ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅದರಲ್ಲಿ ಕೆಲವರು ಕೆಲವೊಂದು ಪದ್ಧತಿಗಳನ್ನ ಫಾಲೋ ಮಾಡ್ತಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಧಾರ್ಮಿಕ ಪದ್ಧತಿಗಳಿದೆ. ಆದ್ರೆ ಪ್ರತೀ ಹಿಂದೂಗಳು ಕೂಡ ಮನೆಯಲ್ಲಿ ಯಾರದ್ದಾದರೂ ಸಾವಾದರೆ, ಹನ್ನೆರಡನೆಯ ದಿನ ಮತ್ತು ಹದಿಮೂರನೇಯ ದಿನ ತಿಥಿ ಮಾಡಿ, ಊಟ ಹಾಕಿಸುತ್ತಾರೆ. ಹಾಗಾದ್ರೆ ತಿಥಿ ಮಾಡುವುದ್ಯಾಕೆ..? ಇದರ ಹಿಂದಿರುವ ಕಾರಣವೇನು..? ಅಂತಾ ತಿಳಿಯೋಣ ಬನ್ನಿ..
ಪುರಿ ಜಗನ್ನಾಥದಲ್ಲಿ ದೇವರ ಮೂರ್ತಿಗೇಕೆ ಕೈ ಇಲ್ಲ..?
ಹಿಂದೂ ಧರ್ಮದ ನಂಬಿಕೆಯ ಪ್ರಕಾರ, ಮನುಷ್ಯ ಸತ್ತ ಮೇಲೆ ಅವನನ್ನು ಯಮದೂತರು ಬಂದು ಕರೆದುಕೊಂಡು ಹೋಗುತ್ತಾರೆ. ನಂತರ ಮತ್ತೆ ಅವನ ಶವದ ಬಳಿಯೇ ಆ ಆತ್ಮ ಬರುತ್ತದೆ. ಮತ್ತು ತನ್ನ ಬಂಧು ಮಿತ್ರರು ಅಳುವುದನ್ನ ಕಂಡು, ಅದು ದುಃಖ ಪಡುತ್ತದೆ. ಆ ಆತ್ಮಕ್ಕೆ ಮರಳಿ ಯಮ ಲೋಕಕ್ಕೆ ಹೋಗಲು ಶಕ್ತಿ ಇರುವುದಿಲ್ಲ. ಆ ಶಕ್ತಿ ಮರುಕಳಿಸಬೇಕು ಅಂದ್ರೆ, ಆ ಮನೆಯವರು ಕಾರ್ಯ ಮಾಡಬೇಕು. ಪ್ರತಿದಿನ ಮನೆಯಲ್ಲಿ ಮಡಿ ಮೈಲಿಗೆ ಪಾಲಿಸಬೇಕು. ಪದ್ಧತಿ ಪ್ರಕಾರ ನಡೆದುಕೊಳ್ಳಬೇಕು. ನಂತರ ತಿಥಿ ಮಾಡಿ, ಆ ಆತ್ಮಕ್ಕೆ ಶಕ್ತಿ ಬರುವಂತೆ ಮಾಡಲಾಗತ್ತೆ. ನಂತರ ಅದು ಮರಳಿ ಯಮ ಲೋಕಕ್ಕೆ ಹೋಗುತ್ತದೆ ಎಂದು ಹೇಳಲಾಗಿದೆ.
ಹಾಗೆ ಹೋಗುವಾಗ ಅದರ ಶರೀರ ನಿರ್ಮಾಣವಾಗುತ್ತದೆ. 11 ದಿನಗಳ ಕಾರ್ಯದಿಂದ ದೇಹ ನಿರ್ಮಾಣವಾಗುತ್ತದೆ. 12ನೇ ದಿನ ಚರ್ಮ ನಿರ್ಮಾಣವಾಗುತ್ತದೆ. ಮತ್ತು 13ನೇ ದಿನ ಸಂಪೂರ್ಣವಾಗಿ ಶರೀರ ನಿರ್ಮಾಣವಾಗುತ್ತದೆ. ಆ ಆತ್ಮಕ್ಕೆ ಮುಕ್ತಿ ಸಿಕ್ಕ ಮೇಲೆ ಅದು, ಮತ್ತೊಬ್ಬರ ಗರ್ಭ ಸೇರಲು ಸಿದ್ಧವಾಗಿರುತ್ತದೆ. ಮನೆ ಜನರು ಸರಿಯಾದ ರೀತಿಯಲ್ಲಿ ಅಂತ್ಯಕ್ರಿಯೆ, ತಿಥಿ, ವೈಕುಂಠ ಆರಾಧನೆ, ದಾನ ಧರ್ಮ ಮಾಡಿದ್ದಲ್ಲಿ, ಆ ಆತ್ಮ ಉತ್ತಮ ಗರ್ಭದಲ್ಲಿ ಸ್ಥಳ ಸಿಗುತ್ತದೆ. ಮತ್ತು ಒಂದು ಒಳ್ಳೆಯ ಕುಟುಂಬದಲ್ಲಿ ಆ ಮಗು ಜನಿಸುತ್ತದೆ ಅನ್ನೋ ನಂಬಿಕೆ ಇದೆ.
ಹಾಗಾಗಿಯೇ ಅಂತ್ಯಸಂಸ್ಕಾರವನ್ನ ಪದ್ಧತಿ ಪ್ರಕಾರವಾಗಿ ಮಾಡಬೇಕು. ಸರಿಯಾಗಿ ಕ್ರಿಯೆ ಹಿಡಿಯಬೇಕು. ಪಿಂಡ ಪ್ರಧಾನ ಸರಿಯಾಗಿ ನಡೆಯಬೇಕು. ದಾನ ಧರ್ಮ ಮಾಡಬೇಕು ಅಂತಾ ಹೇಳಲಾಗುತ್ತದೆ. ಕೆಲವರು ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ, ಅವರಿಗೆ ಉತ್ತಮ ಕುಟುಂಬದಲ್ಲಿ ಜನ್ಮ ಸಿಗಲಿ ಎಂದು ಗರುಡ ಪುರಾಣವನ್ನ ಕೂಡ ಪಠಣ ಮಾಡಿಸುತ್ತಾರೆ.