Sunday, September 8, 2024

Latest Posts

ನೀವು ಯೋಗ ಮಾಡುವವರಾಗಿದ್ದಲ್ಲಿ ಈ ಆಹಾರವನ್ನು ಸೇವಿಸಬೇಡಿ..

- Advertisement -

ಪ್ರತಿದಿನ ವ್ಯಾಯಾಮ ಮಾಡಬೇಕು, ಯೋಗ ಮಾಡಬೇಕು, ಏನೂ ಸಾಧ್ಯವಾಗದಿದ್ದಲ್ಲಿ, ಮನೆ ಕೆಲಸವಾದ್ರೂ ಮಾಡಬೇಕು. ಆಗಲೇ ನಮ್ಮ ದೇಹದ ಬೊಜ್ಜು ಕರಗೋದು. ನಾವು ಆರೋಗ್ಯವಾಗಿರೋದು. ಆದ್ರೆ ನೀವೇನಾದ್ರೂ ಯೋಗ ಮಾಡುವವರಾಗಿದ್ರೆ, ಕೆಲ ಆಹಾರವನ್ನ ಸೇವಿಸಬಾರದು. ಹಾಗಾದ್ರೆ ಯಾವ ಆಹಾರವನ್ನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ..

ಯೋಗ ಮಾಡುವವರು ಖಾರಾ ಸೇವನೆ ಮತ್ತು ಮಸಾಲೆ ಪದಾರ್ಥಗಳ ಸೇವನೆ ಮಾಡಬಾರದು. ಯೋಗ ಮಾಡುವಾಗ ತಾಳ್ಮೆ ಇರುವುದು ತುಂಬಾ ಮುಖ್ಯ.. ಆದರೆ ನೀವು ಮಸಾಲೆ ಪದಾರ್ಥ ಮತ್ತು ಖಾರಾ ಪದಾರ್ಥ ಹೆಚ್ಚು ಸೇವಿಸಿದ್ದಲ್ಲಿ, ನಿಮಗೆ ಆ ತಾಳ್ಮೆ ಬರಲು ಸಾಧ್ಯವಿಲ್ಲ. ಅದರ ಸಾತ್ವಿಕತೆ ಬರಲು ಸಾಧ್ಯವಿಲ್ಲ. ಮತ್ತು ಯೋಗ ಧ್ಯಾನ ಮಾಡುವವರಿಗೆ ಏಕಾಗೃತೆಯ ಅವಶ್ಯಕತೆ ಇರುತ್ತದೆ. ಆ ಏಕಾಗೃತೆ ಬರಬೇಕಂದ್ರೆ, ಉಪ್ಪು, ಖಾರ, ಹುಳಿ ಸೇವನೆ ಕಡಿಮೆ ಮಾಡಬೇಕು.

ಎರಡನೇಯದಾಗಿ ಯೋಗ ಮಾಡುವವರು ಟೀ, ಕಾಫಿ ಸೇವನೆ ಮಾಡಬಾರದು. ಟೀ, ಕಾಫಿ ಸೇವನೆ ಮಾಡಿ, ನೀವು ಯೋಗ ಮಾಡಿದರೆ, ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಯಾಕಂದ್‌ರೆ ನಿಮ್ಮ ದೇಹದಲ್ಲಿ ಕೆಫಿನ್ ಅಂಶ ಸೇರಿದ್ದರ ಪರಿಣಾಮವಾಗಿ, ನಿಮ್ಮ ಆರೋಗ್ಯ ಹಾಳಾಗಿರುತ್ತದೆ. ಇಂಥ ವೇಳೆ ನೀವು ಯೋಗ ಮಾಡಿದ್ರೆ, ಅದರಿಂದೇನೂ ಪ್ರಯೋಜನವಿಲ್ಲ. ಹಾಗಾಗಿ ಯೋಗ ಮಾಡುವವರು ಟೀ, ಕಾಫಿ ಸೇವನೆ ಮಾಡಬಾರದು.

ಮೂರನೇಯದಾಗಿ ನಾನ್‌ವೆಜ್ ತಿನ್ನಬಾರದು. ಯೋಗ ಮಾಡುವಾಗ ನೀವು ಸಾತ್ವಿಕ ಆಹಾರ ತಿಂದರಷ್ಟೇ, ನೀವು ಯೋಗ ಮಾಡಿ ಪ್ರಯೋಜನವಾಗುತ್ತದೆ. ಯೋಗ ಮಾಡಿದಾಗ, ಧ್ಯಾನ ಮಾಡಿದಾಗ, ಮುಖದಲ್ಲಿ ಒಂದು ಸಾತ್ವಿಕ ಕಳೆ ಬರುತ್ತದೆ. ಅಂಥ ಕಳೆ ಬರಬೇಕು ಎಂದಾದಲ್ಲಿ ನೀವು ಸಾತ್ವಿಕ ಆಹಾರ, ಅಂದ್ರೆ ಮಾಂಸ ಬಳಸದೇ ಮಾಡಿದ ಆಹಾರವನ್ನೇ ಸೇವಿಸಬೇಕು.

ಈ ತಪ್ಪು ಮಾಡದಿದ್ರೆ ನಿಮ್ಮ ಸೌಂದರ್ಯ ಇನ್ನೂ ಚೆಂದವಾಗತ್ತೆ..

ರವಾ ಥಾಲಿಪಟ್ಟನ್ನ ಒಮ್ಮೆ ಈ ರೀತಿ ಮಾಡಿ ನೋಡಿ..

ರಾತ್ರಿ ಊಟದ ವಿಷಯದಲ್ಲಿ ನೀವು ಮಾಡುವ 3 ತಪ್ಪುಗಳಿವು..

- Advertisement -

Latest Posts

Don't Miss