Thursday, December 4, 2025

Latest Posts

ಯಶಸ್ಸು ಗಳಿಸಬೇಕೆಂದರೆ ಕೃಷ್ಣನ ಈ 10 ಮಾತನ್ನ ಕೇಳಿ..- ಭಾಗ 2

- Advertisement -

ಹಿಂದಿನ ಭಾಗದಲ್ಲಿ ನಾವು ಕೃಷ್ಣ ಪರಮಾತ್ಮ ಹೇಳಿದ 10 ಮಾತುಗಳಲ್ಲಿ 5 ಮಾತುಗಳ ಬಗ್ಗೆ ವಿವರಣೆ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಮಾತುಗಳ ಬಗ್ಗೆ ವಿವರಣೆ ತಿಳಿಯೋಣ..

ಆರನೇಯದಾಗಿ ಯಶಸ್ಸು ಗಳಿಸಲು, ನಿಮ್ಮವರಿಂದ ದೂರವಾಗಬೇಕು ಎಂದಾದಲ್ಲಿ ದೂರವಾಗಿ. ಕೆಲವರಿಗೆ ಅಪ್ಪ- ಅಮ್ಮನನ್ನು ಬಿಟ್ಟು, ಬೇರೆ ಊರಿಗೆ ಹೋಗಲು ಇಷ್ಟವಿರುವುದಿಲ್ಲ. ಅದಕ್ಕೆ ಅಪ್ಪ- ಅಮ್ಮನ ಮೇಲಿರುವ ಪ್ರೀತಿ ಕಾರಣವಾಗಿರಬಹುದು. ಅಥವಾ ಅಮ್ಮ ಮಾಡಿದ ಅಡುಗೆ ಬಿಟ್ಟು ಬೇರೆ ಅಡುಗೆ ತಿನ್ನಲು ಇಷ್ಟವಿಲ್ಲದಿರಬಹುದು. ಅಥವಾ ಬೇರೆ ಊರಿಗೆ ಹೋದರೆ, ಮನೆಗೆಲಸ ನಾವೇ ಮಾಡಿಕೊಳ್ಳಬೇಕು, ಇಲ್ಲಿನಂತೆ ಅಲ್ಲಿ ರಾಜನಾಗಿರಲು ಸಾಧ್ಯವಿಲ್ಲ ಅನ್ನೋ ವಿಷಯವೂ ಆಗಿರಬಹುದು. ಹೀಗೆ ಹಲವು ವಿಷಯಕ್ಕೆ ಹಲವರು ಊರು ಬಿಟ್ಟು ಬೇರೆ ಊರಿಗೆ ಕೆಲಸಕ್ಕೆ ಅಥವಾ ಕಲಿಯುವುದಕ್ಕೆ ಹೋಗಲು ಹಿಂಜರಿಯುತ್ತಾರೆ. ಆದ್ರೆ ನೀವು ಯಶಸ್ಸು ಗಳಿಸಲೇಬೇಕು. ನೀವಂದುಕೊಂಡ ಗುರಿಯನ್ನು ಮುಟ್ಟಲೇಬೇಕು ಎಂದಿದ್ದರೆ, ಮನೆಯಿಂದ ಆಚೆ ಬರಲೇಬೇಕು, ಕಷ್ಟ ಪಡಲೇಬೇಕು.

ಪೂಜೆಯ ಸಮಯದಲ್ಲಿ ಆರತಿಯನ್ನು ಯಾಕೆ ಮತ್ತು ಹೇಗೆ ಮಾಡಬೇಕು..?

