ನಮ್ಮ ತ್ವಚೆ ಚೆನ್ನಾಗಿರಬೇಕು. ಕ್ಲೀನ್ ಆಗಿರಬೇಕು. ಒಂದು ಮೊಡವೆಯೂ ಬಾರದಂತೆ ನೋಡಿಕೊಳ್ಳಬೇಕು ಅನ್ನೋದು ಎಲ್ಲ ಹುಡುಗಿಯರ ಆಸೆ ಇರತ್ತೆ. ಆದ್ರೆ ನಾವು ತಿನ್ನೋ ಆಹಾರದಿಂದಲೋ, ಅಥವಾ ನಾವು ಬಳಸೋ ಪ್ರಾಡಕ್ಟ್‌ಗಳಿಂದಲೋ, ನಾವು ಕೇರ್ ಲೆಸ್ ಮಾಡುವುದರಿಂದಲೋ, ನಮ್ಮ ತ್ವಚೆ ಮೇಲೆ ಗುಳ್ಳೆ, ಮೊಡವೆಗಳಾಗುತ್ತದೆ. ಹಾಗಾದ್ರೆ ನಾವು ಮಾಡುವ 5 ಸ್ಕಿನ್‌ಕೇರ್ ತಪ್ಪುಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮನೆಯಲ್ಲೇ ಟೇಸ್ಟಿಯಾಗಿ ನೀವೂ ತಯಾರಿಸಬಹುದು ತವಾ ಪುಲಾವ್..
ಮೊದಲನೇಯ ಮಿಸ್ಟೇಕ್, ಮೇಕಪ್ ಹಾಕಿಕೊಂಡೇ ಮಲಗೋದು. ನೀವು ಎಲ್ಲಾದ್ರೂ ಹೊರಗೆ ಹೋಗಿ ಬರ್ತೀರಾ. ಹೊರಗೆ ಹೋಗುವಾಗ ಮೇಕಪ್ ಹಾಕಿರ್ತೀರಾ. ಆದ್ರೆ ಮನೆಗೆ ಬಂದ ಬಳಿಕ ಅದನ್ನ ಕ್ಲೀನ್ ಮಾಡಿಕೊಳ್ಳದೇ, ಸುಮ್ಮನೆ ಮುಖ ತೊಳೆದು ಮಲಗಿಬಿಡ್ತೀರಾ. ಇದು ತುಂಬಾ ಹುಡುಗಿಯರು ಮಾಡುವ ಮಿಸ್ಟೇಕ್.
ನೀವು ಮೇಕಪ್ ಹಾಕಿದಾಗ, ಅದನ್ನ ಸರಿಯಾಗಿ ಕ್ಲೀನ್ ಮಾಡಲೇಬೇಕು. ಇಲ್ಲವಾದಲ್ಲಿ ನಿಮಗೆ ಚರ್ಮರೋಗ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ದೊಡ್ಡ ತುಂಡು ಹತ್ತಿಗೆ ನೀರು ಚುಮುಕಿಸಿ, ಅದಕ್ಕೆ ಮಾಯ್ಸಶ್ಚರಾಯ್ಸಿಂಗ್ ಕ್ರೀಮ್ ಅಪ್ಲೈ ಮಾಡಿ. ಅದರಿಂದ ನಿಮ್ಮ ಮೇಕಪ್ ರಿಮೂವ್ ಮಾಡಿ. ನಂತರ ಚೆನ್ನಾಗಿ ಮುಖ ತೊಳೆದು, ಮತ್ತೆ ನಿಮ್ಮ ಮುಖಕ್ಕೆ ಸೂಟ್ ಆಗುವಂಥ ಮಾಯ್ಸಶ್ಚರಾಯ್ಸಿಂಗ್ ಕ್ರೀಮ್ ಅಥವಾ ಎಣ್ಣೆಯಿಂದ ಮಸಾಜ್ ಮಾಡಿ ಮಲಗಿ.
ನಾರ್ತ್ ಶೈಲಿಯ ಬೈಂಗನ್ ಭರ್ತಾ ರೆಸಿಪಿ..
ಎರಡನೇಯ ಮಿಸ್ಟೇಕ್, ನೀವು ವ್ಯಾಯಾಮ ಮಾಡದಿರುವುದು. ಯೋಗ ಮಾಡುವವರ ಅಥವಾ ಪ್ರತಿದಿನ ವಾಕಿಂಗ್ ಮಾಡುವವರ ಸ್ಕಿನ್ ನೋಡಿ, ಅದು ಕ್ಲೀನ್ ಆಗಿ, ಚೆಂದವಾಗಿರುತ್ತದೆ. ಆದ್ರೆ ವಾಕಿಂಗ್ ವ್ಯಾಯಾಮ ಮಾಡದಿರುವವರ ತ್ವಚೆ ಅಷ್ಟು ಚೆಂದವಿರುವುದಿಲ್ಲ. ಯಾಕಂದ್ರೆ ವ್ಯಾಯಾಮ ಮಾಡುವುದರಿಂದ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಬೆವರು ಬರುತ್ತದೆ. ಇದರಿಂದ ತ್ವಚೆ ಉತ್ತಮವಾಗಿರುತ್ತದೆ. ಹಾಗಾಗಿ ವ್ಯಾಯಾಮ, ವಾಕಿಂಗ್, ಯೋಗ ಮಾಡಿದ್ರೆ, ನಿಮ್ಮ ತ್ವಚೆಯೂ ಸುಂದರವಾಗುತ್ತದೆ.
