧ್ಯೆ, ಅಂದ್ರೆ ಹೊಟೇಲ್ ಒಳಗಡೆ ಕುಳಿತು ತಿಂಡಿ ತಿನ್ನಬಹುದು. ಅಥವಾ ಪರಿಸರವನ್ನು ಆಸ್ವಾದಿಸುತ್ತಾ, ಹೊರಗಡೆ ಕುಳಿತು ತಿಂಡಿ ತಿನ್ನಬಹುದು. ಅಲ್ಲದೇ, ಇದು ಫೋಟೋಶೂಟ್‌ಗೂ ಉತ್ತಮ ಸ್ಥಳವಾಗಿದೆ.
ಹಳೆಯ ಕಾಲದಲ್ಲಿ ಬಳಸುತ್ತಿದ್ಧ ಫೋನ್, ಪಾತ್ರೆ ಸಾಮಾನುಗಳು ಸೇರಿ ಹಲವು ವಸ್ತುಗಳನ್ನು ನಾವು ಇಲ್ಲಿ ನೋಡಬಹುದು. ಈ ರೆಸ್ಟೋರೆಂಟ್‌ನಲ್ಲಿ ಮಾಕ್ಟೇಲ್ ತಯಾರಿಸಲು ಸಪರೇಟ್ ಆಗಿರುವ ಏರಿಯಾ ಇದೆ. ರುಚಿಕರವಾದ ಮಾಕ್ಟೇಲ್ಸ್‌ನ್ನ ಇಲ್ಲಿಂದಲೇ ಪ್ರಿಪೇರ್ ಮಾಡಿ, ಸರ್ವ್ ಮಾಡಲಾಗುತ್ತದೆ.
ಇನ್ನು ಇಲ್ಲಿ ಸಮಯ ಕಳೆಯೋದಕ್ಕೆ ಫ್ರೆಂಡ್ಸ್, ಕಪಲ್ಸ್, ಮೀಟಿಂಗ್ ಮಾಡಲು ಕೂಡ ಬರಬಹುದು. ಇನ್ನು ಇಲ್ಲಿ ವೆಜ್, ನಾನ್‌ವೆಜ್ ಎರಡೂ ರೀತಿಯ ಊಟವನ್ನು ಸರ್ವ್ ಮಾಡಲಾಗುತ್ತದೆ. ಟಿ, ಕಾಫೀ, ಚಾಟ್ಸ್ ಕೂಡ ಇಲ್ಲಿ ಸರ್ವ್ ಮಾಡಲಾಗುತ್ತದೆ. ಈ ಹೊಟೇಲ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..
ಇತ್ತೀಚೆಗೆ ಸಲಿಂಗ ವಿವಾಹ ಹೆಚ್ಚಾಗಿದೆಯಾ..? ಈ ಬಗ್ಗೆ ವೈದ್ಯರು ಏನಂತಾರೆ..?




