ದೇವರನ್ನ ಯಾರೂ ನೋಡಿಲ್ಲ. ಅದರಲ್ಲೂ ಇಂದಿನ ಕಾಲದವರಿಗೆ ದೇವರು ಕಾಣಲು ಸಾಧ್ಯವೇ ಇಲ್ಲ. ಆದ್ರೆ ತಂದೆ ತಾಯಿನೇ ದೇವರು ಅಂತಾ ಹಲವರು ಹೇಳ್ತಾರೆ. ಪುಟ್ಟ ಪುಟ್ಟ ಮಕ್ಕಳು ದೇವರಿದ್ದ ಹಾಗೆ ಅಂತಾ ಹೇಳ್ತಾರೆ. ಯಾಕಂದ್ರೆ ಅವರಿಗೆ ಕಪಟ, ಹೊಟ್ಟೆಕಿಟ್ಟು, ಮೋಸ, ವಂಚನೆ ಇದ್ಯಾವುದು ಗೊತ್ತಿರುವುದಿಲ್ಲ. ಅವರು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾರೆ. ಹಾಗಾಗಿ ಮಕ್ಕಳನ್ನು ದೇವರು ಅನ್ನೋದು. ಆದ್ರೆ ತಂದೆ ತಾಯಿಯನ್ನ ದೇವರಿಗೆ ಸಮ ಅಂತಾ ಹೇಳೋದ್ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ಶುಕ್ರವಾರದಂದು ಈ ತಪ್ಪುಗಳನ್ನು ಮಾಡಬೇಡಿ..!
ಗರುಡ ಪುರಾಣದ ಪ್ರಕಾರ, ತಂದೆ ತಾಯಿಗೆ ಮೀರಿದ ದೇವರು ಬೇರಿಲ್ಲ. ಯಾಕಂದ್ರೆ ನಾವು ದೇವರು ಎಂದು ಹೇಳುವ ದೇವರು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಹಾಗಾಗಿ ನಮ್ಮನ್ನು ಹೆತ್ತು ಹೊತ್ತು ಸಾಕಿ ಬೆಳೆಸಿದ ಅಪ್ಪ ಅಮ್ಮನನ್ನೇ ದೇವರು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಅಪ್ಪ ಅಮ್ಮನ ಪಾದಾರವಿಂದದಲ್ಲೇ ಪುಣ್ಯ ಕ್ಷೇತ್ರಗಳಿದೆ ಎಂದು ಹೇಳಲಾಗಿದೆ.
ನೀವು ಹೆತ್ತವರಿಗೆ ವಿಧೇಯರಾಗಿದ್ದಲ್ಲಿ, ಹೆತ್ತವರ ಸೇವೆ ಮಾಡಿದ್ದಲ್ಲಿ, ನಿಮಗೆ ಒಳ್ಳೆಯದಾಗುತ್ತದೆ ಎಂದು ಮಹಾಭಾರತ, ರಾಮಾಯಣದಲ್ಲಿ ಹೇಳಲಾಗಿದೆ. ಈ ಬಗ್ಗೆ ರಾಮ ಸೀತೆಯಲ್ಲಿ ಹೇಳುತ್ತಾನೆ, ಹೇ ಸೀತೆ, ತಂದೆ ತಾಯಿ, ಗುರುಗಳು ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರಾಗಿದ್ದಾರೆ. ತಾಯಿಯಾದವಳು, ನವಮಾಸ ನಮ್ಮನ್ನು ಹೊಟ್ಟೆಯಲ್ಲಿಟ್ಟುಕೊಂಡು, ಹೆತ್ತು, ಹೊತ್ತು ಸಾಕಿ ಸಲಹುತ್ತಾಳೆ. ತಂದೆಯಾದವನು ಜೀವನ ಪಾಠ ಹೇಳುತ್ತಾನೆ. ಬದುಕಲು ಹೇಳಿಕೊಡುತ್ತಾನೆ. ಗುರುವಾದವನು ಶಿಕ್ಷಣ ಹೇಳಿಕೊಡುತ್ತಾನೆ. ಹಾಗಾಗಿ ನಾವು ಈ ಮೂವರನ್ನು ಎಂದೂ ಅವಮಾನಿಸಬಾರದು. ಇವರಿಗೆ ಸಮನಾದವರು ಯಾರೂ ಇಲ್ಲವೆಂದು ಹೇಳುತ್ತಾನೆ.
ಪವನಪುತ್ರ ಹನುಮಾನ್ ಬಳಿ ಗಧೆ ಹೇಗೆ ಬಂತು..? ಅದನ್ನು ಕೊಟ್ಟಿದ್ದು ಯಾರು…?
ಇನ್ನು ಪುರಂದರದಾಸರು ಕೂಡ ಈ ಬಗ್ಗೆ ಹೇಳಿದ್ದು, ಹೆತ್ತ ತಂದೆ ತಾಯಿಗಳ ಚಿತ್ತವ ನೋಯಿಸಿ, ಅನ್ನದಾನವ ಮಾಡಿ ಫಲವೇನು ಎಂದಿದ್ದಾರೆ. ಅಂದರೆ, ನೀವು ತಂದೆ ತಾಯಿಯ ಮನಸ್ಸನ್ನು ನೋಯಿಸಿ, ಹೊರಗಿನವರಿಗೆ ಒಳ್ಳೆಯದನ್ನು ಮಾಡಿದರೆ, ಯಾವುದೇ ಪ್ರಯೋಜನವಿಲ್ಲ ಎಂಬುದೇ ಇದರ ಅರ್ಥ. ಇನ್ನು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದಿದ್ದಾರೆ. ಈ ಮೂಲಕ ತಂದೆ, ತಾಯಿ, ಗುರುಗಳನ್ನು ಗೌರವಿಸುವನು ಎಂದಿಗೂ ಶ್ರೇಷ್ಠ ವ್ಯಕ್ತಿಯಾಗುತ್ತಾನೆಂದು ಹೇಳಲಾಗಿದೆ.