Health Tips: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಾವು ಏನನ್ನು ಸೇವಿಸುತ್ತೆವೋ, ಅದು ನಮ್ಮ ಆರೋಗ್ಯದ ಮೇಲೆ ಉತ್ತಮ ಮತ್ತು ಉತ್ತಮವಲ್ಲದ ಪರಿಣಾಮ ಬೀರುತ್ತದೆ. ಒಳ್ಳೆಯ ಆಹಾರ ನಮ್ಮ ಆರೋಗ್ಯದ ಅಭಿವೃದ್ಧಿ ಮಾಡಿದರೆ, ಚಹಾ- ಕಾಫಿ, ಕರಿದ ತಿಂಡಿಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉತ್ತಮ ಆಹಾರಗಳನ್ನೇ ನಾವು ತಿನ್ನಬೇಕು. ಇಂದು ನಾವು 5 ವಸ್ತುಗಳು ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಏನಾಗತ್ತೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಆ 5 ವಸ್ತುಗಳು ಮತ್ತು ಅದರ ಆರೋಗ್ಯ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ವಸ್ತು ಗಸಗಸೆ. ಗಸಗಸೆಯಲ್ಲಿ ಕ್ಯಾಲ್ಶಿಯಂ, ಮ್ಯಾಗ್ನಿಶಿಯಂ, ಜಿಂಕ್, ಕಾರ್ಬ್ ಸೇರಿ ಹಲವು ಪೋಷಕಾಂಶಗಳಿರುತ್ತದೆ. ಹೃದಯದ ಆರೋಗ್ಯ ಕಾಪಾಡಲು, ಮೂಳೆಯನ್ನು ಗಟ್ಟಿಗೊಳಿಸಲು ಗಸಗಸೆ ಸಹಕಾರಿಯಾಗಿದೆ. ಗಸೆಗಸೆ ನೆನೆಸಿ, ಬೆಳಿಗ್ಗೆ ತಿಂಡಿಯೊಂದಿಗೆ ನೀವು ಅದರ ಪಾಯಸ ಮಾಡಿ ಕುಡಿಯುವುದರಿಂದ, ನಿಮಗೆ ಆರೋಗ್ಯ ಲಾಭ ಸಿಗುತ್ತದೆ. ವಾರಕ್ಕೆ ಎರಡು ಬಾರಿ ಇದನ್ನು ತೆಗೆದುಕೊಂಡರೂ ಉತ್ತಮ. ಇದು ನಿಮ್ಮ ತ್ವಚೆಯನ್ನು ಚೆಂದಗೊಳಿಸಿ, ನೀವು ಯಂಗ್ ಆಗಿ ಕಾಣುವಂತೆ ಮಾಡುತ್ತದೆ.
ಎರಡನೇಯ ವಸ್ತು ಒಣದ್ರಾಕ್ಷಿ. ಒಣದ್ರಾಕ್ಷಿ ಸೇವನೆಯಿಂದ ಮೂಳೆ ಗಟ್ಟಿಗೊಳ್ಳುತ್ತದೆ. ನೀವು ಶಕ್ತಿವಂತರಾಗಿರುವಂತೆ, ಹೊಟ್ಟೆಯ ಆರೋಗ್ಯ ಕಾಪಾಡುತ್ತದೆ. ಅಲ್ಲದೇ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಇದು ಸಹಕರಿಸುತ್ತದೆ. ಒಣದ್ರಾಕ್ಷಿಯಲ್ಲಿ ವಿಟಾಮಿನ್ ಎ ಇದ್ದು, ಇದು ನಮ್ಮ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಒಂದು ಸ್ಪೂನ್ ಒಣದ್ರಾಕ್ಷಿ ಸೇವಿಸಿ.
ಮೂರನೇಯ ವಸ್ತು ಬಾದಾಮಿ. ಬಾದಾಮಿಯನ್ನು ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ಅಂತಾ ಹಲವರು ಹೇಳುತ್ತಾರೆ. ಯಾಕಂದ್ರೆ ಇದರ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಮುಖದ ಸುಕ್ಕು ಹೊರಟು ಹೋಗುತ್ತದೆ. ನಿಮ್ಮ ಕೂದಲು ಮತ್ತು ತ್ವಚೆ ಸುಂದರವಾಗಿ ಕಾಣುತ್ತದೆ.
ನಾಲ್ಕನೇಯ ವಸ್ತು ಶೇಂಗಾ. 10ರಿಂದ 15 ಶೇಂಗಾ ಕಾಳನ್ನು ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ತಿಂದರೆ, ಇದರ ಸೇವನೆಯಿಂದಲೂ ನೆನಪಿನ ಶಕ್ತಿ ಚೆನ್ನಾಗಿರುತ್ತದೆ. ನಿಮ್ಮ ಸ್ಕಿನ್, ಕೂದಲಿನ ಆರೋಗ್ಯವೂ ಉತ್ತಮವಾಗಿರುತ್ತದೆ. ಜೀರ್ಣಕ್ರಿಯೆಯೂ ಸರಿಯಾಗಿ ಇರುತ್ತದೆ. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾಕಾಳಿನ ಸೇವನೆ ಮಾಡಬೇಕು.
ಐದನೇಯ ವಸ್ತು ಮೆಂತ್ಯೆ. ಮೆಂತ್ಯೆ ಸೇವನೆ ಮಾಡುವುದರಿಂದ ಶುಗರ್ ಕಂಟ್ರೋಲಿನಲ್ಲಿರುತ್ತದೆ. 5ರಿಂದ 8 ಕಾಳು ಮೆಂತ್ಯೆಯನ್ನು ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಶುಗರ್ ಕಂಟ್ರೋಲಿನಲ್ಲಿರುತ್ತದೆ. ನಿಮಗೆ ಇದನ್ನು ಸೇವಿಸಿದರೆ ಅಲರ್ಜಿ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ಬಳಿಕ ಸೇವಿಸುವುದು ಉತ್ತಮ.
10 ನಿಮಿಷ ನೀವು ಈ ಫೇಸ್ಪ್ಯಾಕ್ ಹಾಕಿದ್ರೆ ಸಾಕು, ನಿಮ್ಮ ತ್ವಚೆ ಸುಂದರವಾಗುತ್ತದೆ..
ಮದುವೆಗೆ ರೆಡಿ ಆಗ್ತಾ ಇದ್ದೀರಾ..? ನಿಮಗೆ ಬೇಕಾದ ಡ್ರೆಸ್ ಇಲ್ಲಿ ಸಿಗತ್ತೆ ನೋಡಿ..




