ಹಿಂದೂ ಧರ್ಮದಲ್ಲಿ ಷೋಡಶ ಶಾಸ್ತ್ರಗಳಿದೆ. ಅಂದ್ರೆ 16 ಶಾಸ್ತ್ರಗಳು. ಆ 16 ಶಾಸ್ತ್ರಗಳಲ್ಲಿ ಸೀಮಂತ ಶಾಸ್ತ್ರ ಕೂಡ ಒಂದು. ಗರ್ಭದಲ್ಲಿರುವ ಮಗುವಿಗೆ 7 ತಿಂಗಳು ತುಂಬಿದ ಬಳಿಕ, ಸೀಮಂತ ಶಾಸ್ತ್ರವನ್ನ ಮಾಡಲಾಗತ್ತೆ. ಸೀಮಂತವನ್ನು ಪದ್ಧತಿ ಪ್ರಕಾರ ಮಾಡುವುದು ತುಂಬಾ ಮುಖ್ಯ. ಹಾಗಾದ್ರೆ ಸೀಮಂತ ಶಾಸ್ತ್ರವನ್ನು ಯಾಕೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಗರ್ಭಿಣಿಗೆ 7 ತಿಂಗಳು ತುಂಬುವ ಹೊತ್ತಿಗೆ, ಮಗುವಿನ ದೇಹ ಸಂಪೂರ್ಣವಾಗಿ ಬೆಳವಣಿಗೆಯಾಗಿರುತ್ತದೆ. ಈ ವೇಳೆ ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಹಾಗಾಗಿ ಈ ವೇಳೆ ಹೇಳುವ ಶ್ಲೋಕ, ಪುಸ್ತಕ ಪಠಣಗಳೆಲ್ಲವೂ ಮಗುವಿಗೆ ಕೇಳಿಸುತ್ತದೆ. ಈ ವೇಳೆಯಿಂದಲೇ ತಂದೆ ತಾಯಿ ಒಳ್ಳೆಯದನ್ನೇ ಮಾತನಾಡಬೇಕು. ಜಗಳವಾಡಬಾರದು, ಕೋಪ ಮಾಡಿಕೊಳ್ಳಬಾರದು ಅಂತಾ ಹೇಳುತ್ತಾರೆ. ಯಾಕಂದ್ರೆ ಆ ಮಗುವಿಗೂ ಅದೇ ಬುದ್ಧಿ ಬರುತ್ತದೆ. ಹಾಗಾಗಿ ಈ ಸಮಯದಲ್ಲಿ ಶಾಂತಿಯಿಂದ ಇರುವುದು. ಒಳ್ಳೆಯ ಪುಸ್ತಕಗಳನ್ನು ಓದುವುದು ತುಂಬಾ ಮುಖ್ಯ.
ಸೀಮಂತ ಶಾಸ್ತ್ರದಲ್ಲಿ ಗರ್ಭಿಣಿಯಾದವಳು ಪರಿಸರದಿಂದ ಕೆಲ ಉತ್ತಮ ಅಂಶಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಲಾಗಿದೆ. ಹಾಗಾಗಿ ಕೆಲವು ಕಡೆ ಗರ್ಭಿಣಿಯಾದವಳ ತಲೆಗೆ ಕೆಲವು ಸೊಪ್ಪು, ಎಲೆ, ಹೂವನ್ನೆಲ್ಲ ಕಟ್ಟಲಾಗತ್ತೆ. ಇದರಿಂದ ಮಗುವಿಗೆ ಪರಿಸರದ ಉತ್ತಮ ಅಂಶ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಮತ್ತು ಮಗುವಿನ ಆರೋಗ್ಯವೂ ಅಭಿವೃದ್ಧಿಯಾಗುತ್ತದೆ.
ಇನ್ನು ಈ ಸಮಯದಲ್ಲಿ ಹೋಮ ಹವನಗಳನ್ನು ಮಾಡಲಾಗುತ್ತದೆ. ಗರ್ಭಿಣಿ ಈ ಹೋಮದ ಹೊಗೆ ಸೇವಿಸಿದಾಗ, ಆಕೆಯ ಆರೋಗ್ಯದ ಜೊತೆ, ಮಗುವಿನ ಆರೋಗ್ಯವೂ ಉತ್ತಮವಾಗಿರುತ್ತದೆ. ತುಪ್ಪ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಒಣಕೊಬ್ಬರಿ, ಬೆಲ್ಲ ಸೇರಿಸಿ ಮಾಡಿದ ಉಂಡೆಯನ್ನ ಗರ್ಭಿಣಿಗೆ ತಿನ್ನಲು ಕೊಡಲಾಗತ್ತೆ. ಇದನ್ನು ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಮಗುವಿನ ಬೆಳವಣಿಗೆ ಚೆನ್ನಾಗಿ ಆಗುತ್ತದೆ.
ಇಂಥ ಚಟ ನಿಮಗಿದ್ದರೆ, ಲಕ್ಷ್ಮೀ ನಿಮ್ಮ ಮನೆಗೆ ಬರಲು ಸಾಧ್ಯವೇ ಇಲ್ಲ.. ಭಾಗ 1
ಇಂಥ ಚಟ ನಿಮಗಿದ್ದರೆ, ಲಕ್ಷ್ಮೀ ನಿಮ್ಮ ಮನೆಗೆ ಬರಲು ಸಾಧ್ಯವೇ ಇಲ್ಲ.. ಭಾಗ 2