ಏಳನೇಯದಾಗಿ ಯಾವಾಗಲೂ ಸಕಾರಾತ್ಮಕವಾಗಿಯೇ ಯೋಚನೆ ಮಾಡಿ. ಕೆಲವರಿಗೆ ಮೂಢ ನಂಬಿಕೆ ಇರುತ್ತದೆ. ಬೆಕ್ಕು ಅಡ್ಡ ಹೋದ್ರೆ ಅಪಶಕುನ, ಹಲ್ಲಿ ಮೈಮೇಲೆ ಬಿದ್ರೆ ಅಪಶಕುನ ಅಂತ. ಹಾಗಾದಾಗೆಲ್ಲ, ಉತ್ತಮ ಕೆಲಸಗಳನ್ನ ಮುಂದೂಡುವವರೂ ಇದ್ದಾರೆ. ಹೀಗೆ ಮೂಢನಂಬಿಕೆ ಮೇಲೆ ಕೆಲಸ ಮುಂದೂಡುವವರು ಎಂದಿಗೂ ಯಶಸ್ಸು ಕಾಣಲು ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಕೆಲಸದ ಮೇಲೆ ವಿಶ್ವಾಸವಿಟ್ಟು, ಕೆಲಸ ಮಾಡಿ ಹೊರತು ಮೂಢನಂಬಿಕೆಗೆ ಹೆದರಿ ಅಲ್ಲ.

ಮನುಷ್ಯನ ಮೃತ್ಯುವಾದ 14ನೇ ದಿನಕ್ಕೆ ಗರುಡ ಪುರಾಣ ಪಠಣ ಮಾಡುವುದೇಕೆ..?

ಎಂಟನೇಯದಾಗಿ ಆಲಸ್ಯ ಇರುವುದು ನಿಮ್ಮ ಮನಸ್ಸಲ್ಲಿ ಹೊರತು, ದೇಹದಲ್ಲಲ್ಲ. ಎಷ್ಟೋ ಯಶಸ್ವಿ ವ್ಯಕ್ತಿಗಳು ದಿನಕ್ಕೆ 4ರಿಂದ 6 ಗಂಟೆ ಮಲಗುತ್ತಾರೆ. ಮತ್ತು 2 ಗಂಟೆ ಊಟ ತಿಂಡಿಗೆ ಮೀಸಲಿಡುತ್ತಾರೆ. ಉಳಿದ ಸಮಯ ಕೆಲಸ ಮಾಡುತ್ತಾರೆ. ಆದ್ರೆ ನಮ್ಮಲ್ಲಿ ಹಲವರಿಗೆ 8ರಿಂದ 9 ಗಂಟೆ ನಿದ್ದೆ ಮಾಡಲೇಬೇಕು. ಇಲ್ಲದಿದ್ದಲ್ಲಿ, ಏನೋ ಒಂಥರ ಕಸಿವಿಸಿ. ಬೆಳಿಗ್ಗೆ 10 ನಿಮಿಷ ಬೇಗ ಎದ್ದು ಬಿಟ್ಟರೆ, ನಿದ್ದೆ ಹಾಳಾಯಿತೆಂದು ಇಡೀ ದಿನ ಆಲಸ್ಯ. ಹೀಗೆ ಮಾಡಿದ್ದಲ್ಲಿ ನಾವೆಂದು ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗಾಗಿ ಆಲಸ್ಯವನ್ನ ಪಕ್ಕಕ್ಕಿರಿಸಿ, ನಿಮಗಿಷ್ಟವಾದ ಕೆಲಸವನ್ನ ಖುಷಿ ಖುಷಿಯಾಗಿ ಮಾಡಿ.

ರಾವಣ ಹಲವು ವರ್ಷಗಳವರೆಗೆ ಇವರನ್ನು ತನ್ನ ಕಾಲ ಕೆಳಗೆ ಇರಿಸಿಕೊಂಡಿದ್ದನಂತೆ.. ಯಾರವರು..?

