1 ವರ್ಷದ ಒಳಗಿನ ಮಕ್ಕಳಿಗೆ ಪ್ರತಿದಿನ ಮಸಾಜ್ ಮಾಡಿಯೇ ಸ್ನಾನ ಮಾಡಿಸಲಾಗತ್ತೆ. ಯಾಕಂದ್ರೆ ಈ ಬಾಡಿ ಮಸಾಜ್‌ನಿಂದ ಮಗುವಿನ ಕೈ ಕಾಲು ಗಟ್ಟಿಯಾಗುತ್ತದೆ. ಹಾಗಾಗಿ ಎಣ್ಣೆಯ ಮಸಾಜ್ ಮಗುವಿಗೆ ಅತ್ಯಗತ್ಯವಾಗಿದೆ. ಆದ್ರೆ ಕೆಲವರು ಮನೆಯಲ್ಲೇ ಹಸುವಿನ ಹಾಲಿನಿಂದ ಮಾಡಿದ, ತುಪ್ಪವನ್ನು ಮಗುವಿನ ದೇಹಕ್ಕೆ ಮಸಾಜ್ ಮಾಡುತ್ತಾರೆ. ಹಾಗಾದ್ರೆ ಮಗುವಿಗೆ ಹಸುವಿನ ತುಪ್ಪದಿಂದ ಮಸಾಜ್ ಮಾಡೋದು ಸರಿನಾ, ತಪ್ಪಾ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಚಳಿಗಾಲದಲ್ಲಿ ಖಂಡಿತ ಕುಡಿಯಿರಿ ಈ ಹೆಲ್ದಿ ಡ್ರಿಂಕ್..
ಖಂಡಿತವಾಗಿಯೂ ಮಗುವಿಗೆ ತುಪ್ಪದ ಮಸಾಜ್ ಮಾಡುವುದು ತುಂಬಾ ಉತ್ತಮ. ದೊಡ್ಡವರು ಕೂಡ ರಾತ್ರಿ ಮಲಗುವಾಗ, ಮುಖಕ್ಕೆ ತುಟಿಗೆ ತುಪ್ಪದ ಮಸಾಜ್ ಮಾಡಿ ಮಲಗುತ್ತಾರೆ. ಯಾಕಂದ್ರೆ ಇದರಿಂದ ಸ್ಕಿನ್ ಮತ್ತು ಲಿಪ್ಸ್ ಸಾಫ್ಟ್ ಆಗತ್ತೆ. ಮುಖದಲ್ಲಿ ಗ್ಲೋ ಬರತ್ತೆ. ಅದೇ ರೀತಿ ಚಿಕ್ಕಂದಿನಲ್ಲೇ ಮಗುವಿಗೆ ತುಪ್ಪದಿಂದ ಬಾಡಿ ಮಸಾಜ್ ಮಾಡಿದ್ರೆ, ಅವುಗಳ ಸ್ಕಿನ್ ಉತ್ತಮವಾಗಿರುತ್ತದೆ.
ತುಪ್ಪದ ಮಸಾಜ್‌ನಿಂದ ಅವರ ಮುಖ ಕಾಂತಿಯುತವಾಗುತ್ತದೆ. ಅವರು ಬೆಳೆದು ದೊಡ್ಡವರಾದ ಮೇಲೂ ಅವರ ಮುಖದಲ್ಲಿ ಅದೇ ಗ್ಲೋ ಇರುತ್ತದೆ. ಹಾಗಾಗಿಯೇ ಕೆಲವರು ಮಗುವಿನ ದೇಹಕ್ಕೆ ತುಪ್ಪದ ಮಸಾಜ್ ಮಾಡಿ, ಅರ್ಧ ಗಂಟೆ ಬೆಳಗ್ಗಿನ ಜಾವದ ಬಿಸಿಲಿಗೆ ಬಿಟ್ಟು, ಹದವಾದ ನೀರಿನ ಸ್ನಾನ ಮಾಡಿಸುತ್ತಾರೆ. ಇದರಿಂದ ಮಗುವಿನ ತ್ವಚೆ, ಆರೋಗ್ಯ ಉತ್ತಮವಾಗಿರುವುದಲ್ಲದೇ, ಮಗುವಿಗೆ ಒಳ್ಳೆಯ ನಿದ್ದೆ ಬರುತ್ತದೆ.
