Saturday, April 19, 2025

Latest Posts

ಸಿ ಸೆಕ್ಷನ್ ಆದ ಬಳಿಕ ಏನು ಮಾಡಬೇಕು..? ಏನು ಮಾಡಬಾರದು..?- ಭಾಗ 1

- Advertisement -

ಓರ್ವ ಹೆಣ್ಣಿಗೆ ತಾಯಿಯಾಗುವುದಕ್ಕಿಂತ ಸೌಭಾಗ್ಯ ಮತ್ತೊಂದಿಲ್ಲ. ಈ ಖುಷಿಯಲ್ಲಿರುವಾಗ, ಆರೋಗ್ಯಕ್ಕೆ ಸಂಬಂಧಪಟ್ಟ ಹಲವು ಸಮಸ್ಯೆಗಳನ್ನು ಹೆಣ್ಣು ಮಕ್ಕಳು ಅನುಭವಿಸಬೇಕಾಗುತ್ತದೆ. ಅದರಲ್ಲಿ ಒಂದು ಸಿಸೆರಿನ್. ಹಾಗಂತ ಎಲ್ಲರಿಗೂ ಸಿಸೇರಿನ್ ಆಗಿಯೇ ಮಗುವಾಗುವುದಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರಿಗೆ ಸಿ ಸೆಕ್ಷನ್ ಡೆಲಿವರಿನೇ ಆಗೋದು. ಅದಕ್ಕೆ ಹಲವು ಕಾರಣಗಳಿದೆ. ಹಾಗಾಗಿ ನಾವಿಂದು ಸಿ ಸೆಕ್ಷನ್ ಆದಮೇಲೆ ಹೆಣ್ಣು ಮಕ್ಕಳು ಯಾವ ಕೆಲಸ ಮಾಡಬೇಕು ಮತ್ತು ಯಾವ ಕೆಲಸ ಮಾಡಬಾರದು ಅನ್ನೋ ಬಗ್ಗೆ ವಿವರಿಸಲಿದ್ದೇವೆ..

ಇವುಗಳನ್ನು ತಿಂದ ನಂತರ ನೀರು ಕುಡಿಯಲೇಬೇಡಿ.. ಕುಡಿದರೆ ತುಂಬಾ ಅಪಾಯ..!

ಏನು ಮಾಡಬೇಕು ಅನ್ನೋ ಬಗ್ಗೆ ಹೇಳುವುದಾದರೆ, ಮಗುವಾಗಿ 2 ತಿಂಗಳಾದ್ರೂ ಸರಿಯಾಗಿ ರೆಸ್ಟ್ ತೆಗೆದುಕೊಳ್ಳಬೇಕು. ಸಿಸೆರಿನ್ ಮಾಡುವಾಗ, ಬೆನ್ನು ಮೂಳೆಗೆ ಅನಸ್ತೇಶಿಯಾ ಕೊಡುವ ಕಾರಣಕ್ಕೆ, ಅದು ವೀಕ್ ಆಗಿರುತ್ತದೆ. ಹಾಗಾಗಿ ಅದು ಸರಿಯಾಗುವ ತನಕ ಬಾಣಂತಿಯರು ಸರಿಯಾಗಿ ವಿಶ್ರಮಿಸಬೇಕು. ಇಲ್ಲವಾದಲ್ಲಿ ಜೀವನಪೂರ್ತಿ ಬೆನ್ನು ನೋವಿನಿಂದ ಒದ್ದಾಡಬೇಕಾಗುತ್ತದೆ.

ಇನ್ನು 1 ತಿಂಗಳಾದ್ರೂ ಸಪ್ಪೆ ಆಹಾರವನ್ನ ತಿನ್ನಬೇಕು. ಯಾವುದೇ ಕಾರಣಕ್ಕೂ ಜಂಕ್ ಫುಡ್, ಮಸಾಲೆಯುಕ್ತ ಪದಾರ್ಥ, ಕರಿದ ಪದಾರ್ಥ, ಖಾರಾ ಪದಾರ್ಥಗಳನ್ನ ತಿನ್ನಬಾರದು. ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಇವೆಲ್ಲದರಿಂದ ದೂರವಿರಿ. ಸಪ್ಪೆ ಬೇಳೆ, ಕಾಳಿನ ಸಾರು, ಅನ್ನ ಅಥವಾ ಗಂಜಿ ಸೇವಿಸಿ. ಕಾಫಿ, ಟೀ, ಐಸ್‌ಕ್ರೀಮ್, ಐಸ್ ಸೇರಿಸಿರುವ ಜ್ಯೂಸ್ ಇದ್ಯಾವುದನ್ನೂ ಸೇವಿಸಬೇಡಿ.

40 ವರ್ಷ ದಾಟಿದ ಬಳಿಕ ಮಹಿಳೆಯರು ಅನುಸರಿಸಬೇಕಾದ ಟಿಪ್ಸ್‌ಗಳಿವು..

ಉಷ್ಣ ಪದಾರ್ಥ ಸೇವಿಸುವುದರಿಂದ ತಾಯಿ ಮಗು ಇಬ್ಬರಿಗೂ ಆರೋಗ್ಯ ಸಮಸ್ಯೆ ಬರುತ್ತದೆ. ಇನ್ನು ಯಾವ ಆಹಾರ ಸೇವಿಸಬೇಕು ಅಂತಾ ಹೇಳೋದಾದ್ರೆ, ಬೆಚ್ಚಗಿನ ಹಸುವಿನ ಹಾಲು ಕುಡಿದರೆ, ಆರೋಗ್ಯಕ್ಕೆ ತುಂಬಾ ಉತ್ತಮ. ಚೆನ್ನಾಗಿ ಬಿಸಿ ನೀರು ಕುಡಿಯಿರಿ. ಆಗ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಸ್ತನಪಾನ ಮಾಡಿಸಲು, ಹಾಲು ಹೆಚ್ಚಾಗಲು ಇದು ಸಹಾಯ ಮಾಡುತ್ತದೆ. ಸಿ ಸೆಕ್ಷನ್ ಡಿಲೆವರಿಯಾದ ಮೇಲೆ ಏನು ಮಾಡಬಾರದು ಅನ್ನೋ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss