Thursday, February 6, 2025

Latest Posts

ವಾಹನ ಬಳಸುವ ಬದಲು ನಡೆಯಿರಿ.. ನಡೆದು ಈ ಉಪಯೋಗ ಪಡೆಯಿರಿ…

- Advertisement -

ಮೊದಲೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಿರಲಿಲ್ಲ. ಬಸ್‌ಗಳ ಸಂಖ್ಯೆ ಕೂಡ ತೀರಾ ಕಡಿಮೆ ಇತ್ತು. ಹಾಗಾಗಿ ಜನ ನಡೆದೇ ತಮ್ಮ ಸ್ಥಾನ ತಲುಪುತ್ತಿದ್ದರು. ಹಾಗಾಗಿ ಹಿಂದಿನವರು ಗಟ್ಟಿಮುಟ್ಟಾಗಿದ್ದರು. ಸ್ವಾತಂತ್ರ ಕಾಲದಲ್ಲಿ ಜನಿಸಿದವರು ಈಗಲೂ ಕೂಡ ಬದುಕಿದ್ದಾರೆ. ಅದಕ್ಕೆ ಕಾರಣ, ಅವರು ಜೀವಿಸುತ್ತಿದ್ದ ರೀತಿ. ಕಿಲೋಮೀಟರ್‌ಗಟ್ಟಲೆ ಕಾಲ್ನಡಿಗೆ, ಉತ್ತಮ ಆಹಾರವೇ ಅವರ ಈ ಶಕ್ತಿಯ ಗುಟ್ಟಾಗಿತ್ತು.

ಆದ್ರೆ ಈಗ ಒಂದು ಮನೆಯಲ್ಲಿ ನಾಲ್ಕರಿಂದ 5 ವಾಹನಗಳಿರುತ್ತದೆ. ಅಪ್ಪಂಗೊಂದು, ಅಮ್ಮಂಗೊಂದು, ಅಣ್ಣಂಗೊಂದು, ತಂಗಿಗೊಂದು ಹೀಗೆ ನಾಲ್ಕೈದು ಸ್ಕೂಟರ್‌ಗಳಿರುತ್ತದೆ. ಹಾಗಾಗಿ ಇಂದಿನ ಪೀಳಿಗೆಯವರು ನಡಿಯುವುದನ್ನೇ ಮರೆತಿದ್ದಾರೆ. ಇನ್ನು ಮೊಬೈಲ್‌ನಲ್ಲಿ ಕ್ಯಾಬ್, ಆಟೋ ಬುಕ್ ಮಾಡಬಹುದು. ಇಂಥ ಫೆಸಿಲಿಟೀಸ್ ಇರುವ ಕಾರಣಕ್ಕೆ ನಡಿಗೆ ಕಡಿಮೆಯಾಗಿ, ಅನಾರೋಗ್ಯ ಹೆಚ್ಚಾಗುತ್ತಿದೆ. ಹಾಗಾಗಿ ಇಂದು ನಾವು ನಡೆದರೆ ಅದರಿಂದಾಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ.

ಪ್ರಪಂಚದ ಅತೀ ಉತ್ತಮ ಮತ್ತು ಅತೀ ಸುಲಭದ ವ್ಯಾಯಾಮ ಅಂದ್ರೆ ನಡಿಗೆ. ನೀವು ಯಾವುದೇ ವಯಸ್ಸಿನವರಾಗಿರಿ ಅಥವಾ ಯಾವುದೇ ಸ್ಥಿತಿಯಲ್ಲಿ, ನಿಮಗೆ ನಡಿಯಲು ಸಾಧ್ಯವಾದಲ್ಲಿ ನೀವು ಪ್ರತಿದಿನ 20 ನಿಮಿಷವಾದ್ರೂ ನಡಿಯಬೇಕು. ಯಾಕಂದ್ರೆ ನೀವು 20 ನಿಮಿಷ ನಡೆದ್ರೆ ನಿಮ್ಮ ಆರೋಗ್ಯ ಸ್ಥಿತಿ ಅತ್ಯುತ್ತಮವಾಗಿರುತ್ತದೆ. ನೀವು ಹಲವು ರೋಗ ರುಜಿನಗಳಿಂದ ಮುಕ್ತಿ ಹೊಂದುವಿರಿ. ಸಂಧಿವಾತ, ಕೈ ಕಾಲು ನೋವು, ಅಜೀರ್ಣ ಸಮಸ್ಯೆ ಹೀಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದಲ್ಲಿ, ಅದಕ್ಕೆಲ್ಲ ಪರಿಹಾರ ಸಿಗುತ್ತದೆ.