ಚಳಿಗಾಲದಲ್ಲಿ ಈ ನೆಲ್ಲಿಕಾಯಿ ಪದಾರ್ಥ ತಿಂದ್ರೆ, ನೀವು ಹೆಲ್ದಿಯಾಗಿರ್ತೀರಿ..
ಆದ್ರೆ ಮಗುವಿಗೆ ಬಾಡಿ ಮಸಾಜ್ ಮಾಡುವಾಗ, ತಲೆಗೆ ಮಾತ್ರ ಎಣ್ಣೆ ಬಳಸಿ. ಕೆಲ ಮಕ್ಕಳಿಗೆ ತೆಂಗಿನ ಎಣ್ಣೆಯಿಂದ ತಲೆ ಮಸಾಜ್ ಮಾಡಿದ್ರೆ ಶೀತವಾಗುತ್ತದೆ. ಹಾಗಾಗಿ ತೆಂಗಿನ ಎಣ್ಣೆಯ ಬದಲು, ಮನೆಯಲ್ಲೇ ಹರ್ಬಲ್ ಎಣ್ಣೆ ತಯಾರಿಸಿ, ಬಳಸಿ. ತಲೆಗೆ ಎಣ್ಣೆ ಮಸಾಜ್ ಮಾಡಿದ್ರೆ , ಕೂದಲು ಸೊಂಪಾಗಿ ಬೆಳೆಯುತ್ತದೆ. ಇನ್ನು ನೀವು ಮಗುವಿನ ದೇಹಕ್ಕೆ ತುಪ್ಪದ ಮಸಾಜ್ ಮಾಡುವಾಗ, ಮನೆಯಲ್ಲಿ ತಯಾರಿಸಿದ ಹಸುವಿನ ಹಾಲಿನ ತುಪ್ಪವನ್ನೇ ಬಳಸಬೇಕೇ ಹೊರತು, ಅಂಗಡಿಯಲ್ಲಿ ಸಿಗುವ ತುಪ್ಪವನ್ನಲ್ಲ.
ಇನ್ನು ಹೆಚ್ಚು ಬಿಸಿಲಿರುವ ದಿನ, ಬೇಸಿಗೆಯಲ್ಲಿ ಯಾವಾಗಾದರೂ ಒಮ್ಮೆ ತುಪ್ಪದಿಂದ ಬಾಡಿ ಮಸಾಜ್ ಮಾಡಿದರೆ ಸಾಕು. ನಿಮ್ಮ ಮಗುವಿನ ದೇಹದ ಒಂದು ಭಾಗಕ್ಕೆ ಕೊಂಚ ತುಪ್ಪ ಸವರಿ, ಒಂದು ದಿನ ಬಿಡಿ. ಆ ಜಾಗದಲ್ಲಿ ಯಾವುದೇ ಗುಳ್ಳೆ, ತುರಿಗೆ ಆಗದಿದ್ದಲ್ಲಿ, ನಿಮ್ಮ ಮಗುವಿನ ದೇಹಕ್ಕೆ ತುಪ್ಪ ಸರಿ ಹೊಂದುತ್ತದೆ ಎಂದರ್ಥ. ಹೀಗೆ ಟೆಸ್ಟ್ ಮಾಡಿದ ಬಳಿಕವೇ, ಮಗುವಿನ ಬಾಡಿ ಮಸಾಜ್‌ಗೆ ತುಪ್ಪದ ಬಳಕೆ ಮಾಡಿ.