ಮೂರನೇಯ ಮಿಸ್ಟೇಕ್, ನೀವು ಬಿಸಿಲಿಗೆ ಹೋಗುವಾಗ ನಿಮ್ಮ ತ್ವಚೆಯ ಆರೈಕೆಯನ್ನು ಸರಿಯಾಗಿ ಮಾಡದಿರುವುದು. ಮೊದಲಿನ ಕಾಲದಲ್ಲಿ ಬಿಸಿಲಿಗೆ ಹೋಗುವಾಗ, ತೆಂಗಿನ ಎಣ್ಣೆಯಿಂದ ಲೈಟ್ ಆಗಿ ಮಸಾಜ್ ಮಾಡಿಕೊಂಡು ಹೋಗುತ್ತಿದ್ದರು. ಇದೇ ಬಿಸಿಲಿನಿಂದ ರಕ್ಷಣೆ ನೀಡುತ್ತಿತ್ತು. ಆದ್ರೆ ಈಗ ಸನ್‌ಸ್ಕ್ರೀಮ್ ಲೋಶನ್ ಬಂದಿದೆ. ನಿಮ್ಮ ತ್ವಚೆಗೆ ಸ್ಯೂಟ್ ಆಗುವ ಲೋಶನ್ ನೀವು ಬಳಸಬಹುದು.
ಜೀವನದ ಬಗ್ಗೆ ಹೆಚ್ಚು ಯೋಚನೆ ಮಾಡೋದನ್ನ ನಿಲ್ಲಿಸೋದು ಹೇಗೆ..?
ನಾಲ್ಕನೇಯ ಮಿಸ್ಟೇಕ್, ಆರೋಗ್ಯದ ಬಗ್ಗೆ ಗಮನ ಕೊಡದಿರುವುದು. ಕೆಲವರು ತಮ್ಮ ತ್ವಚೆ ಉತ್ತಮವಾಗಿರಲಿ ಎಂದು ಮುಖಕ್ಕಷ್ಟೇ ಕಾಳಜಿ ಮಾಡುತ್ತಾರೆ. ಆದ್ರೆ ನೀವು ನಿಮ್ಮ ದೇಹವನ್ನ ಆರೋಗ್ಯಕರವಾಗಿಡದಿದ್ದರೆ, ನಿಮ್ಮ ಮುಖ ಸುಂದರವಾಗಲು ಸಾಧ್ಯವಿಲ್ಲ. ಹಾಗಾಗಿ ಹೆಚ್ಚೆಚ್ಚು ತಾಜಾ ಹಸಿ ಹಣ್ಣು, ತರಕಾರಿ ತಿನ್ನುವುದು ಉತ್ತಮ. ಕರಿದ, ಮಸಾಲೆಭರಿತವಾದ ಪದಾರ್ಥ ಸೇವಿಸುವುದನ್ನು ಕಡಿಮೆ ಮಾಡಿ. ಚೆನ್ನಾಗಿ ನೀರು ಕುಡಿಯಿರಿ.
ಐದನೇಯ ಮಿಸ್ಟೇಕ್, ಸಿಕ್ಕ ಸಿಕ್ಕ ಪ್ರಾಡೆಕ್ಟ್‌ಗಳನ್ನ ಬಳಸೋದು, ಪದೇ ಪದೇ ಬ್ಯೂಟಿಪಾರ್ಲರ್ಗೆ ಹೋಗೋದು. ನಿಮ್ಮ ಸೌಂದರ್ಯ ಕಾಪಾಡಿಕೊಳ್ಳಲು ನೀವು ಪದೇ ಪದೇ ಬ್ಯೂಟಿಪಾರ್ಲರ್ ಮೊರೆ ಹೊಗೋದು ತಪ್ಪು. ಇನ್ನು ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಪ್ರಾಡಕ್ಟ್‌ಗಳನ್ನ ಬಳಸುತ್ತಿರಬೇಡಿ. ನಿಮ್ಮ ಮುಖಕ್ಕೆ ಸ್ಯೂಟ್ ಆಗುವ ಕ್ರೀಮ್, ಲೋಶನ್, ಜೆಲ್, ಶ್ಯಾಂಪೂವನ್ನೇ ಬಳಸಿ.