ಒಂಭತ್ತನೇಯದಾಗಿ ಭವಿಷ್ಯದ ಬಗ್ಗೆ ಚಿಂತಿಸದೇ, ಭೂತ ಕಾಲದ ಬಗ್ಗೆ ಯೋಚಿಸದೇ, ವರ್ತಮಾನದಲ್ಲಿ ಜೀವಿಸಿ. ಕೆಲವರು ಕಳೆದು ಹೋದ ಜೀವನವನ್ನು ಮೆಲುಕು ಹಾಕಿ ಬೇಸರ ಪಡುತ್ತಾರೆ. ಇನ್ನು ಕೆಲವರು ಭವಿಷ್ಯದ ಬಗ್ಗೆ ಚಿಂತಿಸುತ್ತ, ಸಮಯ ವ್ಯರ್ಥ ಮಾಡುತ್ತಾರೆ. ಹಾಗೆ ಮಾಡುವ ಬದಲು, ಇಂದಿನ ದಿನವನ್ನು ಚೆನ್ನಾಗಿ ಜೀವಿಸಿಬಿಡಿ. ಸಹಾಯ ಮಾಡುವ ಮನಸ್ಸಿದ್ದಲ್ಲಿ ಇಂದೇ ಸಹಾಯ ಮಾಡಿ. ಉತ್ತಮ ಕೆಲಸ ಮಾಡಬೇಕೆಂದಲ್ಲಿ ಇಂದೇ ಮಾಡಿ. ಇನ್ನು ಜೀವನವನ್ನು ಎಂಜಾಯ್ ಮಾಡಬೇಕು ಎಂದಲ್ಲಿ ಇಂದೇ ಮಾಡಿ. ಯಾರಿಗೆ ಗೊತ್ತು ನಾಳೆ ಏನಾಗತ್ತೋ ಏನೋ..?

ಊಟ ಮಾಡುವಾಗ ಇದನ್ನು ಗಮನದಲ್ಲಿಡಿ, ಇಲ್ಲವಾದರೆ ಆರೋಗ್ಯ, ಅದೃಷ್ಟ ನಿಮ್ಮ ಕೈ ತಪ್ಪುತ್ತದೆ..

ಹತ್ತನೇಯದಾಗಿ ಸಮಯ ಬಹು ಅಮೂಲ್ಯವಾಗಿದೆ ಅನ್ನೋದನ್ನ ಗಮನದಲ್ಲಿರಿಸಿ. ಈ ಕ್ಷಣವನ್ನು, ನಿಮಗೆ ಸಿಕ್ಕಿರುವ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ಸಮಯ ವ್ಯರ್ಥ ಮಾಡಿ, ಕೊನೆಯಲ್ಲಿ ಕೊರಗುವ ಬದಲು, ಸಿಕ್ಕ ಸಮಯವನ್ನು ಸಕಾತ್ಮಕವಾಗಿ ಬಳಸಿಕೊಳ್ಳಿ. ಕೆಲವರು ಓದುವ ವಯಸ್ಸಿನಲ್ಲಿ ಪ್ರೀತಿ ಪ್ರೇಮವೆಂದು ಸಮಯ ವ್ಯರ್ಥ ಮಾಡುತ್ತಾರೆ. ಇನ್ನು ಕೆಲ ಮಕ್ಕಳು ಓದಿ, ಉತ್ತಮ ಕೆಲಸ ಗಿಟ್ಟಿಸಿಕೊಂಡು, ನಂತರ ಪ್ರೀತಿ ಮಾಡಿ, ಜೀವನದಲ್ಲಿ ಸೆಟಲ್ ಆಗ್ತಾರೆ. ಈ ರೀತಿ, ಭವಿಷ್ಯದ ಬಗ್ಗೆ ಯೋಚಿಸಿ, ನಿಮ್ಮ ಮುಂದಿನ ಹೆಜ್ಜೆ ಇಡುವುದನ್ನು ಕಲಿತುಕೊಳ್ಳಬೇಕು ಎನ್ನುತ್ತಾನೆ ಶ್ರೀಕೃಷ್ಣ.

- Advertisement -

Latest Posts

Don't Miss