ಇನ್ನು ನೀವು ಪ್ರತಿದಿನ ನಡೆಯುವುದರಿಂದ ನಿಮ್ಮ ಮೆದುಳಿನ ಮೇಲೂ ಇದು ಉತ್ತಮ ಪರಿಣಾಮ ಬೀರುತ್ತದೆ. ನಿಮ್ಮ ಬುದ್ಧಿಶಕ್ತಿ ಚುರುಕಾಗುತ್ತದೆ. ಅಲ್ಲದೇ, ನಿಮ್ಮ ತೂಕ ಕಡಿಮೆಯಾಗುತ್ತದೆ. ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದ್ರೆ, ಅದು ಕೂಡ ಕಡಿಮೆಯಾಗುತ್ತದೆ. ಅಲ್ಲದೇ ನೀವು ಪ್ರತಿದಿನ ವಾಕಿಂಗ್ ಮಾಡಿದ್ರೆ, ನೀವು ಚೈತನ್ಯದಾಯಕವಾಗಿರ್ತೀರಾ. ನಿಮ್ಮಲ್ಲಿ ಕೆಲಸ ಮಾಡುವ ಸ್ಪೂರ್ತಿ ಬರುತ್ತದೆ.

ಇನ್ನು ನಿಮ್ಮ ಹೃದಯದ ಆರೋಗ್ಯ ಕೂಡ ನಡಿಗೆಯಿಂದ ಸುಧಾರಿಸುತ್ತದೆ. ಆದ್ರೆ, ಸಾಧ್ಯವಾಗುವಷ್ಟು ಅಷ್ಟೇ ನಡೆಯಿರಿ. ಅಗತ್ಯಕ್ಕಿಂತ ಹೆಚ್ಚು ನಡೆದ್ರೆ, ಹೃದಯದ ಸಮಸ್ಯೆಗೆ ಪರಿಹಾರ ಸಿಗುವ ಬದಲು, ಹೃದಯದ ಆರೋಗ್ಯ ಹದಗೆಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಅಷ್ಟೇ ನಡೆಯಿರಿ. ನಡಿಗೆಯಿಂದ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಮುಖ್ಯವಾದ ವಿಚಾರ ಅಂದ್ರೆ, ನಿಮಗೆ ಅತೀಯಾದ ಕಾಲುನೋವಿದ್ದು, ಅಥವಾ ನೀವು ಕೊಂಚ ನಡೆದ್ರು ನಿಮಗೆ ಉಸಿರಾಟದ ಸಮಸ್ಯೆಯಾಗುತ್ತದೆ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ಖಂಡಿತ ವಿಚಾರಿಸಿ, ಪರಿಹಾರ ಕಂಡುಕೊಳ್ಳಿ. ಇನ್ನು 20 ನಿಮಿಷ ನಡೆಯಲಾಗುವುದಿಲ್ಲ, ಬರೀ 10 ನಿಮಿಷ ನಡೆಯಬಲ್ಲೆ ಎಂದಾದಲ್ಲಿ, 10 ನಿಮಿಷವೇ ನಡೆಯಿರಿ. ಆದ್ರೆ ದಿನಗಳೆದಂತೆ, ಕೊಂಚ ಕೊಂಚ ಹೆಚ್ಚು ನಡೆಯುವ ಪ್ರಯತ್ನ ಮಾಡಿ, ಹೀಗೆ ಮಾಡಿ ಮಾಡಿ 20 ನಿಮಿಷ ನಡೆಯುವುದು ಸುಲಭ ಎನ್ನಿಸುತ್ತದೆ.

- Advertisement -

Latest Posts

Don't Miss