Health Tips: ಕೆಲವೊಂದು ಪರಿಮಳಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡಿದರೆ, ಇನ್ನು ಕೆಲವು ಪರಿಮಳಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಆರೋಗ್ಯಕ್ಕೂ ಪರಿಮಳಕ್ಕೂ ಏನು ಸಂಬಂಧ ಅಂತಾ ನೀವು ಕೇಳಬಹುದು. ಹೌದು ಸಂಬಂಧವಿದೆ. ಪ್ರಕೃತಿಯಿಂದ ಸಿಗುವ ಪರಿಮಳಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಗೊಳಿಸುತ್ತದೆ. ಕರ್ಪೂರದ ಪರಿಮಳ, ಹೂವಿನ ಪರಿಮಳ, ಮಳೆ ಬಿದ್ದ ಬಳಿಕ ತೇವಗೊಂಡ ಮಣ್ಣಿನ ಪರಿಮಳ ಹೀಗೆ ಪ್ರಕೃತಿಯ ಪರಿಮಳ ಆರೋಗ್ಯವನ್ನು ಅಭಿವೃದ್ಧಿ ಮಾಡುತ್ತದೆ. ಆದರೆ ಮಾರುಕಟ್ಟೆಯಿಂದ ಮನೆಗೆ ತರುವ ಕೆಲ ವಸ್ತುಗಳಿಂದ ಬರುವ ಪರಿಮಳ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾದ್ರೆ ಯಾವ ವಸ್ತುವಿನ ಪರಿಮಳ ಯಾವ ರೀತಿ ನಮ್ಮ ಆರೋಗ್ಯ ಹಾಳು ಮಾಡುತ್ತದೆ ಎಂದು ತಿಳಿಯೋಣ ಬನ್ನಿ..
ನಾವು ತ್ವಚೆಗೆ ಬಳಸುವ ಕ್ರೀಮ್. ನೀವು ಯಾವಾಗಲಾದರೂ ಕ್ರೀಮ್ ಬಳಸುತ್ತಿದ್ದರೆ ಓಕೆ. ಆದರೂ ಅದು ಹಾನಿಕಾರಕವೇ. ಆದರೆ ನೀವು ಪ್ರತಿದಿನ ಕ್ರೀಮ್ ಬಳಸುತ್ತಿದ್ದು, ಆ ಕ್ರೀಮ್‌ನಿಂದ ಬರುವ ಪರಿಮಳ, ನಿಧಾನವಾಗಿ ನಿಮ್ಮ ಉಸಿರಾಟದ ಸಮಸ್ಯೆ ಹೆಚ್ಚಿಸಿ, ನಿಮ್ಮ ಆರೋಗ್ಯಕ್ಕೆ ಧಕ್ಕೆ ತರುತ್ತದೆ. ಏಕೆಂದರೆ, ಅದರಲ್ಲಿ ಕೆಮಿಕಲ್ ಇರುತ್ತದೆ. ಅದರ ಬದಲು ನೀವು ಮನೆಯಲ್ಲೇ ಬಳಸುವ ಎಣ್ಣೆಯನ್ನು ನಿಮ್ಮ ದೇಹಕ್ಕೆ ಹಚ್ಚಿಕೊಳ್ಳಬಹುದು.
ರೂಮ್ ಫ್ರೆಶ್ನರ್. ರೂಮ್ ಫ್ರೆಶ್ನರ್ ಬಳಕೆಯಿಂದ, ಅಲ್ಲಿ ವಾಸವಿರುವವರ ಉಸಿರಾಟಕ್ಕೆ ಧಕ್ಕೆ ತರುತ್ತದೆ. ಇದರ ಪರಿಮಳ ತೆಗೆದುಕೊಳ್ಳುವುದರಿಂದ, ಅಲರ್ಜಿಯಾಗುತ್ತದೆ. ಹಾಗಾಗಿ ರೂಮ್ ಫ್ರೆಶ್ನರ್ ಬದಲು, ಊದುಬತ್ತಿಯನ್ನು ಬಳಸಿ. ಇದು ಉತ್ತಮ ಪರಿಮಳ ಸೂಸುವುದಲ್ಲದೇ, ಆರೋಗ್ಯಕ್ಕೂ ಒಳ್ಳೆಯದು.
ಸುಗಂಧಭರಿತವಾದ ಕ್ಯಾಂಡಲ್ಸ್: ಸೆಂಟೆಡ್ ಕ್ಯಾಂಡಲ್ ನೋಡಲು ಸುಂದರವಾಗಿರುತ್ತದೆ. ಉತ್ತಮ ಸುವಾಸನೆಯೂ ಬರಬಹುದು. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕ. ಏಕೆಂದರೆ ಇದರಲ್ಲಿ ಪ್ಯಾರಾಫಿನ್ ಮೇಣವಿರುತ್ತದೆ. ಹಾಗಾಗಿ ಸಾಮಾನ್ಯ ಮೇಣದ ಬತ್ತಿಯನ್ನು ಬಳಸಬಹುದು.
ಪರ್ಫ್ಯೂಮ್: ಪರ್ಫ್ಯೂಮ್ ನಲ್ಲಿರುವ ಪರಿಮಳದಿಂದ ಅಲರ್ಜಿಯಾಗಬಹುದು. ಇದು ನಿಮ್ಮ ಉಸಿರಾಟಕ್ಕೂ ಹಾನಿಯುಂಟು ಮಾಡಬಹುದು. ಆಲ್ಕೋಹಾಲ್ ಪ್ರಮಾಣ ಹೆಚ್ಚಾಗಿರುವ ಕಾರಣಕ್ಕೆ, ಇದು ನಮ್ಮ ಉಸಿರಾಟದ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಸುಗಂಧ ಭರಿತವಾದ ಎಣ್ಣೆಯನ್ನು ನಿಮ್ಮ ದೇಹಕ್ಕೆ ಸಿಂಪಡಿಸಿಕೊಳ್ಳಿ.